China Population Loan : ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು ಮಾಡಬೇಕು?

ಸಾಲ ಬೇಕು (Loan) ಅಂತಂದ್ರೂ ಸಿಗ್ತಿಲ್ಲ ಅಂತ ಬೇಸರ ಮಾಡ್ಕೊಂಡಿದ್ದೀರಾ? ನಿಮ್ಮ ಬೇಸರ ನೀಗಿಸುವಂತಹ ಸುದ್ದಿಯೊಂದು ಚೀನಾದಿಂದ (China) ಹೊರಬಿದ್ದಿದೆ. ಅಭಿವೃದ್ಧಿಗೆ ಜನಸಂಖ್ಯಾ ಸ್ಫೋಟ (Population Increase) ಮಾರಕ ಎಂಬ ಸಿದ್ಧಾಂತದ ಅನ್ವಯ 70, 80, 90ರ ದಶಕದಲ್ಲಿ ಮೂರು, ಎರಡು ಮತ್ತು ಒಂದು ಮಗು ಹೊಂದಬೇಕು ಎಂದು ಶಾಸನ ಮಾಡಿದ್ದ ಚೀನಾದಲ್ಲಿ ಈಗ ಜನಸಂಖ್ಯಾ ಸ್ಫೋಟದ ವೇಗ ಗಣನೀಯವಾಗಿ ಕುಗ್ಗಿದೆ. ಇದರಿಂದ ಭವಿಷ್ಯದಲ್ಲಿ ದೇಶ ಮುದುಕರ ನಾಡಗುತ್ತದೆ. ಕುಟುಂಬದವರಲ್ಲಿ ದುಡಿಯುವ ಜನರೇ ಇಲ್ಲವಾಗುತ್ತದೆ ಎಂಬ ಆತಂಕಕ್ಕೆ ಚೀನಾ ಒಳಗಾಗಿದೆ. ಹೀಗಾಗಿ, ಇಂತಿಷ್ಟೆ ಸಂಖ್ಯೆಯ ಮಕ್ಕಳನ್ನು ಹೊಂದಬೇಕು ಎಂಬ ನಿಯಮವನ್ನು ಈಗಾಗಲೇ ಕೈಬಿಟ್ಟಿದೆ. ಬದಲಿಗೆ ಮಕ್ಕಳನ್ನು ಹೊಂದುವ ದಂಪತಿಗೆ ಪ್ರೋತ್ಸಾಹ ಕಾರ್ಯಕ್ರಮಗಳನ್ನು (China Population Loan) ಹಮ್ಮಿಕೊಂಡಿದೆ.

ಈ ನಡುವೆ ಜನರು ಜನಸಂಖ್ಯೆಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಜೊತೆಗೆ ಬೆಲೆ ಏರಿಕೆಯಿಂದ ಖರ್ಚು-ವೆಚ್ಚ ಹೆಚ್ಚಾಗಿದೆ. ಇಂತಹದರಲ್ಲಿ ಮಕ್ಕಳಾದರೆ ಸುಖ ಜೀವನ ಅಸಾಧ್ಯ, ಕಷ್ಟಕೋಟಲೆಗಳ ಸರಮಾಲೆ ಎದುರಾಗುತ್ತದೆ ಎಂಬ ಮನೋಭಾವ ಜನರಲ್ಲಿ ಬಲಗೊಳ್ಳುತ್ತಿದೆ. ಅದರಲ್ಲೂ ಯುವ ಸಮುದಾಯ ವಿವಾಹವೇ ಆಗದೆ ಸಂಗಾತಿಯಾಗಿ ಸಹಬಾಳ್ವೆಯಾಗಿ ಬದುಕುವುದನ್ನು ಇಷ್ಟ ಪಡುತ್ತಿದೆ. ಮದುವೆಯಾದ ದಂಪತಿಗಳಲ್ಲಿ (Married Couple) ಬಹುತೇಕರು ಮಗು ಬೇಡ ಎಂಬ ನಿಲುವಿಗೆ ಬಂದಿದ್ದಾರೆ. ಇದರಿಂದ ದೇಶದಲ್ಲಿ ಫಲವಂತಿಕೆಯ ವೇಗ ವಿಶ್ವದ ಸರಾಸರಿಗಿಂತ ಕಡಿಮೆ ಆಗುತ್ತಿದೆ.

ಚೀನಾದ ಈಶಾನ್ಯ ಭಾಗದ ಜಿಲಿನ್​ ಪ್ರಾಂತ್ಯದಲ್ಲಂತೂ (Chinese province Jivin) ಅತ್ಯಂತ ವೇಗವಾಗಿ ಜನಸಂಖ್ಯೆ ಕುಸಿಯುತ್ತಿದೆ. ಇಲ್ಲಿ ಮಕ್ಕಳು ಪಡೆಯುವುದನ್ನು ಉತ್ತೇಜಿಸುವುದಕ್ಕೆ “ವಿವಾಹ ಮತ್ತು ಜನನ ಸಾಲ’ ಎಂಬ ವಿಶೇಷ ಸಾಲ ಮೇಳ ಜಾರಿಯಲ್ಲಿದೆ.

ಮಕ್ಕಳನ್ನು ಹೊಂದುವ ದಂಪತಿಗೆ 2 ಲಕ್ಷ ಯುವಾನ್​ (ಸುಮಾರು 23.56 ಲಕ್ಷ ರೂಪಾಯಿ) ವಿಶೇಷ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್​ಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಎಷ್ಟು ಮಕ್ಕಳನ್ನು ಹೊಂದಲು ಬಯಸುತ್ತಾರೆಂಬುದರ ಮೇಲೆ ಬಡ್ಡಿ ದರ ನಿರ್ಣಯವಾಗುತ್ತದೆ.

ಇಷ್ಟೇ ಅಲ್ಲದೆ ದಂಪತಿ ಬೇರೆ ಪ್ರಾಂತ್ಯದವರಾಗಿದ್ದರೆ ತಮ್ಮ ಪ್ರಾಂತ್ಯದಲ್ಲಿ ನಿವಾಸ ಹೊಂದಲು ಅನುಮತಿ ಜಿಲಿನ್​ ಆಡಳಿತ ಅನುಮತಿ ನೀಡುತ್ತಿದೆ. ಸಾರ್ವಜನಿಕ ಸೇವೆಗಳ ಬಳಕೆಗೆ ಅವಕಾಶ, ಎರಡು ಅಥವಾ ಮೂರು ಮಕ್ಕಳನ್ನು ಹೊಂದಿದ ದಂಪತಿಗೆ ತೆರಿಗೆಯಲ್ಲಿ ವಿನಾಯಿತಿ, ಉದ್ಯಮ ನಡೆಸಲು ಉತ್ತೇಜನ ಇಂಥ ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರಿಗೆ ನೀಡುವ ಮಾತೃತ್ವದ ರಜೆಯನ್ನು 158 ದಿನದಿಂದ 180 ದಿನಕ್ಕೆ ಏರಿಸಿದೆ.

ಈ ಸಾಲ ಮೇಳದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಬ್ಯಾಂಕ್​ಗಳು ಸಾಲವನ್ನೆನೋ ನೀಡುತ್ತವೆ. ಬಡ್ಡಿ ಕಡಿಮೆ ಇದ್ದರೂ ಅದನ್ನು ತೀರಿಸುವ ಹೊಣೆಗಾರಿಕೆ ದಂಪತಿ ಮೇಲೆ ಇರುತ್ತದೆ. ಈ ದುಬಾರಿ ದಿನಗಳಲ್ಲಿ ಮಕ್ಕಳನ್ನು ಸಾಕುವುದು, ಶಿಕ್ಷಣ ಕೊಡಿಸಲು ಎಷ್ಟು ದುಡಿದರೂ ಸಾಲದು. ಆದ್ದರಿಂದ ಈ ಸಾಲ ತಕ್ಷಣಕ್ಕೆ ನೆರವಾಗಬಹುದಷ್ಟೆ. ಒಟ್ಟಾರೆ ಇದು ಕುಟುಂಬದ ಮೇಲೆ ಬೀಳುವ ಸಾಲದ ಶೂಲವೆ ಆಗಿದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ASIGMA Army Messaging App : ಅಸಿಗ್ಮಾ; ಇದು ಭಾರತೀಯ ಸೇನೆಯ ಮೆಸೇಜಿಂಗ್ ಆ್ಯಪ್; ಏನಿದರ ವಿಶೇಷತೆ?

ಇದನ್ನೂ ಓದಿ: Japan Bus-Rail : ಇದನ್ನು ಬಸ್ ಎನ್ನುವಿರೋ? ರೈಲು ಎನ್ನುವಿರೋ? ಜಪಾನ್‌ನಲ್ಲಿ ಹೊಸ ವಾಹನದ ಬಳಕೆ ಆರಂಭ

(China Population Loan : Chinese province jivin offering baby loans to tackle declining population)

Comments are closed.