ಇರಾನ್-ಇಸ್ರೇಲ್-ಅಮೆರಿಕ ಮಹಾಯುದ್ಧ: ಭಾರತಕ್ಕೆ ಕಾದಿದ್ಯಾ ಗಂಡಾಂತರ ?
Iran America israel war : ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸಿರುವ ಭೀಕರ ವೈಮಾನಿಕ ದಾಳಿ ಮತ್ತು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಹತ್ಯೆಯ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ (Middle East) ಮೂರನೇ ಮಹಾಯುದ್ಧದ ಕಾರ್ಮೋಡ ಕವಿದಿದೆ.
ಇರಾನ್ ಕೂಡ ಪ್ರತಿದಾಳಿ ಆರಂಭಿಸಿದ್ದು, ಅಮೆರಿಕದ ಮಿಲಿಟರಿ ನೆಲೆಗಳಿರುವ ಯುಎಇ, ಕತಾರ್ ಸೇರಿದಂತೆ ಗಲ್ಫ್ ರಾಷ್ಟ್ರಗಳು ಬೆಚ್ಚಿಬಿದ್ದಿವೆ. ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಈ ಯುದ್ಧಕ್ಕೂ ಭಾರತಕ್ಕೂ ಏನು ಸಂಬಂಧ? ಭಾರತ ಈ ಯುದ್ಧದಲ್ಲಿ ಸೇಫ್ ಆಗಿದ್ಯಾ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
iran America israel war : ಭಾರತಕ್ಕೆ ಎದುರಾಗುವ ಬಹುದೊಡ್ಡ ಆರ್ಥಿಕ ಸಂಕಷ್ಟಗಳೇನು ?
ಭೌಗೋಳಿಕವಾಗಿ ಯುದ್ಧಭೂಮಿಯಿಂದ ಭಾರತ ದೂರವಿದ್ದರೂ, ಆರ್ಥಿಕವಾಗಿ ಭಾರಿ ಬೆಲೆ ತೆರಬೇಕಾದ ಆತಂಕವಿದೆ. ಪ್ರಮುಖವಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ:
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಭೀತಿ:
ಭಾರತ ತನ್ನ ಕಚ್ಚಾ ತೈಲದ (Crude Oil) ಶೇ. 80ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ. 50ರಷ್ಟು ತೈಲವು ಇರಾನ್ ಮತ್ತು ಒಮಾನ್ ನಡುವಿನ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೂಲಕವೇ ಬರಬೇಕು. ಯುದ್ಧದ ಕಾರಣಕ್ಕೆ ಈ ಮಾರ್ಗ ಬಂದ್ ಆದರೆ ಅಥವಾ ಸಾಗಣೆ ವೆಚ್ಚ ಹೆಚ್ಚಾದರೆ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುವ ಅಪಾಯವಿದೆ.
ಚಿನ್ನದ ಬೆಲೆಯಲ್ಲಿ ಭಾರಿ ಸ್ಫೋಟ
ಯುದ್ಧದ ವಾತಾವರಣ ನಿರ್ಮಾಣವಾದಾಗೆಲ್ಲಾ ಹೂಡಿಕೆದಾರರು ಷೇರುಪೇಟೆ ಬಿಟ್ಟು, ಸುರಕ್ಷಿತ ಹೂಡಿಕೆಯಾದ ಚಿನ್ನದ ಮೊರೆ ಹೋಗುತ್ತಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೇಡಿಕೆ ಹೆಚ್ಚಾಗಿ, ಮುಂಬರುವ ದಿನಗಳಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 2 ಲಕ್ಷ ರೂ. ಗಡಿ ದಾಟಿದರೂ ಅಚ್ಚರಿಯಿಲ್ಲ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಷೇರುಪೇಟೆಯಲ್ಲಿ ಅಲ್ಲೋಲ-ಕಲ್ಲೋಲ
ಯುದ್ಧದ ಸುದ್ದಿಯಿಂದಾಗಿ ಭಾರತೀಯ ಷೇರುಪೇಟೆ (Stock Market) ತೀವ್ರ ಕುಸಿತ ಕಂಡಿದೆ. ವಿಶೇಷವಾಗಿ ಏವಿಯೇಷನ್ (ವಿಮಾನಯಾನ) ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಕಂಪನಿಗಳ ಷೇರುಗಳು ಭಾರಿ ನಷ್ಟ ಅನುಭವಿಸುತ್ತಿವೆ.
Also Read: ಮಧ್ಯಪ್ರಾಚ್ಯದ ಸಂಘರ್ಷ: ಭಾರತದಲ್ಲಿ ಇಂಧನ ದರ ಏರಿಕೆಯ ಭೀತಿ
ಭಾರತೀಯರು ಸೇಫ್ ಆಗಿದ್ದಾರಾ? ಸರ್ಕಾರದ ನಿಲುವೇನು ?
ಹೌದು, ಭೌತಿಕ ಯುದ್ಧದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದ್ದರೂ, ಪ್ರಜೆಗಳ ರಕ್ಷಣೆಯಲ್ಲಿ ತೀವ್ರ ಎಚ್ಚರಿಕೆ ವಹಿಸುವ ಅನಿವಾರ್ಯತೆ ಇದೆ:
ಅನಿವಾಸಿ ಭಾರತೀಯರ ಆತಂಕ:
ಯುಎಇ, ಕತಾರ್, ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗದಲ್ಲಿದ್ದಾರೆ. ಇರಾನ್-ಅಮೆರಿಕ ಸಂಘರ್ಷ ಈ ದೇಶಗಳಿಗೂ ವ್ಯಾಪಿಸುತ್ತಿರುವುದರಿಂದ (ದುಬೈ, ದೋಹಾದಲ್ಲಿ ಸ್ಫೋಟದ ವರದಿಗಳು ಬಂದಿವೆ) ಭಾರತೀಯರ ಸುರಕ್ಷತೆ ಬಹುದೊಡ್ಡ ಸವಾಲಾಗಿದೆ.
ಪ್ರಧಾನಿ ಮಟ್ಟದ ತುರ್ತು ಸಭೆ:
ಪರಿಸ್ಥಿತಿಯ ಗಂಭೀರತೆ ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ವ್ಯವಹಾರಗಳ ಸಂಪುಟ ಸಮಿತಿಯ (CCS) ತುರ್ತು ಸಭೆ ನಡೆಸಿ, ಪಶ್ಚಿಮ ಏಷ್ಯಾದಲ್ಲಿರುವ ಭಾರತೀಯರ ಸುರಕ್ಷತೆ ಹಾಗೂ ಇಂಧನ ಭದ್ರತೆಯ ಬಗ್ಗೆ ಹೈವೋಲ್ಟೇಜ್ ಚರ್ಚೆ ನಡೆಸಿದ್ದಾರೆ.
ದೇಶದೊಳಗೂ ಕಟ್ಟೆಚ್ಚರ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿ ಭಾರತದ ಕೆಲವು ಭಾಗಗಳಲ್ಲಿ (ಲಕ್ನೋ, ಹೈದರಾಬಾದ್, ಕಾಶ್ಮೀರ) ಪ್ರತಿಭಟನೆಗಳು ಭುಗಿಲೆದ್ದಿವೆ. ದೇಶದೊಳಗೆ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಮತ್ತು ಅಮೆರಿಕ-ಇಸ್ರೇಲ್ ರಾಯಭಾರಿ ಕಚೇರಿಗಳಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಕೆ ವಹಿಸಿದೆ.
ಭಾರತ ಮೇಲಾಗುವ ನೇರ ಪರಿಣಾಮವೇನು ?
ಭಾರತವು ಅಮೆರಿಕ, ಇಸ್ರೇಲ್ ಮತ್ತು ಇರಾನ್ ಜೊತೆಗೆ ತಟಸ್ಥ ಹಾಗೂ ಉತ್ತಮ ರಾಜತಾಂತ್ರಿಕ ಸಂಬಂಧವನ್ನು (Neutral Stance) ಕಾಯ್ದುಕೊಂಡು ಬಂದಿದೆ.
ಹೀಗಾಗಿ ನೇರ ಯುದ್ಧದ ಭೀತಿ ನಮಗಿಲ್ಲ. ಆದರೆ, ‘ಆರ್ಥಿಕ ಯುದ್ಧ’ ಮತ್ತು ‘ಹಣದುಬ್ಬರ’ (Inflation) ದಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತೈಲ ಬೆಲೆ ಏರಿಕೆಯಾದರೆ ಸರಕು ಸಾಗಣೆ ದುಬಾರಿಯಾಗಿ, ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗಿ, ಅಂತಿಮವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತ.
will iran America israel war affect india danger explained



