China Lock down Protest: ಲಾಕ್ ಡೌನ್ ವಿರುದ್ಧ ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ.. ಕ್ಸಿ ಸರ್ಕಾರದ ವಿರುದ್ಧ ಸಮರ

ಬೀಜಿಂಗ್ : China Lock down Protest ವಿಶ್ವದೆಲ್ಲೆಡೆ ಅಟ್ಟಹಾಸ ಮೆರೆದು ಮನುಕುಲವನ್ನೇ ಕಂಗೆಡಿಸಿದ್ದ ಮಹಾಮಾರಿ ಕೊರೊನಾ ಭಾರತದಲ್ಲಿ ಬಹುತೇಕ ಕಡಿಮೆ ಆಗಿದೆ. ಆದ್ರೆ ವಿಶ್ವಕ್ಕೆ ಕೊರೊನಾ ವೈರಸ್ ಹಬ್ಬಿಸಿದ. ಕೊರೊನಾ ತವರೂರಾದ ಚೀನಾ ಈಗಲೂ ಮಹಾಮಾರಿಯಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಚೀನಾ ಸರ್ಕಾರ ಲಾಕ್ ಡೌನ್ ವಿಧಿಸಿದ್ದು, ಇದೀಗ ಲಾಕ್ ಡೌನ್ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.

ಕಳೆದ ಎರಡ್ಮೂರು ವಾರದಿಂದ ಚೀನಾದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಭಾನುವಾರದ ವರದಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 40 ಸಾವಿರಕ್ಕೂ ಅಧಿಕ ಹೊಸ ಕೊರೊನಾ ಕೇಸ್ ಗಳು ದಾಖಲಾಗಿವೆ. ಹೀಗಾಗೇ ಚೀನಾದ ಕ್ಸಿ ಜಿನ್ ಪಿಂಗ್ ಸರ್ಕಾರವೂ ಕೊರೊನಾ ಮಟ್ಟಹಾಕೋಕೆ ‘ಝೀರೋ ಕೊವಿಡ್’ ಪ್ಲ್ಯಾನ್ ಮಾಡಿದ್ದು. ಲಾಕ್ ಡೌನ್ ವಿಧಿಸಲಾಗುತ್ತಿದೆ. ಆದ್ರೀಗ ಕ್ಸಿ ಸರ್ಕಾರದ ಲಾಕ್ ಡೌನ್ ನೀತಿಗಳ ವಿರುದ್ಧ ಅಲ್ಲಿನ ಜನ ಆಕ್ರೋಶ ಗೊಂಡಿದ್ದಾರೆ. ಶಾಂಗೈ, ಬೀಜಿಂಗ್ ನಂಥಾ ನಗರಗಳಲ್ಲೇ ಲಾಕ್ ಡೌನ್ ವಿರುದ್ಧ ಜನರು ಪ್ರತಿಭಟನೆ ನಡೆಸ್ತಿದ್ದಾರೆ. ಕ್ಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.

ಉರುಂಕಿ ಅಗ್ನಿ ದುರಂತದಿಂದ ಜನಾಕ್ರೋಶ: ಚೀನಾದ ಉರುಂಕಿಯಲ್ಲಿ ಕಳೆದ ಗುರುವಾರ ಭಾರಿ ಅಗ್ನಿ ಅನಾಹುತ ಸಂಭವಿಸಿತ್ತು. ದುರಂತದಲ್ಲಿ 10 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಸಾಕಷ್ಟು ಜನ ಗಾಯಗೊಂಡಿದ್ರು. ಆದ್ರೆ ಲಾಕ್ ಡೌನ್ ನಿಂದಾಗಿ ಅಗ್ನಿ ದುರಂತದ ವೇಳೆ ವೈದ್ಯರು, ಆಂಬ್ಯುಲೆನ್ಸ್ ವ್ಯವಸ್ಥೆ ಸಮರ್ಪಕವಾಗಿ ದೊರೆತಿರಲಿಲ್ಲ. ಲಾಕ್ ಡೌನ್ ನಿಯಮಗಳಿಂದಾಗಿ ಅಗ್ನಿ ಅನಾಹುತದ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸೋಕೆ ಸಾಧ್ಯವಾಗಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಜನರು ಕ್ಸಿ ಜಿನ್ ಪಿಂಗ್ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ. ಕಮ್ಯನಿಸ್ಟ್ ಪಾರ್ಟಿ ಅಧಿಕಾರದಿಂದ ತೊಲಗುವಂತೆ ಜನರು ಆಗ್ರಹಿಸುತ್ತಿದ್ದಾರೆ. ಚೀನಾದ ಪ್ರಮುಖ ನಗರಗಳಿಗೆ ಈ ಪ್ರತಿಭಟನೆ ವ್ಯಾಪಿಸಿದ್ದು, ಲಾಕ್ ಡೌನ್ ತೆರವು ಮಾಡಬೇಕಾದ ಅನಿವಾರ್ಯತೆ ಬಂದಿದೆ. ಕೊರೊನಾ ವೈರಸ್ ತವರು ಚೀನಾದ ವುಹಾನ್ ಪ್ರಾಂತ್ಯದಲ್ಲೂ ಪ್ರತಿಭಟನೆ ವ್ಯಾಪಕವಾಗಿ ನಡೀತಿದೆ.

ಇದನ್ನೂ ಓದಿ : Baba Ramdev: ‘ಮಹಿಳೆಯರು ಬಟ್ಟೆ ಧರಿಸದೇ ಇದ್ರೂ’.. ವಿವಾದದ ಕಿಡಿ ಹೊತ್ತಿಸಿದ ಯೋಗ ಗುರು ಹೇಳಿಕೆ

ಇದನ್ನೂ ಓದಿ : Sonithapura: ಬಬ್ರುವಾಹನ ಆಳ್ವಿಕೆ ಕಾಲದ ಪರಶುರಾಮ ಸೃಷ್ಟಿಯ ಪುರಾತನ ಕ್ಷೇತ್ರದ ಬಗ್ಗೆ ನಿಮಗೆ ಗೊತ್ತಾ ?

China Lock down Protest People’s outrage broke out in China against the lockdown War against the Xi government

Comments are closed.