RCB Top Player : ದೆಹಲಿ ಕ್ಯಾಪಿಟಲ್ಸ್‌ ಸೇರ್ತಾರೆ ಆರ್‌ಸಿಬಿ ತಂಡದ ಈ ಖ್ಯಾತ ಆಟಗಾರ

ಇಂಡಿಯನ್‌ ಪ್ರೀಮಿಯರ್‌ ಲೀಗ್ ನಲ್ಲಿ (IPL 2022) ಈ ಬಾರಿ ಹತ್ತು ತಂಡಗಳು ಸೆಣೆಸಾಟವನ್ನು ನಡೆಸಲಿವೆ. ಹೀಗಾಗಿ ಎಲ್ಲಾ ತಂಡಗಳು ಪ್ರಶಸ್ತಿಯತ್ತ ಕಣ್ಣಿಟ್ಟಿವೆ. ಈ ನಡುವಲ್ಲೇ IPL 2022 ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ (RCB Top Player ) ಮಾಜಿ ಆಟಗಾರ ಶೇನ್‌ ವಾಟ್ಸನ್‌ ಇದೀಗ ದೆಹಲಿ ಕ್ಯಾಪಿಟಲ್ಸ್‌ ತಂಡವನ್ನು ಸೇರಲು ಮುಂದಾಗಿದ್ದಾರೆ.

ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಫ್ರಾಂಚೈಸಿ ಪರ ಆಡಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಡೆಲ್ಲಿ ಕ್ಯಾಪಿಟಲ್ಸ್ ಸೇರುವುದು ಬಹುತೇಕ ಖಚಿತವಾಗಿದೆ. ಅಂದ ಹಾಗೆ ಶೇನ್‌ ವ್ಯಾಟ್ಸನ್‌ ಡೆಲ್ಲಿ ತಂಡವನ್ನು ಸೇರುತ್ತಿರುವುದು ಆಲ್‌ರೌಂಡರ್‌ ಆಗಿ ಅಲ್ಲ, ಬದಲಾಗಿ ತರಬೇತುದಾರ ನಾಗಿ. ಹೌದು, ಕ್ರಿಕ್‌ಬಜ್ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರ ಶಿಫಾರಸ್ಸಿನ ಮೇರೆಗೆ ವ್ಯಾಟ್ಸನ್‌ ಅವರನ್ನು ಕೋಚ್‌ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ಟೀಮ್‌ ಮ್ಯಾನೇಜ್ಮೆಂಟ್‌ ಉತ್ಸುಕವಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಶೀಘ್ರದಲ್ಲಿಯೇ ವ್ಯಾಟ್ಸನ್‌ ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ ಎಂದು ವರದಿ ಹೇಳಿದೆ.

ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕಳೆದ ಎರಡು ವರ್ಷಗಳಿಂದಲೂ ಅದ್ಬುತ ಪ್ರದರ್ಶನವನ್ನು ನೀಡುತ್ತಿದೆ. ಅದ್ರಲ್ಲೂ ಡೇವಿಡ್‌ ವಾರ್ನರ್‌ ಅವರನ್ನು 6.25 ಕೋಟಿ ರೂ. ಹಾಗೂ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಬರೋಬ್ಬರಿ 10.75 ಕೋಟಿ ರೂಪಾಯಿಗೆ ತಂಡ ಖರೀದಿ ಮಾಡುವಲ್ಲಿ ಸಫಲವಾಗಿದೆ. ಜೊತೆಗೆ ಮನ್‌ ದೀಪ್‌ ಸಿಂಗ್‌, ಖಲೀಲ್‌ ಅಹ್ಮದ್‌, ಚೇತನ್‌ ಸಕರಿಯಾ ಅವರಂತಹ ಯುವ ಆಟಗರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿಸಿದೆ. ಈ ಹಿಂದೆ ತಂಡದ ಸಹಾಯಕ ಕೋಚ್‌ಗಳಾಗಿದ್ದ ಮೊಹಮ್ಮದ್‌ ಕೈಪ್‌ ಹಾಗೂ ಅಜಯ್‌ ರಾತ್ರಾ ಅವರ ಬದಲಿಗೆ ಹೊಸ ಕೋಚ್‌ ನೇಮಕಕ್ಕೆ ಮುಂದಾಗಿದೆ.

ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರಿಂದಾಗಿ ತಂಡ ಬಲಿಷ್ಠವಾಗಿದೆ. ಇದೀಗ ತಂಡದ ತರಬೇತುದಾರರ ತಂಡದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ. RCB ಮಾಜಿ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಅವರು ರಾಜಸ್ಥಾನ್ ರಾಯಲ್ಸ್ (2008) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (2018) ಎಂಬ ಎರಡು ತಂಡಗಳೊಂದಿಗೆ IPL ಪ್ರಶಸ್ತಿಯನ್ನು ಗೆದ್ದ ಅನುಭವವನ್ನು ಹೊಂದಿದ್ದಾರೆ. ವ್ಯಾಟ್ಸನ್ ಹೊರತಾಗಿ, ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಕೂಡ ಐಪಿಎಲ್ 2022 ಕ್ಕೆ ಮುಂಚಿತವಾಗಿ ದೆಹಲಿ ಕ್ಯಾಪಿಟಲ್ಸ್‌ಗೆ ಸಹಾಯಕ ಕೋಚ್ ಆಗಿ ಸೇರಿಕೊಳ್ಳಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರರು : ರಿಷಬ್ ಪಂತ್ (16 ಕೋಟಿ), ಅಕ್ಷರ್ ಪಟೇಲ್ (9 ಕೋಟಿ), ಪೃಥ್ವಿ ಶಾ (7.5 ಕೋಟಿ), ಅನ್ರಿಚ್ ನಾರ್ಜೆ (6.5 ಕೋಟಿ)

ದೆಹಲಿ ಕ್ಯಾಪಿಟಲ್ಸ್ ಖರೀದಿಸಲಾಗಿದೆ : ಡೇವಿಡ್ ವಾರ್ನರ್ (6.25 ಕೋಟಿ), ಅಶ್ವಿನ್ ಹೆಬ್ಬಾರ್ (20 ಲಕ್ಷ), ಸರ್ಫರಾಜ್ ಖಾನ್ (20 ಲಕ್ಷ), ಕೆಎಸ್ ಭರತ್ (2 ಕೋಟಿ), ಮನ್ದೀಪ್ ಸಿಂಗ್ (1.10 ಕೋಟಿ), ರೋವ್ಮನ್ ಪೊವೆಲ್ (2.80 ಕೋಟಿ), ಮುಸ್ತಾಫಿಜುರ್ ರೆಹಮಾನ್ (2 ಕೋಟಿ) ಕೋಟಿ), ಕುಲದೀಪ್ ಯಾದವ್ (2 ಕೋಟಿ), ಖಲೀಲ್ ಅಹ್ಮದ್ (5.25 ಕೋಟಿ), ಚೇತನ್ ಸಕರಿಯಾ (4.2 ಕೋಟಿ), ಮಿಚೆಲ್ ಮಾರ್ಷ್ (6.50 ಕೋಟಿ), ಶಾರ್ದೂಲ್ ಠಾಕೂರ್ (10.75 ಕೋಟಿ), ಕಮಲೇಶ್ ನಾಗರಕೋಟಿ (1.1 ಕೋಟಿ), ಲಲಿತ್ ಯಾದವ್ (65 ಲಕ್ಷ). ), ರಿಪಾಲ್ ಪಟೇಲ್ (20 ಲಕ್ಷ), ಯಶ್ ಧುಲ್ (50 ಲಕ್ಷ), ಪ್ರವೀಣ್ ದುಬೆ (50 ಲಕ್ಷ), ಟಿಮ್ ಸೀಫರ್ಟ್ (50 ಲಕ್ಷ), ಲುಂಗಿ ಎನ್‌ಗಿಡಿ (50 ಲಕ್ಷ), ವಿಕಿ ಓಸ್ಟ್ವಾಲ್ (20 ಲಕ್ಷ).

ಇದನ್ನೂ ಓದಿ : ಐಪಿಎಲ್ 2022ಕ್ಕೂ ಮೊದಲೇ ಈ ತಂಡದ ಮುಖ್ಯ ಕೋಚ್ ಆಗ್ತಿದ್ದಾರೆ ಕ್ರಿಸ್ ಗೇಲ್

ಇದನ್ನೂ ಓದಿ : ಭಾರತ ಮತ್ತು ಶ್ರೀಲಂಕಾ ಸರಣಿಯಿಂದ ಹೊರಬಿದ್ದ ಖ್ಯಾತ ಆಲ್‌ರೌಂಡರ್‌

(RCB Top Player Join Delhi Capitals for IPL 2022)

Comments are closed.