MS Dhoni Dance : ಬರ್ತ್‌ಡೇ ಪಾರ್ಟಿಯಲ್ಲಿ ಪಾಂಡ್ಯ ಬ್ರದರ್ಸ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಧೋನಿ

ಬೆಂಗಳೂರು: MS Dhoni Dance : ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ (MS Dhoni) ಭಾರತದ ಹಲವಾರು ಕ್ರಿಕೆಟಿಗರಿಗೆ ಗುರು ಮತ್ತು ಮಾರ್ಗದರ್ಶಕ. ಧೋನಿ ಅವರ ಗರಡಿಯಲ್ಲಿ ಪಳಗಿರುವ ಆಟಗಾರರ ಪಟ್ಟಿ ದೊಡ್ಡದು. ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಅವರಿಂದ ಹಿಡಿದು ಹಲವು ಆಟಗಾರರಿಗೆ ಧೋನಿಯವರೇ ಗಾಡ್ ಫಾದರ್. ಇವರಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಒಬ್ಬರು. ಇದೀಗ ಪಾಂಡ್ಯ ತಮ್ಮ ಮೆಂಟರ್, ಗುರು ಧೋನಿ ಜೊತೆ ಬರ್ತ್ ಡೇ ಪಾರ್ಟಿಯೊಂದರಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ ಅವರ ಸಹೋದರ ಕೃಣಾಲ್ ಪಾಂಡ್ಯ ಕೂಡ ಇದ್ದಾರೆ. ಪಾಂಡ್ಯ ಸಹೋದರರ ಜೊತೆ ಧೋನಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯೂಜಿಲೆಂಡ್ ಪ್ರವಾಸದ ನಂತರ ದುಬೈಗೆ ತೆರಳಿದ್ದ ಹಾರ್ದಿಕ್ ಪಾಂಡ್ಯ ಅಲ್ಲಿ ತಮ್ಮ ಸ್ನೇಹಿತರೊಬ್ಬ ಬರ್ತ್ ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ದುಬೈನಲ್ಲೇ ಇದ್ದ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಕೂಡ ಆ ಬರ್ತ್ ಡೇ ಪಾರ್ಟಿಗೆ ಆಗಮಿಸಿದ್ದು, ಗುರು-ಶಿಷ್ಯರ ಸಮಾಗಮವಾಗಿದೆ. ಖ್ಯಾತ rapper ಬಾದ್’ಶಾ ಜೊತೆ ಧೋನಿ ಮತ್ತು ಪಾಂಡ್ಯ ಬ್ರದರ್ಸ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

29 ವರ್ಷ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಪಾಂಡ್ಯ ನಾಯಕತ್ವದಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ರೋಹಿತ್ ಶರ್ಮಾ ನಾಯಕತ್ವದಲ್ಲಿ ವೈಫಲ್ಯ ಕಂಡಿರುವ ಕಾರಣ, ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ಟಿ20 ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಲು ಬಿಸಿಸಿಐ ಮುಂದಾಗಿದೆ. ಹಾರ್ದಿಕ್ ಪಾಂಡ್ಯ ಅವರ ಯಶಸ್ಸಿನಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ ಅವರ ಪಾತ್ರ ದೊಡ್ಡದು. ಧೋನಿ ಅವರಿಂದ ತುಂಬಾ ಕಲಿತಿರುವುದಾಗಿ ಪಾಂಡ್ಯ ಸಾಕಷ್ಟು ಬಾರಿ ಹೇಳಿದ್ದಾರೆ.


ಇದನ್ನೂ ಓದಿ : Vijay Hazare Trophy Karnataka : ಮೋದಿ ಸ್ಟೇಡಿಯಂನಲ್ಲಿ ನಾಳೆ ಕ್ವಾರ್ಟರ್ ಫೈನಲ್; ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಕರ್ನಾಟಕ ?

ಇದನ್ನೂ ಓದಿ : Guinness record: ಐಪಿಎಲ್ ಪಂದ್ಯದ ಮೂಲಕ ಗಿನ್ನೆಸ್ ದಾಖಲೆ ಸೃಷ್ಟಿಸಿದ ನರೇಂದ್ರ ಮೋದಿ ಸ್ಟೇಡಿಯಂ

MS Dhoni Dance With Hardik Pandya Brothers At Birthday Party

Comments are closed.