Tamilnadu election 2026 : ಆಸೆಯಿಂದ ಮತ ಚಲಾಯಿಸಿದ ಮತದಾರರಿಗೆ 7 ಟನ್‌ ಚಿನ್ನ ಕೊಡ್ತಾರಾ ವಿಜಯ್..?

ದಳಪತಿ ವಿಜಯ್​ ತಮಿಳುನಾಡು ರಾಜಕಾರಣವನ್ನೇ ಬುಡಮೇಲು ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನ ಸಾಧಿಸಿದ್ದಾರೆ. ಪ್ರಬಲ ಪ್ರಾದೇಶಿಕ ಪಕ್ಷಗಳೇ ಕೇವಲ 2 ವರ್ಷಗಳ ಹಿಂದೆ ಸ್ಥಾಪನೆಗೊಂಡ ಟಿವಿಕೆ ಪಕ್ಷದ ಎದುರು ಮಂಡಿಯೂರಿವೆ.

Tamilnadu election 2026 : ದಳಪತಿ ವಿಜಯ್​ ತಮಿಳುನಾಡು ರಾಜಕಾರಣವನ್ನೇ ಬುಡಮೇಲು ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನ ಸಾಧಿಸಿದ್ದಾರೆ. ಪ್ರಬಲ ಪ್ರಾದೇಶಿಕ ಪಕ್ಷಗಳೇ ಕೇವಲ 2 ವರ್ಷಗಳ ಹಿಂದೆ ಸ್ಥಾಪನೆಗೊಂಡ ಟಿವಿಕೆ ಪಕ್ಷದ ಎದುರು ಮಂಡಿಯೂರಿವೆ.

108 ಸ್ಥಾನಗಳನ್ನು ಗೆದ್ದಿರುವ ಟಿವಿಕೆ ಉಳಿದ 10 ಸ್ಥಾನಕ್ಕಾಗಿ ಮೈತ್ರಿ ಮಾತುಕತೆ ನಡೆಸುತ್ತಿದೆ. ಈ ಎಲ್ಲದರ ನಡುವೆ ತಮಿಳುನಾಡಿನ ಜನತೆಗೆ ವಿಜಯ್​ ಇದೀಗ ಬರೋಬ್ಬರಿ 7 ಟನ್​ ಉಚಿತ ಚಿನ್ನ ಕೊಡಬೇಕಿದೆ.

ಹೌದು..! ಆಶ್ಚರ್ಯ ಎನಿಸಿದರೂ ಸತ್ಯ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಜಯ್​ ಪ್ರಣಾಳಿಕೆ ಘೋಷಿಸುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನೂ ಘೋಷಿಸಿದರು. ಆದರೆ ಈ ಗ್ಯಾರಂಟಿ ಯೋಜನೆಗಳು ಸಾಮಾನ್ಯದ್ದಾಗಿರಲಿಲ್ಲ.

ಮದುವೆಯಾಗುವ ಮಹಿಳೆಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ, ಜನಿಸುವ ಪ್ರತಿ ಹೆಣ್ಣು ಮಗುವಿಗೆ ಬಂಗಾರದ ಉಂಗುರ, ಯಜಮಾನಿಗೆ 2,500 ರೂಪಾಯಿ ನಗದು, ವರ್ಷಕ್ಕೆ 6 ಎಲ್‌ಪಿಜಿ ಸಿಲಿಂಡರ್ ಎಲ್ಲವೂ ಫ್ರೀ ಉಚಿತ ಎಂದು ಘೋಷಿಸಿದ್ದರು.

Also Read: ವಿಜಯ್-ಕಾಂಗ್ರೆಸ್ ದೋಸ್ತಿ: ಕಾವೇರಿ ವಿವಾದಕ್ಕೆ ಬೀಳುತ್ತಾ ಬ್ರೇಕ್? ಕನ್ನಡಿಗರಿಗೆ ಕಾದಿದೆ ಬಂಪರ್ ಸುದ್ದಿ!

ಇತ್ತೀಚಿನ ದಿನಗಳಲ್ಲಿ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದು ಟ್ರೆಂಡ್​ ಆಗ್ಬಿಟ್ಟಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಷ್ಟೇ ಹೇಳಿದರೂ ಕಿವಿಗೊಡದ ರಾಜಕೀಯ ಪಕ್ಷಗಳು ಅಧಿಕಾರಕ್ಕೇರುವ ಹಪಾಹಪಿಯಲ್ಲಿ ಬಾಯಿಗೆ ಬಂದ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿವೆ. ಈ ಮಾತಿಗೆ ವಿಜಯ್​ ಕೂಡ ಹೊರತಾಗಿಲ್ಲ.

ತಮಿಳುನಾಡಿನಲ್ಲಿ 3,60,09,064 ಮಂದಿ ಮಹಿಳೆಯರು ಇದ್ದಾರೆ ಎಂದು 2011ರ ಜನಗಣತಿಯ ಪ್ರಕಾರ ತಿಳಿದು ಬಂದಿದೆ. ಅವರ ಪೈಕಿ 8 ಲಕ್ಷಕ್ಕೂ ಅಧಿಕ ಮಂದಿ ಅವಿವಾಹಿತೆಯರು. ಈ ಜಣಗಣತಿ ನಡೆದು ಇದಾಗಲೇ 15 ವರ್ಷಗಳಾಗಿವೆ.

ಹೀಗಾಗಿ ಮಹಿಳೆಯರ ಸಂಖ್ಯೆ ಖಂಡಿತ ಹೆಚ್ಚಾಗಿರುತ್ತದೆ. 4 ಕೋಟಿ ಮಹಿಳೆಯರಿಗೆ ವಿಜಯ್​ 7 ಟನ್​ ಚಿನ್ನ ನೀಡಬೇಕಿದೆ. ಈ ಸವಾಲನ್ನು ವಿಜಯ್​ ಯಾವ ರೀತಿಯಲ್ಲಿ ನಿಭಾಯಿಸ್ತಾರೆ ಅನ್ನೊದೇ ಸದ್ಯದ ಯಕ್ಷ ಪ್ರಶ್ನೆಯಾಗಿದೆ.

Will Vijay give 7 tons of gold to voters who voted with enthusiasm

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories