Pro Kabaddi 8 Day 4 Highlights: ಚೊಚ್ಚಲ ಗೆಲುವು ಸಾಧಿಸಿದ ಯುಪಿ ಯೋಧಾಸ್; ಪಾಟ್ನಾ ಪೈರೇಟ್ಸ್ ಸೋಲಿಗೆ ಕಾರಣಗಳು ಇಲ್ಲಿವೆ

ಕ್ರಿಸ್‌ಮಸ್ ದಿನದಂದು ನಡೆದ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ 4ನೇ ದಿನದಾಟದ (Pro Kabaddi 8 Day 4 Highlights) ಮೊದಲನೇ ಪಂದ್ಯದಲ್ಲಿ ಯುಪಿ ಯೋಧಾಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳ ನಡುವೆ (UP Yoddha Patna Pirates) ಭಾರಿ ಹಣಾಹಣಿ ನಡೆದು ಅಂತಿಮವಾಗಿ  ಯುಪಿ ಯೋಧಾ ಗೆಲುವು ಸಾಧಿಸಿತು. ಈಮೂಲಕ ತನ್ನ ಗೆಲುವಿನ ಆರಂಭಕ್ಕೆ ಮುನ್ನುಡಿ ಬರೆದಿದೆ. ತಾನು ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಕಂಡಿದ್ದ ಪಾಟ್ನಾ ಪೈರೇಟ್ಸ್‌ಗೆ ಎರಡನೇ ಪಂದ್ಯದಲ್ಲಿ ಸೋಲಿನ ಕಹಿ ದೊರೆತಂತಾಗಿದೆ.

ಪಂದ್ಯದ 10ನೇ  ನಿಮಿಶದಲ್ಲಿ ಯುಪಿ ಯೋಧಾ ತಂಡದ ಶ್ರೀಕಾಂತ್ ಜಾಧವ್ 3 ಪಾಯಿಂಟ್ಸ್ ಸೂಪರ್ ರೈಡ್ ಮಾಡುವ ಮೂಲಕ ಈಗಾಗಲೇ 3 ಬಾರಿ ಚಾಂಪಿಯನ್ಸ್ ಆಗಿರುವ ಪಾಟ್ನಾ ಪೈರೇಟ್ಸ್ ತಂಡಕ್ಕೆ ಆರಂಭಿಕ ಹಿನ್ನೆಡೆ ಉಂಟುಮಾಡಿದರು.  ಪಂದ್ಯದ ಆರಂಭದಲ್ಲಿ ಚಿಕ್ಕ ಆಘಾತ ಅನುಭವಿಸಿದ ಪಾಟ್ನಾ ಪೈರೇಟ್ಸ್ ತಂಡದ ಸಚಿನ್ ತಕ್ಷಣವೇ ಪ್ರಮುಖ ರೈಡ್ ಪಾಯಿಂಟ್ ಅನ್ನು ಸಂಪಾದಿಸಿದರು.

ನಂತರವಷ್ಟೇ ಸೂಪರ್ ಟ್ಯಾಕಲ್ ಕೂಡ ಮಾಡಲು ಯಶಸ್ವಿಯಾದರು.  ಈಮೂಲಕ ಆರಂಭದಲ್ಲಿಯೇ ಎರಡೂ ತಂಡಗಳ ನಡುವೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು.

ಪಾಟ್ನಾ ಪೈರೇಟ್ಸ್ ತಂಡ ಮಹಮ್ಮದ್ ರೇಜಾ ಮತ್ತು ಸಚಿನ್ ಅವರ ಆಟದೊಂದಿಗೆ 4 ಸೂಪರ್ ಟ್ಯಾಕಲ್ ಮಾಡಿ 20-12 ಅಂಕಗಳ ಮುನ್ನಡೆಯೊಂದಿಗೆ ಮೊದಲಾರ್ಧ ಮುಕ್ತಾಯವಾಯಿತು. ಪಾಟ್ನಾ ಪೈರೇಟ್ಸ್ ಮೊದಲನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿತು. ಆದರೆ ಎರಡೂ ತಂಡಗಳು ಕೂಡ ಆಲ್ ಔಟ್ ಮಾಡಲು ಸಾಧ್ಯವಾಗಲಿಲ್ಲ

ಪಂದ್ಯದ ಎರಡನೇ  ಹಂತದಲ್ಲಿ ಎರಡೂ ತಂಡಗಳ ರಕ್ಷಣಾ ವಿಭಾಗಗಳು ಮೇಲುಗೈ ಸಾಧಿಸುವುದು ಮಹತ್ವ ಪಡೆಯಿತು. ಪಾಟ್ನಾ ಪೈರೇಟ್ಸ್ ತಂಡದ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳನ್ನು ಎಸಗಿ ಅತಿಬೇಗ ಅಂದರೆ, ಹತ್ತು ನಿಮಿಶಗಳಲ್ಲಿ ಸಂಪೂರ್ಣ ಪತನವಾಗಬೇಕಾಯಿತು.

ಇದೇ ಸಮಯದಲ್ಲಿ ಯುಪಿ ಯೋಧಾಸ್ ತಂಡ 3 ಅಂಕಗಳ ಮುನ್ನಡೆ ಪಡೆದುಕೊಂಡಿತು. ಆದರೆ ಮೊದಲ ಸುತ್ತಿನ ಕೊನೆಯ ಭಾಗದಲ್ಲಿ ಪತನವಾಗಿದ್ದ ಯುಪಿ ಯೋಧಾ ತಂಡ ಇದೀಗ ಮುನ್ನೆಡೆ ಪಡೆದುಕೊಳ್ಳುವುದರಲ್ಲಿ ಯಶ ಗಳಿಸಿತು. ಅಲ್ಲದೇ ನಿರಂತರವಾಗಿ ಪಂದ್ಯವನ್ನು ಕೈಗೆ ತೆಗೆದುಕೊಂಡಿತು.

ಪಾಟ್ನಾ ಪೈರೇಟ್ಸ್ ತಂಡದ ಕೆಲವು ತಪ್ಪುಗಳಿಂದ ಯುಪಿ ಯೋಧಾ ತನ್ನ ಮುನ್ನಡೆಯನ್ನು ಮುಂದುವರಿಸಿತು. ಯುಪಿ ಯೋಧಾ ತಂಡದ ಸುರೇಂದರ್ ಗಿಲ್  ತಮ್ಮ ಆಟದ ಕೌಶಲದಿಂದ ಬೋನಸ್ ಪಾಯಿಂಟ್  ಪಡೆದುಕೊಂಡರು. ಕೊನೆಯ ರೈಡ್‌ನಲ್ಲಿ ಯುಪಿ ಯೋಧಾ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 36-35 ಅಂತರದಲ್ಲಿ ಭರ್ಜರಿ ವಿಜಯ ಗಳಿಸುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: China Population Loan : ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು ಮಾಡಬೇಕು?

ಇದನ್ನೂ ಓದಿ: Japan Bus-Rail : ಇದನ್ನು ಬಸ್ ಎನ್ನುವಿರೋ? ರೈಲು ಎನ್ನುವಿರೋ? ಜಪಾನ್‌ನಲ್ಲಿ ಹೊಸ ವಾಹನದ ಬಳಕೆ ಆರಂಭ

(Pro Kabaddi 8 day 4 highlights UP Yoddha wins against Patna Pirates)

Comments are closed.