ಚಿನ್ನದ ಗಣಿಯಲ್ಲಿ ಭೂಕುಸಿತ 50 ಕಾರ್ಮಿಕರ ಸಾವು

0

ಕಾಂಗೋ : ಚಿನ್ನದ ಗಣಿಯಲ್ಲಿ ಭೂ ಕುಸಿತ ಸಂಭವಿಸಿದ್ದು 50 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಹಲವು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವದಲ್ಲಿರುವ ಕಮಿಟುಗಾ ಬಳಿಯಲ್ಲಿರುವ ಚಿನ್ನದ ಗಣಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ.

ಕಮಿಟುಗಾ ಬಳಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಭೂ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ಭೂ ಕುಸಿತದ ವೇಳೆಯಲ್ಲಿ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 50 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ.

ಇನ್ನು ಗುಹೆಯ ಬಾಗಿಲು ಭೂ ಕುಸಿತದಿಂದ ಮುಚ್ಚಿದ್ದು ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಬದುಕುಳಿದ ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಇನಿಶಿಯೇಟಿವ್ ಆಫ್ ಸಪೋರ್ಟ್ ಮತ್ತು ಮಹಿಳೆಯರ ಸಾಮಾಜಿಕ ಮೇಲ್ವಿಚಾರಣೆಯ ಅಧ್ಯಕ್ಷ ಎಮಿಲಿಯಾನ್ ಇಟೊಂಗ್ವಾ ಹೇಳಿದ್ದಾರೆ.

ಕೆನಡಾದ ಗಣಿಗಾರ ಬಾನ್ರೊ ಕಾರ್ಪೊರೇಶನ್‌ನ ಒಡೆತನದಲ್ಲಿ ಕಮಿಟುಗಾ ಚಿನ್ನದ ಗಣಿ ಕಾರ್ಯನಿರ್ವಹಿಸುತ್ತಿತ್ತು. ಈ ಚಿನ್ನದ ಗಣಿಯಲ್ಲಿ ಅವಘಡಗಳು ನಡೆಯವುದು ಸಾಮಾನ್ಯವಾಗಿದೆ.

ಇಲ್ಲಿ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಆಳವಾದ ಪ್ರದೇಶದಲ್ಲಿ ಕೆಲಸವನ್ನು ನಿರ್ವಹಿಸಲಾಗುತ್ತಿತ್ತು.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಗಣಿ ದುರಂತದಲ್ಲಿ 16 ಮಂದಿ ಸಾವನ್ನಪ್ಪಿದ್ರೆ, ತಾಮ್ರ ಮತ್ತು ಕೋಬಾಲ್ಟ್ ಗಣಿಗಳಲ್ಲಿ ನಡೆದ ಭೂ ಕುಸಿತರದಲ್ಲಿ ಸುಮಾರು 43 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು.
.

Leave A Reply

Your email address will not be published.