Baba Ramdev: ‘ಮಹಿಳೆಯರು ಬಟ್ಟೆ ಧರಿಸದೇ ಇದ್ರೂ’.. ವಿವಾದದ ಕಿಡಿ ಹೊತ್ತಿಸಿದ ಯೋಗ ಗುರು ಹೇಳಿಕೆ

ಮುಂಬೈ : Baba Ramdev ಮಹಿಳೆಯರ ವಿಚಾರವಾಗಿ ಯೋಗ ಗುರು ಬಾಬಾ ರಾಮದೇವ್ ನೀಡಿದ ಅಸಭ್ಯ ಹೇಳಿಕೆ ವಿವಾದಕ್ಕೆ ಈಡಾಗಿದ್ದು ಮಹಾರಾಷ್ಟ್ರ ಸರ್ಕಾರ, ಡಿಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಪ್ರತಿಪಕ್ಷಗಳು ಸಮರಕ್ಕೆ ಇಳಿದಿವೆ. ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಮಹಿಳಾ ಹೋರಾಟಗಾರರು ಅಸಮಾಧಾನ ಹೊರಹಾಕಿ ಕ್ಷಮೆ ಕೇಳುವಂತೆ ಆಗ್ರಹಿಸುತ್ತಿದ್ದಾರೆ.

ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯೋಗ ಗುರು ರಾಮ್‌ದೇವ್ ಅವರು, ಸೀರೆ, ಸಲ್ವಾರ್ ಕಮೀಜ್ ಅಥವಾ ನೀವೂ ಏನನ್ನೂ ಧರಿಸದಿದ್ದರೂ ಸಹ ಚೆನ್ನಾಗಿ ಕಾಣಿಸುತ್ತೀರಿ ಎಂದು ಹೇಳಿದ್ರು. ಬಾಬಾ ರಾಮದೇವ ಹೇಳಿಕೆಯನ್ನ ಖಂಡಿಸಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ರಾಮ್ ದೇವ್ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಅಲ್ದೆ ರಾಮ್ ದೇವ್ ಭಾಷಣದ ವಿಡಿಯೋವನ್ನ ಸ್ವಾತಿ ಮಲಿಲವಾಲ್ ಟ್ವೀಟ್ ಮಾಡಿದ್ದಾರೆ. ವಿಡಿಯೋದಲ್ಲಿ ರಾಮ್ ದೇವ್ ಅವರೊಂದಿಗೆ ವೇದಿಕೆಯಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಇದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇವೇಳೆ ಯೋಗ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರ ಕುರಿತು ಯೋಗ ಗುರು ಬಾಬಾ ರಾಮ್ ದೇವ್ ಮಾತನಾಡಿದ್ರು. ‘ನೀವು ಸೀರೆಯಲ್ಲಿ ಸುಂದರವಾಗಿ ಕಾಣುತ್ತೀರಿ. ನೀವು ಅಮೃತಾ ಜಿಯಂತೆ ಸಲ್ವಾರ್ ಸೂಟ್‌ಗಳಲ್ಲಿಯೂ ಉತ್ತಮವಾಗಿ ಕಾಣುತ್ತೀರಿ. ಮತ್ತು ನನ್ನಂತೆ ಏನೂ ಧರಿಸದೇ ಇದ್ದರೂ ಚೆನ್ನಾಗಿ ಕಾಣ್ತೀರಿ ಎಂದು ಹೇಳಿದ್ರು.

ಯೋಗಗುರುಗಳ ಮಾತನ್ನ ಕೇಳಿ ಒಂದು ಕ್ಷಣ ಸೇರಿದ ಸಾವಿರಾರರು ಮಹಿಳೆಯರು ಕಕ್ಕಾಬಿಕ್ಕಿಯಾದ್ರು. ಮಹಿಳೆಯರು ದಿಗ್ಭ್ರಮೆಯಿಂದ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಯೋಗ ಗುರುಗಳ ಪಕ್ಕದಲ್ಲೇ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಸಹ ಇದ್ರು. ಹೀಗಿದ್ರೂ ಅವರು ಈ ಬಗ್ಗೆ ಪ್ರಶ್ನಿಸದೇ ಇರೋದು ಖಂಡನೀಯ ಅನ್ನೋ ಮಾತುಗಳು ಕೇಳಿ ಬಂದಿದೆ.

ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಕೂಡ ರಾಮ್‌ದೇವ್ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ‘ಪತಂಜಲಿ ಬಾಬಾ ರಾಮಲೀಲಾ ಮೈದಾನದಿಂದ ಮಹಿಳೆಯರ ಬಟ್ಟೆಯಲ್ಲಿ ಏಕೆ ಓಡಿಹೋದರು ಎಂಬುದು ಈಗ ನನಗೆ ತಿಳಿಯಿತು ಎಂದು ಟಾಂಗ್ ಕೊಟ್ಟಿದ್ದಾರೆ.

ಹೀಗೆ ಯೋಗ ಗುರು ಬಾಬಾರಾಮ್ ದೇವ್ ಅವರ ಹೇಳಿಕೆ ವಿವಾದ ಎಬ್ಬಿಸಿದ್ರೆ, ಈ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಮ್‌ದೇವ್ ಅಥವಾ ಪತಂಜಲಿಯಿಂದ ಯಾವುದೇ ಸ್ಪಷ್ಟೀಕರಣವನ್ನೂ ನೀಡಿಲ್ಲ.

ಇದನ್ನೂ ಓದಿ : Indian Student Died : ಸೈಕಲ್‌ಗೆ ಪಿಕಪ್‌ ಟ್ರಕ್‌ ಢಿಕ್ಕಿ : ಕೆನಡಾದಲ್ಲಿ ಭಾರತದ ವಿದ್ಯಾರ್ಥಿ ಸಾವು

ಇದನ್ನೂ ಓದಿ : Miracle story: ವೃದ್ಧನ ಹೊಟ್ಟೆಯಲ್ಲಿತ್ತು 187 ನಾಣ್ಯ: ವೈದ್ಯಲೋಕಕ್ಕೆ ಅಚ್ಚರಿ

Baba Ramdev Yoga teacher Ramdev’s indecent remarks on women’s attire

Comments are closed.