ಪಾಕ್​ನಲ್ಲಿ ಇಂಧನ ಬಿಕ್ಕಟ್ಟು..! ಪೆಟ್ರೋಲ್​, ಡೀಸೆಲ್ ದರ ಶೇ. 43 ಏರಿಸಿದ ಪಾಕ್​ ಸರ್ಕಾರ..!

ಪಾಕಿಸ್ತಾನ ಸರ್ಕಾರ ನೀಡಿರುವ ಹೊಸ ಆದೇಶದ ಪ್ರಕಾರ, 1 ಲೀಟರ್​ ಪೆಟ್ರೋಲ್​ ದರ ಬರೋಬ್ಬರಿ 458.40 ಪಾಕಿಸ್ತಾನಿ ರೂಪಾಯಿ ಆಗಿದೆ.

ಇರಾನ್​ ಹಾಗೂ ಅಮೆರಿಕ, ಇಸ್ರೇಲ್​ ನಡುವಿನ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಅಭಾವ ಕಂಡು ಬರುತ್ತಿದೆ. ಆದರೆ ಸದ್ಯ ಪಾಕಿಸ್ತಾನ ಜನತೆಯ ಗತಿ (Pakistan Petrol Rate) ಮಾತ್ರ ದೇವರಿಗೇ ಪ್ರೀತಿ ಎಂಬಂತಾಗಿದೆ. ತೈಲ ಅಭಾವದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಪೆಟ್ರೋಲ್​ ಹಾಗೂ ಡೀಸೆಲ್ ದರವನ್ನು  ಬೇಕಾಬಿಟ್ಟಿ ಏರಿಕೆ ಮಾಡಿದ್ದು, ಪಾಕ್​ ಸರ್ಕಾರದ ಕ್ರಮದ ವಿರುದ್ಧ ಅಲ್ಲಿನ ವಾಹನ ಸವಾರರು ಹಿಡಿಶಾಪ ಹಾಕುವಂತಾಗಿದೆ.

ಪಾಕಿಸ್ತಾನ ಸರ್ಕಾರ ನೀಡಿರುವ ಹೊಸ ಆದೇಶದ ಪ್ರಕಾರ, 1 ಲೀಟರ್​ ಪೆಟ್ರೋಲ್​ ದರ ಬರೋಬ್ಬರಿ 458.40 ಪಾಕಿಸ್ತಾನಿ ರೂಪಾಯಿ ಆಗಿದೆ. ಈ ಮೊದಲು 1 ಲೀಟರ್​ ಪೆಟ್ರೋಲ್​ ದರ 321.17 ರೂಪಾಯಿ ಆಗಿತ್ತು. ಪಾಕಿಸ್ತಾನ ಸರ್ಕಾರ ಪೆಟ್ರೋಲ್​ ದರದಲ್ಲಿ ಏಕಾಏಕಿ 43 ಪರ್ಸೆಂಟ್ ಏರಿಕೆ ಮಾಡಿದಂತಾಗಿದೆ. ಇನ್ನು ಡೀಸೆಲ್​ ಕತೆ ಕೂಡ ಇದಕ್ಕೆ ಹೊರತಾಗಿಲ್ಲ. ಈ ಹಿಂದೆ 335.86 ಪಾಕಿಸ್ತಾನಿ ರೂಪಾಯಿಗೆ ಮಾರಾಟಗೊಳ್ಳುತ್ತಿದ್ದ 1 ಲೀಟರ್​ ಡೀಸೆಲ್​ ದರ 520.35 ರೂಪಾಯಿಗೆ ಏರಿಕೆ ಕಂಡಿದೆ. ಪಾಕಿಸ್ತಾನ ಸರ್ಕಾರದ ಈ ಬೆಲೆ ಏರಿಕೆ ನೀತಿ ಜನಸಾಮಾನ್ಯರನ್ನು ಕಂಗಾಲಾಗಿಸಿದೆ.

ಇದನ್ನೂ ಓದಿ: ಇಂದಿನಿಂದ ಮೂಟೆ ಸಿಮೆಂಟ್​ ದರವೂ ದುಬಾರಿ : ರಿಯಲ್​ ಎಸ್ಟೇಟ್​ ವಲಯಕ್ಕೆ ಭಾರೀ ಆಘಾತ..!

ಅಡುಗೆ ಅನಿಲ ಸಿಲಿಂಡರ್​ ದರವನ್ನೂ ಪಾಕಿಸ್ತಾನ ಸರ್ಕಾರ ಏರಿಕೆ ಮಾಡಿದ್ದು, ಜನಸಾಮಾನ್ಯರು ಇಂಧನ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದ್ದಾರೆ. ಪಾಕ್​ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವ ಮೂಲಕ ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಕಳೆದ ತಿಂಗಳಷ್ಟೇ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ 20 ಪರ್ಸೆಂಟ್​ ಏರಿಕೆ ಮಾಡಿದ್ದ ಪಾಕ್​ ಸರ್ಕಾರ ಇದೀಗ ಮತ್ತೊಮ್ಮೆ ಏಕಾಏಕಿ 43 ಪರ್ಸೆಂಟ್​ ದರ ಏರಿಕೆ ಮಾಡಿರುವ ಸರ್ಕಾರದ ನಿರ್ಧಾರದಿಂದ ಜನತೆ ಬೇಸತ್ತು ಹೋಗಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories