Swarna prashana ಮಕ್ಕಳ ಬುದ್ಧಿಮಟ್ಟ ಹೆಚ್ಚಿಸುವ ಸೂಪರ್‌ ಔಷಧ!


ಸ್ವರ್ಣ ಬಿಂದು ಪ್ರಾಶನ(Swarna prashana) ಅಥವಾ ಸ್ವರ್ಣ ಪ್ರಾಶನ ಅನ್ನು ಪ್ರತಿ ಹಿಂದೂ ತಿಂಗಳಿನ ಪುಷ್ಯ ನಕ್ಷತ್ರದಂದು ನೀಡುವ ಪರಿಪಾಠವಿದೆ. ಮಾರ್ಚ್‌ 14 ಇಂದು ಪುಷ್ಯ ನಕ್ಷತ್ರವಾದ್ದರಿಂದ ವಿವಿಧ ಆಯರ್ವೇದ ಆಸ್ಪತ್ರೆಗಳಲ್ಲಿ ಸ್ವರ್ಣ ಪ್ರಾಶನ ನಡೆಸಲಾಗುತ್ತಿದೆ. ಆಯುರ್ವೇದದಲ್ಲಿ ಶಿಶು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಇದನ್ನೇ ಮುಖ್ಯವಾಗಿ ಹೇಳಿದ್ದಾರೆ. ಸ್ವರ್ಣ ಬಿಂದು ಅಥವಾ ಸ್ವರ್ಣ ಪ್ರಾಶನ ಅನ್ನು ಇಂದು ಅಂದರೆ ಪುಷ್ಯ ನಕ್ಷತ್ರದಂದೇ ನೀಡಲು ಕಾರಣ ಈ ನಕ್ಷತ್ರವು ಶುಭಕಾರಿಯಾಗಿದೆ ಎಂಬುದು ಪ್ರಾಚೀನಕಾಲದಿಂದಲೂ ನಂಬಲಾದ ಸಂಗತಿ.

ಈ ಸ್ವರ್ಣ ಪ್ರಾಶನದ ಹಿಂದಿರುವ ಉದ್ದೇಶ, ಮಹತ್ವಗಳೇನು ಅನ್ನುವುದನ್ನು ನೀವು ತಿಳಿಯಲು ಬಯಸುತ್ತೀರಾ? ಹಾಗಾದರೆ, ಈ ಲೇಖನ ಓದಿ ಮತ್ತು ಅದರ ಮಾಹಿತಿಯನ್ನು ತಿಳಿದುಕೊಳ್ಳಿ.

ಆಯುರ್ವೇದದ ಪುರಾತನ ಮಹಾ ಗ್ರಂಥವಾದ ಕಶ್ಯಪ ಸಂಹಿತದಲ್ಲಿ ಈ ಸ್ವರ್ಣ ಪ್ರಾಶನ ವಿಧಾನದ ಉಲ್ಲೇಖವಿದೆ. ಮಕ್ಕಳ ಮತ್ತು ಶಿಶುಗಳ ರೋಗನಿರೋಧಕ ಶಕ್ತಿ, ಜ್ಞಾಪಕ ಶಕ್ತಿ, ಬುದ್ಧಿವಂತಿಕೆಯನ್ನು ಸುಧಾರಿಸಲು ಇದನ್ನು ನೀಡುಬಹುದು ಎಂದು ಹೇಳಲಾಗಿದೆ. ಹಿಂದೂ ತಿಂಗಳಿನ ಪ್ರತಿ 27 ಅಥವಾ 28 ದಿನಗಳಿಗೊಮ್ಮೆ ಬರುವ ಪುಷ್ಯ ನಕ್ಷತ್ರದಂದು ಸ್ವರ್ಣ ಪ್ರಾಶನ ಅಥವಾ ಸ್ವರ್ಣ ಬಿಂದು ಪ್ರಾಶನವನ್ನು ಎಲ್ಲಾ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ನಡೆಸಲಾಗುವದು.

ಸ್ವರ್ಣ ಪ್ರಾಶನದ ಮಹತ್ವ:

  • ಶಿಶುಗಳ ಮತ್ತು ಮಕ್ಕಳ ರೋಗನಿರೋಧಕ ಶಕ್ತಿ ಇದು ಹೆಚ್ಚಿಸುತ್ತದೆ. ಪದೇ ಪದೇ ರೋಗಗಳು ಭಾದಿಸದಂತೆ ತಡೆಯುತ್ತದೆ.
  • ಮಕ್ಕಳ ಏಕಾಗ್ರತೆ ಮತ್ತು ಸ್ಮರಣ ಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ.
  • ಮೆದುಳು ಚುರುಕಾಗುವಂತೆ ಮಾಡಿ, ಮಕ್ಕಳ ಗ್ರಹಣ ಶಕ್ತಿ ಹೆಚ್ಚಿಸುತ್ತದೆ.
  • ಜೀರ್ಣಕ್ರಿಯೆ ಸುಧಾರಿಸಿ ಇಮ್ಯುನಿಟಿ ಪಾವರ್‌ ಹೆಚ್ಚಿಸುತ್ತದೆ.
  • ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ತಗಲುವ ರೋಗಗಳ ವಿರುದ್ಧ ಸಕಾರಾತ್ಮಕವಾಗಿ ಹೋರಾಡಲು ಸಹಾಯ ಮಾಡುತ್ತದೆ. ಮತ್ತು ಮಕ್ಕಳಲ್ಲಿ ಆಂಟಿಬಾಡೀಸ್‌ಗಳನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Hair Growth Oils: ಕೂದಲಿನ ಸಮಸ್ಯೆಗಳಿಗೆ ಅದ್ಭುತ ಪವಾಡ ಬೀರುವ ಈ 4 ಎಣ್ಣೆಗಳನ್ನು ಟ್ರೈ ಮಾಡಿ ನೋಡಿ

ಸ್ವರ್ಣ ಪ್ರಾಶನ ಎಲ್ಲಿ ಮತ್ತು ಎಂದು ನೀಡಲಾಗುವುದು?
ಸ್ವರ್ಣ ಬಿಂದು ಪ್ರಾಶನ ಅಥವಾ ಸ್ವರ್ಣ ಪ್ರಾಶನವನ್ನು ಎಲ್ಲಾ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಪುಷ್ಯ ನಕ್ಷತ್ರದ ವಿಶೇಷ ದಿನದಂದು ನೀಡಲಾಗುತ್ತದೆ. ಇದನ್ನು ಪುಷ್ಯ ನಕ್ಷತ್ರದಂದೇ ನೀಡಲು ಕಾರಣ ಪುಷ್ಯ ನಕ್ಷತ್ರಪುಂಜವು ಪುಷ್ಟಿ ಅಂದರೆ ಬಲವರ್ಧಿನೆ ಮಾಡುತ್ತದೆ ಎಂದು ಹೇಳಲಾಗಿದೆ.

ಸ್ವರ್ಣ ಪ್ರಾಶನಕ್ಕೆ ಸರಿಯಾದ ವಯಸ್ಸು ಯಾವುದು?
ನವಜಾತ ಶಿಶುವಿನಿಂದ ಹಿಡಿದು 16 ವರ್ಷದ ಮಕ್ಕಳವರೆಗೆ ನೀಡಬಹುದು. ಅದರಲ್ಲೂ, ಐದು ವರ್ಷದ ಮಕ್ಕಳಿಗೆ ಈ ಸ್ವರ್ಣ ಪ್ರಾಶನದಿಂದ ಬಹಳಷ್ಟು ಪ್ರಯೋಜನವಿದೆ. ಇದನ್ನು ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಆರು ತಿಂಗಳುಗಳ ಕಾಲ ನಿರಂತರವಾಗಿ ನೀಡುವುದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.

ಸ್ವರ್ಣ ಪ್ರಾಶನದಲ್ಲಿರುವ ಆಯುರ್ವೇದ ಪದಾರ್ಥಗಳು:
ಚಿನ್ನ, ವಚ, ದೇವ ಪುಷ್ಪ, ಅಶ್ವಗಂಧ, ಶುದ್ಧ ಹಸುವಿನ ತುಪ್ಪ, ಜೇನುತುಪ್ಪ ಮುಂತಾದವುಗಳು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ ಎಂಬುದರಿಂದ ಕೊರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರತಿರೋಧಗಳನ್ನು ಮಕ್ಕಳಲ್ಲಿ ಹೆಚ್ಚಿಸಬಲ್ಲದು ಅನ್ನುವ ಕಾಳಜಿಯು ಇದರ ಬಗ್ಗೆ ವಿಶೇಷ ಒಲವು ಹೆಚ್ಚಾಗುವಂತೆ ಮಾಡಿದೆ. ಆದರೂ, ಸ್ವರ್ಣ ಪ್ರಾಶನ ತಮ್ಮ ಮಕ್ಕಳಿಗೆ ನೀಡುವ ಮೊದಲು ತಜ್ಞ ವೈದ್ಯರ ಬೇಟಿ ಮಾಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ.

ಇದನ್ನೂ ಓದಿ: Health Apps For Women: ಮಹಿಳೆಯರೇ ನಿಮ್ಮ ಆರೋಗ್ಯದ ಸುರಕ್ಷತೆಗೆ ಈ ಆ್ಯಪ್‌ಗಳನ್ನು ಬಳಸಿ

(Swarna prashana for children to boost immunity power)

Comments are closed.