Instagram viral video: ವೃದ್ಧನ ಮನೆಯನ್ನೇ ಹೊತ್ತು ಸಾಗಿದ ಊರ ಜನ; ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ..!

ಪಿಲಿಪೈನ್ಸ್: Instagram viral video: ಇಂದಿನ ಕಾಲಘಟ್ಟದಲ್ಲಿ ಜನರು ಮಾನವೀಯತೆಯನ್ನೇ ಮರೆತು ಮೃಗಗಳಂತೆ ವರ್ತಿಸುತ್ತಿದ್ದಾರೆ. ದ್ವೇಷ, ಅಸೂಯೆ ಹೆಚ್ಚಾಗಿ ಕೊಲೆ, ಅತ್ಯಾಚಾರದಂಥ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೃದ್ಧನೋರ್ವ ಒಂಟಿಯಾಗಿದ್ದಾನೆ ಎಂದು ಇಡೀ ಊರಿನ ಜನರು ಜೊತೆಯಾಗಿ ಸೇರಿ ಆತನ ಮನೆಯನ್ನೇ ವೃದ್ಧನ ಬಂಧುಗಳು ಇರುವಲ್ಲಿ ಸಾಗಿಸಿರುವ ವಿಡಿಯೋ ವೈರಲ್ ಆಗಿದೆ. ಗುಡ್ ನ್ಯೂಸ್ ಮೂವ್ ಮೆಂಟ್ಸ್ (Good news Movements) ಎಂಬ ಇನ್ ಸ್ಟಾಗ್ರಾಂ ಪೇಜ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಮಿಲಿಯನ್ ಗೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: Fake suicide drama: ಅಪ್ಪ- ಅಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ಮಗಳು ಮಾಡಿದ್ದು ಖತರ್ನಾಕ್ ಪ್ಲ್ಯಾನ್: ಈಕೆಯ ಮಾಸ್ಟರ್ ಮೈಂಡ್ ಹಿಂದಿತ್ತು ಹಿಂದಿ ಸೀರಿಯಲ್..!

ವಿಡಿಯೋದಲ್ಲಿ ಕಾಣಿಸುವಂತೆ ವೃದ್ಧನ ಮನೆಯ ಕೆಳಭಾಗಕ್ಕೆ ಬಡಿಗೆಯನ್ನು ಕಟ್ಟಿದ ಜನರು ಒಂದೊಂದು ಬಡಿಗೆಗೆ ಒಬ್ಬರಂತೆ ನಿಂತು ಒಟ್ಟು 24 ಮಂದಿ ಈ ಮನೆಯನ್ನು ಸಾಗಿಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಅಂದಹಾಗೆ ಇದು ಸಿಮೆಂಟ್ ಮನೆಯಲ್ಲ. ಕಬ್ಬಿಣದ ತಗಡು, ಅಡಿಕೆ ಮರದ ತಟ್ಟೆ ಮೊದಲಾದವುಗಳಿಂದ ನಿರ್ಮಿಸಲಾದ ಚಿಕ್ಕದಾದ ಮನೆ. ಇದಕ್ಕೆ ಬಡಿಗೆ ಕಟ್ಟಿ ಮನೆಯನ್ನೇ ಹೆಗಲಿಗೇರಿಸಿ ಜನರು ಸಾಗಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಕಲ್ಲು ಮಣ್ಣಿನಿಂದ ಕೂಡಿದ ರಸ್ತೆಯಲ್ಲಿ 7 ಅಡಿಗಿಂತಲೂ ಅಧಿಕ ಎತ್ತರದ ಶೆಡ್ ನಂತಿರುವ ಈ ಮನೆಯನ್ನು ಊರಿನ ಜನರು ಹೊತ್ತು ಸಾಗಿದ್ದಾರೆ, ಫಿಲಿಪೈನ್ಸ್ ನ ಝಂಬೊಂಗ ಡೆಲ್ ನೊರ್ಟೆ ಎಂಬಲ್ಲಿ ನಡೆದ ಘಟನೆ ಇದಾಗಿದೆ. ಅಂದಹಾಗೆ ಈ ಮನೆಯನ್ನು ಹೊತ್ತು ನಿಗದಿತ ಸ್ಥಳ ತಲುಪಲು ಜನರಿಗೆ 2 ಗಂಟೆಗಳ ಅವಧಿ ತಗುಲಿದೆಯಂತೆ.

ಮನೆಯನ್ನೇ ಸಾಗಿಸಲು ಕಾರಣವೇನು?

ಈ ವೃದ್ಧನ ಪತ್ನಿ ತೀರಿಕೊಂಡಿದ್ದು, ಇವರು ತಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆಯಲ್ಲಿ ತಮ್ಮದೇ ಮನೆಯಲ್ಲಿ ವಾಸವಿರಬೇಕು ಅನ್ನೋ ಆಸೆ ಹೊಂದಿದ್ದರಂತೆ. ಆದರೆ ವೃದ್ಧ ಇರುವ ಮನೆಯಿಂದ ಮೊಮ್ಮಕ್ಕಳಿದ್ದ ಪ್ರದೇಶ ಬಲು ದೂರವಿದ್ದ ಕಾರಣ ವೃದ್ಧನ ಆಸೆಯನ್ನು ನೆರವೇರಿಸಲು ಇಡೀ ಊರಿಗೆ ಊರೇ ಪಣತೊಟ್ಟಿದೆ. ಕೊನೆಗೂ ಒಗ್ಗಟ್ಟಿನ ಮಂತ್ರ ಜಪಿಸಿ ವೃದ್ಧನ ಮನೆಯನ್ನೇ ಸಾಗಿಸಿ ಆತನ ಆಸೆಯನ್ನು ನೆರವೇರಿಸಿದೆ. ಸದ್ಯ ಈ ವಿಡಿಯೋ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಜನರ ಮಹಾತ್ಕಾರ್ಯವನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: Zubin Nautiyal Injured:ಮೆಟ್ಟಿಲಿನಿಂದ ಬಿದ್ದ ಬಾಲಿವುಡ್ ಖ್ಯಾತ ಗಾಯಕ ಜುಬಿನ್‌ ನೌಟಿಯಾಲ್‌ ಆಸ್ಪತ್ರೆಗೆ ದಾಖಲು

Instagram viral video: Philippines Locals Carry Big House on Shoulders So That Elderly Man Can Stay Closer to His Family

Comments are closed.