ಬಾಹ್ಯಾಕಾಶದಲ್ಲಿ ಚೀನಾ-ಪಾಕ್ ದೋಸ್ತಿ: ಪಾಕಿಸ್ತಾನದ ಉಪಗ್ರಹ ಹೊತ್ತು ಹಾರಿದ ಚೀನಾ ರಾಕೆಟ್
China Pakistan friendship in space: ಉಪಗ್ರಹ ಉಡಾವಣೆಯ ಜೊತೆಗೆ, ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಪಾಕಿಸ್ತಾನದ ಇಬ್ಬರು ಗಗನಯಾತ್ರಿಗಳು ಏಪ್ರಿಲ್ 24ರಂದು ಬೀಜಿಂಗ್ ತಲುಪಿದ್ದಾರೆ. ಚೀನಾದ ಗಗನಯಾತ್ರಿಗಳೊಂದಿಗೆ ಇವರು ತರಬೇತಿ ಪಡೆಯಲಿದ್ದಾರೆ.
ಬೀಜಿಂಗ್: ಚೀನಾ ಮತ್ತು ಪಾಕಿಸ್ತಾನದ ನಡುವಿನ ಬಾಹ್ಯಾಕಾಶ ಸಹಕಾರ ಮತ್ತಷ್ಟು ವಿಸ್ತರಿಸಿದ್ದು, ಶನಿವಾರ ರಾತ್ರಿ ಚೀನಾವು ಪಾಕಿಸ್ತಾನದ ನೂತನ ಉಪಗ್ರಹವನ್ನು (China Pakistan friendship in space) ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಉಡಾವಣೆಯ ವಿವರಗಳು:
-
ಉಪಗ್ರಹದ ಹೆಸರು: PRSC-EO3.
-
ಉಡಾವಣಾ ಸಮಯ: ಶನಿವಾರ ರಾತ್ರಿ 8:15ಕ್ಕೆ (ಸ್ಥಳೀಯ ಕಾಲಮಾನ).
-
ಉಡಾವಣಾ ಕೇಂದ್ರ: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿರುವ ತಯುವಾನ್ ಉಪಗ್ರಹ ಉಡಾವಣಾ ಕೇಂದ್ರ.
-
ರಾಕೆಟ್: ಲಾಂಗ್ ಮಾರ್ಚ್-6 (Long March-6) ವಾಹಕ ರಾಕೆಟ್ ಮೂಲಕ ಈ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚಿದ ಸಹಕಾರ:
ಕಳೆದ ವರ್ಷದಿಂದೀಚೆಗೆ ಚೀನಾ ಉಡಾವಣೆ ಮಾಡುತ್ತಿರುವ ಪಾಕಿಸ್ತಾನದ ನಾಲ್ಕನೇ ಉಪಗ್ರಹ ಇದಾಗಿದೆ. ಕಳೆದ ವರ್ಷವಷ್ಟೇ ಚೀನಾವು ಪಾಕಿಸ್ತಾನದ ಮೂರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು. ಈ ಮೂಲಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವು ಈಗ ಬಾಹ್ಯಾಕಾಶ ರಂಗಕ್ಕೂ ವ್ಯಾಪಿಸಿದೆ.
Shoot at Donald Trump: ಡೋನಾಲ್ಡ್ ಟ್ರಂಪ್ ಔತಣಕೂಟದಲ್ಲಿ ಗುಂಡಿನ ದಾಳಿ: ಶೂಟರ್ ಸೆರೆ
ಚೀನಾ ಬಾಹ್ಯಾಕಾಶ ನಿಲ್ದಾಣಕ್ಕೆ ಪಾಕಿಸ್ತಾನಿ ಗಗನಯಾತ್ರಿ:
ಉಪಗ್ರಹ ಉಡಾವಣೆಯ ಜೊತೆಗೆ, ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಪಾಕಿಸ್ತಾನದ ಇಬ್ಬರು ಗಗನಯಾತ್ರಿಗಳು ಏಪ್ರಿಲ್ 24ರಂದು ಬೀಜಿಂಗ್ ತಲುಪಿದ್ದಾರೆ. ಚೀನಾದ ಗಗನಯಾತ್ರಿಗಳೊಂದಿಗೆ ಇವರು ತರಬೇತಿ ಪಡೆಯಲಿದ್ದಾರೆ.
-
ತರಬೇತಿ ಮತ್ತು ಮೌಲ್ಯಮಾಪನ ಪ್ರಕ್ರಿಯೆ ಮುಗಿದ ನಂತರ, ಈ ಇಬ್ಬರಲ್ಲಿ ಒಬ್ಬರು ಚೀನಾದ ‘ತಿಯಾಂಗಾಂಗ್’ (Tiangong) ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
-
ಈ ಮೂಲಕ ಚೀನಾದ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಲಿರುವ ಮೊದಲ ವಿದೇಶಿ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನಿ ಗಗನಯಾತ್ರಿ ಪಾತ್ರರಾಗಲಿದ್ದಾರೆ.
https://www.youtube.com/watch?v=ZJ_x4eMuhVM



