Australia Kannada Teaching : ಆಸ್ಟ್ರೇಲಿಯಾದ ಶಾಲೆಯಲ್ಲಿ ನಡೆಯುತ್ತೆ ಕನ್ನಡ ಪಾಠ

ಮೆಲ್ಬೋರ್ನ್‌ : ಕನ್ನಡ ನಾಡಲ್ಲಿ ಕನ್ನಡ ಮರೆಯಾಗುತ್ತಿದೆ. ಮಾತೃ ಭಾಷೆಯನ್ನು ಮಾತನಾಡೋದಕ್ಕೂ ಜನ ಹಿಂಜರಿಯುತ್ತಿದ್ದಾರೆ. ಅದ್ರಲ್ಲೂ ಕನ್ನಡಿಗರಿಗೆ ಕನ್ನಡ ಕಲಿಸೋದಕ್ಕೆ ರಾಜ್ಯ ಸರಕಾರ ಕಡ್ಡಾಯ ನೀತಿ ಜಾರಿಗೆ ತರಬೇಕಾಗಿದೆ. ಆದ್ರೆ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ಕನ್ನಡ ಬೋಧನೆ ನಡೆಯುತ್ತಿದೆ.

ಹೌದು, ಕನ್ನಡ ನೆಲೆದಲ್ಲಿ ವಾಸಿಸುವ ಜನರಿಗಿಂತಲೂ ಹೊರ ರಾಜ್ಯ, ವಿದೇಶಗಳಲ್ಲಿ ವಾಸಿಸುವ ಕನ್ನಡಿಗರಿಗೆ ತಾಯಿ ನೆಲೆದ ಮೇಲೆ ಅಪಾರ ಪ್ರೀತಿ. ಬಹುತೇಕ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ಕನ್ನಡ ಸಂಘಟನೆಗಳಿವೆ. ಕನ್ನಡದ ಸಂಸ್ಕೃತಿಯನ್ನು ವಿದೇಶಗಳಲ್ಲಿಯೂ ಪಸರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದ್ರೆ ಕರ್ನಾಟಕದಲ್ಲಿ ಕನ್ನಡ ಮರೆಯಾಗಿ ಪರಕೀಯ ಭಾಷೆಯೇ ತಾಂಡವವಾಡುತ್ತಿದೆ.

ಆದ್ರೆ ಆಸ್ಟ್ರೇಲಿಯಾದ ಮೇಲ್ಬೋರ್ನ್‌ನಲ್ಲಿರುವ ವಿಕ್ಟೋರಿಯಾ ಶಾಲೆಯಲ್ಲಿ 12ನೇ ತರಗತಿ ಪರೀಕ್ಷೆಗೆ ಎರಡನೇ ಭಾಷೆಯಾಗಿ ಕನ್ನಡವನ್ನು ತೆಗೆದುಕೊಳ್ಳಬಹುದಾಗಿದೆ. ಅದ್ರಲ್ಲೂ ಈ ಶಾಲೆಯನ್ನು ಆಸ್ಟ್ರೇಲಿಯಾದ ಸರಕಾರವೇ ನಿರ್ವಹಣೆ ಮಾಡುತ್ತಿದೆ. ಶಾಲೆಯಲ್ಲಿನ ವಿದ್ಯಾರ್ಥಿಗಳು ಎರಡನೇ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಕಳೆದ ನಾಲ್ಕು ವರ್ಷಗಳಿಂದಲೂ ಈ ಶಾಲೆ ಕನ್ನಡ ಬೋಧನೆಯನ್ನು ಮಾಡುತ್ತಿದೆ. ಆಸ್ಟ್ರೇಲಿಯಾದಲ್ಲಿ ಬಹು ಸಂಖ್ಯೆಯಲ್ಲಿ ಕನ್ನಡಿಗರಿದ್ದು, ಕನ್ನಡ ಸಂಘದವರು ವಿಎಸ್‌ಎಲ್‌ ( ವಿಕ್ಟೋರಿಯಾ ಸ್ಕೂಲ್‌ ಆಫ್‌ ಲಾಂಗ್ವೇಜಸ್ )ಗೆ ಪತ್ರವನ್ನು ಬರೆದು ವಿನಂತಿ ಮಾಡಿಕೊಂಡಿತ್ತು.

ಕನ್ನಡಿಗರ ಬೇಡಿಗೆ ಕೊನೆಗೂ ವಿಎಸ್‌ಎಲ್‌ ಅಸ್ತು ಎಂದಿದ್ದು 2018ರ ಜನವರಿ ತಿಂಗಳಿನಿಂದಲೇ ಕನ್ನಡ ಭಾಷೆಯನ್ನು ಕಲಿಸಲಾಗುತ್ತಿದೆ. ಕನ್ನಡದ ಪಾಠದ ಜೊತೆಗೆ ಮಕ್ಕಳಿಗೆ ಕನ್ನಡ ಸಂಸ್ಕೃತಿ, ಆಚಾರ ವಿಚಾರಗಳನ್ನು ಹೇಳಿಕೊಡಲಾಗುತ್ತಿದೆ.

ಮೆಲ್ಬೋರ್ನ್‌ ಕನ್ನಡ ಸಂಘ ಆಸ್ಟ್ರೇಲಿಯದಲ್ಲಿ ಕೇವಲ ಕನ್ನಡ ಶಾಲೆಯಷ್ಟೇ ಅಲ್ಲಾ ಕಳೆದ ಹಲವು ದಶಕಗಳಿಂದಲೂ ಕನ್ನಡ ರಾಜ್ಯೋತ್ಸವ, ಯುಗಾದಿ, ಸ್ವಾತಂತ್ರ್ಯೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ.ಒಟ್ಟಿನಲ್ಲಿ ಆಸ್ಟ್ರೇಲಿಯಾದಲ್ಲಿನ ಕನ್ನಡಿಗರ ಕನ್ನಡ ಪ್ರೇಮ ನಿಜಕ್ಕೂ ಮೆಚ್ಚುವಂತದ್ದು. ಮಾತ್ರವಲ್ಲ ಇತರರಿಗೂ ಮಾದರಿಯಾಗಿದೆ.

Comments are closed.