World Suicide Prevention Day:ಇಂದು ವಿಶ್ವ ಆತ್ಮಹತ್ಯೆ ತಡೆ ದಿನ : ಏನಿದರ ಉದ್ದೇಶ ?

(World Suicide Prevention Day)ವಿಶ್ವದಾದ್ಯಂತ ಇಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆತ್ಮಹತ್ಯೆ ಪ್ರಕರಣವನ್ನು ನಿರ್ಮೂಲನಗೊಳಿಸುವ ಸಲುವಾಗಿ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಸೂಸೈಡ್‌ ಪ್ರಿವೆನ್ಶನ್‌ ಮತ್ತು(WHO) ವಿಶ್ವ ಆರೋಗ್ಯ ಸಂಸ್ಥೆ2003 ರಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆಯನ್ನು ಆರಂಭಿಸಿತ್ತು. ಅಂದಿನಿಂದ ಇಂದಿನವರೆಗೆ ವಿಶ್ವದಾದ್ಯಂತ ಸೆಪ್ಟೆಂಬರ್‌ 10ರಂದು ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತಿದೆ.

ವಿಶ್ವದಾದ್ಯಂತ ಆತ್ಮಹತ್ಯೆ ಎನ್ನುವುದು ಸಾಮಾಜಿಕ ಪಿಡುಗಾಗಿ ರೂಪುಗೊಂಡಿದೆ. ಯುವ ಜನತೆ ಹೆಚ್ಚಾಗಿ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆಯ ಹಾದಿಯನ್ನು ಹಿಡಿಯುತ್ತಿದ್ದಾರೆ. ಇದೇ ಕಾರಣಕ್ಕಾಗಿ (World Suicide Prevention Day)ವಿಶ್ವ ಆತ್ಮಹತ್ಯೆ ತಡೆದಿನದ ಅಂಗವಾಗಿ ಡಬ್ಲೂಹೆಚ್​​ಒ (WHO) ತಜ್ಞರು ಹಲವು ಸಲಹೆಗಳನ್ನು ನೀಡಿದ್ದಾರೆ. ಜೀವನದ ಪ್ರತಿ ಸಮಸ್ಯೆಗೂ ಸಾವು ಒಂದೇ ಪರಿಹಾರವಲ್ಲ. ಏನೇ ಸಮಸ್ಯೆ ಇದ್ದರೂ ಎದುರಿಸಿ ಬದುಕಬೇಕೆಂದು ಜನರಲ್ಲಿ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಜನರು ಮಾನಸಿಕ ಒತ್ತಡ ಮತ್ತು ಖಿನ್ನತೆಯ ಕಾರಣದಿಂದಲೇ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಮನಸ್ಸು ಮಾಡುತ್ತಿದ್ದಾರೆ.

ಅಮೂಲ್ಯ ಜೀವವನ್ನು ಸಣ್ಣ ಪುಟ್ಟ ವಿಚಾರಕ್ಕೂ ಬಲಿ ಕೊಡುತ್ತಿರುವ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ರೈತನೋರ್ವ ತಾನು ಬೆಳೆದ ಫಸಲಿಗೆ ಸರಿಯಾದ ಬೆಲೆ ಮಾರುಕಟ್ಟೆಯಲ್ಲಿ ಸಿಗಲಿಲ್ಲ, ಮಾಡಿದ ಸಾಲ ತೀರಿಸಲು ಸಾಧ್ಯವಾಗಿಲ್ಲ, ಸಕಾಲದಲ್ಲಿ ಮಳೆ ಇರದೇ ಬೆಳೆ ತೆಗೆಯಲು ಆಗಲಿಲ್ಲವೆಂದು, ಪ್ರವಾಹದಿಂದ ಬೆಳೆ ನಾಶವಾಗಿದೆ. ಹೀಗೆ ನಾನಾ ಕಾರಣಗಳಿಂದಾಗಿ ಆತ್ಮಹತ್ಯೆಯ ಹಾದಿಯನ್ನು ಹಿಡಿಯುತ್ತಿದ್ದಾರೆ. ಇನ್ನೂ ಹಲವರು ಆರೋಗ್ಯ ಸಮಸ್ಯೆ, ದೈಹಿಕ ನ್ಯೂನ್ಯತೆ, ಮಾನಸಿಕ ಖಾಯಿಲೆ, ಪರೀಕ್ಷೆಯಲ್ಲಿ ಕಡಿಮೆ ಅಂಕ, ಪ್ರೀತಿಯಲ್ಲಿ ಮೋಸ. ಹೀಗೆ ಆತ್ಮಹತ್ಯೆಯ ಹಿಂದಿನ ಕಾರಣಗಳನ್ನು ಹುಡುಕುತ್ತಾ ಹೊರಟ್ರೆ ಹಲವು ಕಾರಣಗಳು ತಿಳಿದು ಬರುತ್ತವೆ. ಆತ್ಮಹತ್ಯೆ ಅನ್ನೋದು ಜನಸಾಮಾನ್ಯರನ್ನು ಮಾತ್ರವಲ್ಲ, ಸ್ಟಾರ್‌ ನಟ, ನಟಿಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಯಾರನ್ನೂ ಬಿಟ್ಟಿಲ್ಲ.

ಆತ್ಮಹತ್ಯೆ ತಡೆ ದಿನಾಚರಣೆಗೆ ಈ‌ ವರ್ಷದ ಥೀಮ್:

ಆತ್ಮಹತ್ಯೆಯಂತಹ ಪಿಡುಗನ್ನು ತಡೆಯುವ ಸಲುವಾಗಿ ಆರಂಭಿಸಿರುವ ಈ ದಿನಾಚರಣೆಗೆ ಯಾವುದೇ ನಿರ್ಧಿಷ್ಟವಾದ ಥೀಮ್‌ ಇರಲಿಲ್ಲ. ಆದರೆ 2021ರಿಂದ “ಕ್ರಿಯೆಯ ಮೂಲಕ ಭರವಸೆ ಮೂಡಿಸಿ” (Creating Hope Through Action)ಎನ್ನುವ ಥೀಮ್‌ ನ್ನು ಬಳಸಿದ್ದರು ಅದನ್ನೇ ಈ ವರ್ಷವು ಕೂಡ ಮುಂದುವರಿಸಿಕೊಂಡು ಜನರಿಗೆ ಆತ್ಮಹತ್ಯೆಯಂತಹ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವುದ್ದಾಗಿದೆ. ಇದರಂತೆ 2021ರಿಂದ 2023ರವರೆಗೂ ಇದೇ ಥೀಮ್ ನ್ನು ಮುಂದುವರಿಸುವುದಾಗಿದೆ. ಈ ಥೀಮ್‌ ನ ಮುಖ್ಯ ಉದ್ದೇಶವೇನೆಂದರೆ ಆತ್ಮಹತ್ಯೆಯಂತಹ ಆಲೋಚನೆಯಲ್ಲಿ ತೊಡಗಿದ ವ್ಯಕ್ತಿಗೆ ಮಾನಸಿಕ ಧೈರ್ಯವನ್ನು ತುಂಬುವುದು. ಜೊತೆಗೆ ಅದರ ಬಗ್ಗೆ ಅರಿವು ಮೂಡಿಸುವುದಾಗಿದೆ. ಮನುಷ್ಯನ ಹುಟ್ಟು ಹೇಗೆ ಆಕಸ್ಮಿಕವೋ, ಹಾಗೆ ಸಾವು ಕೂಡ ಸಹಜ. ಆತ್ಮಹತ್ಯೆಯಂತಹ ನಿರ್ಧಾರದಿಂದ ಯಾವ ಸಮಸ್ಯೆಯು ಕೂಡ ಪರಿಹಾರವಾಗುವುದಿಲ್ಲ. ಮನುಷ್ಯನು ಎಂತಹ ಕಠಿಣ ಸಂಧರ್ಭದಲ್ಲೂ ಕೂಡ ಮಾನಸಿಕ ದೃಢತೆಯನ್ನು ಹೊಂದಿರಬೇಕು. ಸಮಸ್ಯೆ ಬಂದ್ರೆ ಧೈರ್ಯವಾಗಿ ಎದುರಿಸೋಣಾ. ಬದಲಾಗಿ ಸಮಸ್ಯೆಗೆ ಅಂಜಿ ಪ್ರಾಣವನ್ನು ಕೊಡೋದು ಬೇಡಾ ಎಂದು ಆತ್ಮಹತ್ಯೆ ತಡೆ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರೂ ದೃಢ ಸಂಕಲ್ಪ ಮಾಡೋಣಾ

ಇದನ್ನೂ ಓದಿ: ಕಲಬುರಗಿಯಲ್ಲಿ ಮಿತಿ ಮೀರಿದ ವರುಣನ ಅಬ್ಬರ : ಬಟ್ಟೆ ತೊಳೆಯಲು ಹೋದ ಯುವತಿ ನೀರುಪಾಲು

ಇದನ್ನೂ ಓದಿ: 2 ಪ್ರತ್ಯೇಕ ಘಟನೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ ಮುಳುಗಿ ಆರು ಮಂದಿ ಜಲಸಮಾಧಿ

Comments are closed.