ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ರಾಜೀನಾಮೆ : ಯುದ್ಧದ ಅಸಲಿ ಕಾರಣ ಜಗ್ಹಜಾಹೀರು

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆ ಪತ್ರದಲ್ಲಿ ಈ ಯುದ್ಧದ ಕುರಿತಂತೆ ಕೆಲ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇರಾನ್​ ಹಾಗೂ ಅಮೆರಿಕ – ಇಸ್ರೇಲ್​ ಯುದ್ಧದಿಂದ ಸಂಪೂರ್ಣ ವಿಶ್ವವೇ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವ ಬೆನ್ನಲ್ಲೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಮುಖಭಂಗವಾಗಿದೆ. ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆ ಪತ್ರದಲ್ಲಿ ಈ ಯುದ್ಧದ ಕುರಿತಂತೆ ಕೆಲ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರ ಯುದ್ಧದ ನಿರ್ಧಾರವೇ ತಪ್ಪು ಎಂದಿರುವ ಜೋಸೆಫ್​, ಇರಾನ್​ ದೇಶವು ಅಮೆರಿಕಕ್ಕೆ ಯಾವುದೇ ಬೆದರಿಕೆ ಒಡ್ಡಿರಲಿಲ್ಲ. ಹೀಗಾಗಿ ವೈಯಕ್ತಿಕವಾಗಿ ಈ ಯುದ್ಧವನ್ನು ಬೆಂಬಲಿಸಲು ಸಾಧ್ಯವಾಗುತ್ತಿಲ್ಲ. ಇರಾನ್​ ಯಾವುದೇ ರೀತಿಯ ಬೆದರಿಕೆಯೇ ಒಡ್ಡದೇ ಇರುವಾಗಲೂ ನಾವು ಈ ರೀತಿ ಯುದ್ಧ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ರಾಜೀನಾಮೆ ಪತ್ರದಲ್ಲಿ ಜೋಸೆಫ್​ ತಿಳಿಸಿದ್ದಾರೆ .

ಇದನ್ನೂ ಓದಿ: ಏನಿದು ಹಿಜ್ಬುಲ್ಲಾ? ಲೆಬನಾನ್‌ ದೇಶದ ಸೈನ್ಯಕ್ಕಿಂತ ಬಲಶಾಲಿ ಈ ಉಗ್ರ ಸಂಘಟನೆ!

ಇಸ್ರೇಲ್​ ಸರ್ಕಾರದಿಂದ ಬಂದ ಒತ್ತಡ ಹಾಗೂ ವಾಷಿಂಗ್ಟನ್​ನಲ್ಲಿರುವ ಪ್ರಬಲ ಇಸ್ರೇಲಿಗರ ಲಾಭಿಯಿಂದ ಈ ಯುದ್ಧ ನಡೆದಿದೆ. ಇವರುಗಳ ಒತ್ತಡದಿಂದಾಗಿ ಅಮೆರಿಕ ಇರಾನ್​ ಮೇಲೆ ಯುದ್ಧ ನಡೆಸಿದೆ. ಇದೊಂದು ಅನಗತ್ಯವಾದ ಯುದ್ಧ. ಇರಾನ್​ ವಿರುದ್ಧ ಸುಳ್ಳು ಸುದ್ದಿಗಳನ್ನು ಮಾಧ್ಯಮದಲ್ಲಿ ಬಿತ್ತರಿಸಿ ಈ ಯುದ್ಧ ಆರಂಭಿಸಲಾಗಿದೆ. ಇಲ್ಲಿ ನಡೆಯುತ್ತಿರುವ ಯುದ್ಧ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಜೊಸೇಫ್​ ಗಂಭೀರ ಆರೋಪ ಮಾಡಿದ್ದಾರೆ.

ಜೋಸೇಫ್​ ಕೇಂಟ್​ ಅವರ ರಾಜೀನಾಮೆ ಪತ್ರ ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದು, ರಾಜಕೀಯ ಒತ್ತಡದಿಂದಾಗಿ ಯುದ್ಧ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಡೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories