Bharat Jodo Yatra : ಮರಿ ಆನೆಗಾಗಿ ಮಿಡಿದ ರಾಹುಲ್ ಗಾಂಧಿ: ಚಿಕಿತ್ಸೆ ಕೊಡಿಸುವಂತೆ ಸಿಎಂ ಗೆ ಪತ್ರ

ಮೈಸೂರು : (Rahul Gandhi letter to CM) ಭಾರತ ಜೋಡೋ ಯಾತ್ರೆಯ ಅಂಗವಾಗಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಸದ್ಯ ಭಾರತ ಜೋಡೋ ಯಾತ್ರೆಯ ಮಧ್ಯೆ ಬ್ರೇಕ್ ಪಡೆದುಕೊಂಡು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ರೆಸಾರ್ಟ್ ವಾಸ್ತವ್ಯದ ಮಧ್ಯೆ ರಾಹುಲ್ ಗಾಂಧಿ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿ ಮಾಡಿದ್ದಾರೆ. ಈ ಸಫಾರಿ ವೇಳೆ ದೃಶ್ಯವೊಂದನ್ನು ಕಂಡು ಭಾವುಕರಾದ ರಾಹುಲ್ ಈ ಬಗ್ಗೆ ಸಿಎಂ ಬೊಮ್ಮಾಯಿಗೆ‌ ಪತ್ರ ಬರೆದಿದ್ದಾರೆ.

(Bharat Jodo Yatra)ರಾಹುಲ್ ಗಾಂಧಿ (Rahul Gandhi)ತಮ್ಮ ತಾಯಿ ಸೋನಿಯಾಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಮಂಗಳವಾರ ಮಧ್ಯಾಹ್ನ 3.30 ರಿಂದ ಸಂಜೆ 6.30 ರವರೆಗೆ ಸಫಾರಿ ಮಾಡಿದ್ದಾರೆ. ಈ ವೇಳೆ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಇತರ ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿ ಮುಗಿಸಿ ಬಂದಿರೋ ರಾಹುಲ್ ಗಾಂಧಿ ಅರಣ್ಯದಲ್ಲಿ ತಾವು ಕಂಡ ದೃಶ್ಯವೊಂದಕ್ಕೆ ಮರುಗಿದ್ದು ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿವರಿಗೆ ಪತ್ರ ಬರೆದಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಆನೆ ನೋಡಿದೆ. ತಾಯಿ ಆನೆ ಜೊತೆ ಪುಟ್ಟ ಆನೆಮರಿಯನ್ನು‌ ನೋಡಿದೆ. ಅದರ ನರಳಾಟವನ್ನು ನೋಡಿ ಬೇಸರವಾಯಿತು. ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ,ಡಿಕೆಶಿಯವರ ಭೇಟಿ ವೇಳೆ ಈ ದೃಶ್ಯಗಳು ಕಂಡು ಬಂತು.

ಇದನ್ನೂ ಓದಿ : KS Eshwarappa :‘ಆರ್​ಎಸ್​ಎಸ್​​ಗೆ ಬುದ್ಧಿ ಕಲಿಸಲು ಯಾರಪ್ಪನಿಂದಲೂ ಸಾಧ್ಯವಿಲ್ಲ’ : ಕೆ.ಎಸ್​ ಈಶ್ವರಪ್ಪ ಗುಡುಗು

ಇದನ್ನೂ ಓದಿ : ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಸೋನಿಯಾ ಎಂಟ್ರಿ

ಇದನ್ನೂ ಓದಿ : CT Ravi : ‘ಪರೇಶ್​ ಮೇಸ್ತಾ ಕುಟುಂಬಸ್ಥರ ಪರವಾಗಿ ನಾವು ಎಂದಿಗೂ ನಿಲ್ಲುತ್ತೇವೆ’ :ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಭಯ

ಮರಿ ಆನೆ ಕುತ್ತಿಗೆ ಹಾಗೂ ಸೊಂಡಿಲು ಭಾಗಕ್ಕೆ ಗಾಯವಾಗಿದೆ.ಆನೆ ನೋವಿನಿಂದ ನರಳುತ್ತಿದೆ. ನೀವು ಕರುಣೆ, ಸಹಾನುಭೂತಿಯಿಂದ ಮರಿಯಾನೆಯನ್ನು ಉಳಿಸಬೇಕು. ಸೂಕ್ತ ಚಿಕಿತ್ಸೆ ಸಿಕ್ಕರೇ ಮರಿ ಆನೆ ಉಳಿಯುತ್ತದೆ. ಸಕಾಲದಲ್ಲಿ ಮರಿ ಆನೆ ಚಿಕಿತ್ಸೆಗೆ ನೆರವಾಗಿ ಆ ಆನೆಮರಿಯನ್ನು ಉಳಿಸುತ್ತಿರಿ ಎಂದು ನಂಬಿದ್ದೇನೆ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲೂ ಈ ಆನೆಮರಿಗಾಗಿ ಮಿಡಿದ(Rahul Gandhi) ರಾಹುಲ್ ಗಾಂಧಿ, A mother’s love. I felt so sad to see this beautiful elephant with her injured little baby fighting for its life.


ಎಂದು ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಈ ಪೋಸ್ಟ್ ಮತ್ತು ಸಿಎಂಗೆ ಬರೆದ ಪತ್ರ ಈಗ ಎಲ್ಲೆಡೆ ವೈರಲ್ ಆಗಿದ್ದು, ಪ್ರಾಣಿಪ್ರಿಯರ ಗಮನ ಸೆಳೆದಿದೆ.

Rahul Gandhi, who was worried about the baby elephant: letter to the CM asking for treatment

Comments are closed.