ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದಿಂದ ಬಿಗ್ ಶಾಕ್ ! ಇನ್ಮುಂದೆ ಸಾಲವೂ ಇಲ್ಲಾ, ತೈಲವೂ ಬಂದ್

0

ಸೌದಿ ಅರೇಬಿಯಾ : ಭಾರತದ ಬದ್ದ ವೈರಿ ಪಾಕಿಸ್ತಾನದ ವಿರುದ್ದ ಇದೀಗ ಸೌದಿ ಅರೇಬಿಯಾ ಕೆಂಡ ಕಾರುತ್ತಿದೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜೊತೆಗಿರುವ ಸ್ನೇಹವನ್ನು ಕಡಿತ ಮಾಡಿಕೊಳ್ಳಲು ಸೌದಿ ಅರೇಬಿಯಾ ಮುಂದಾಗಿದ್ದು, ಇನ್ಮುಂದೆ ತೈಲ ಹಾಗೂ ಸಾಲ ಎರಡನ್ನೂ ನೀಡುವುದಿಲ್ಲವೆಂದು ಘೋಷಣೆ ಮಾಡಿದೆ.

2018ರ ಅಂತ್ಯದಲ್ಲಿ ಸೌದಿ ಅರೇಬಿಯಯಾ ಸುಮಾರು 6.2 ಬಿಲಿಯನ್ ಡಾಲರ್ ಪ್ಯಾಕೇಜನ್ನು ಪಾಕಿಸ್ತಾನಕ್ಕೆ ನೀಡುವುದಾಗಿ ಘೋಷಿಸಿತ್ತು. ಅಂತೆಯೇ ಸುಮಾರು 3 ಬಿಲಿಯನ್ ಸಾಲವನ್ನು ಹಣದ ರೂಪದಲ್ಲಿ ಹಾಗೂ 3.2 ಬಿಲಿಯನ್ ಮೊತ್ತದ ತೈಲವನ್ನು ಸಾಲವನ್ನು ಸಾಲದ ರೂಪದಲ್ಲಿ ನೀಡಲು ಒಪ್ಪಂದ ಮಾಡಿಕೊಂಡಿತ್ತು. ಅದರಂತೆಯೇ 2019ರ ಫೆಬ್ರವರಿಯಲ್ಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಆದ್ರೀಗ ಸೌದಿ ಅರೇಬಿಯಾ ತಾನು ಪಾಕಿಸ್ತಾನದ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಕಡಿತ ಮಾಡುವುದಾಗಿ ಘೋಷಿಸಿದೆ. ಈ ಕುರಿತು ಮಿಡ್ಲ್ ಈಸ್ಟ್ ಮಾನಿಟರ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹ ಸಂಬಂಧ ಅಂತ್ಯವಾಗಿದೆ ಎಂದು ಹೇಳಿದೆ.

ಪಾಕಿಸ್ತಾನದ ವಿರುದ್ದ ಸೌದಿ ಅರೇಬಿಯಾ ಮುನಿಸಿಕೊಂಡಿರುವುದು ಭಾರತದ ಕಾಶ್ಮೀರ ವಿಚಾರಕ್ಕಾಗಿ. ಹೌದು, ಸೌದಿ ಪಾರುಪತ್ಯ ಹೊಂದಿರುವ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ- ಆಪರೇಷನ್ (ಓಐಸಿ) ವಿಚಾರವಾಗಿ ಸೌದಿ ಅರೇಬಿಯಾ ಏನನ್ನೂ ಮಾಡಿತ್ತಿಲ್ಲವೆಂದು ಪಾಕಿಸ್ತಾನ ಆರೋಪ ಮಾಡಿತ್ತು. ಮಾತ್ರವಲ್ಲ ಕಾಶ್ಮೀರ ವಿಚಾರವಾಗಿಯೂ ಪಾಕಿಸ್ತಾನ ಸೌದಿ ಅರೇಬಿಯಾ ವಿರುದ್ದ ಕಿಡಿಕಾರಿತ್ತು.

ಇನ್ನು ಸೌದಿ ಪಾರಮ್ಯ ಹೊಂದಿರುವ ಓಐಸಿಯನ್ನು ವಿಭಜಿಸುವುದಾಗಿಯೂ ಪಾಕಿಸ್ತಾನದ ವಿದೇಶಾಂಗ ಸಚಿವರು ಬೆದರಿಕೆಯನ್ನು ಒಡ್ಡಿದ್ದರು. ಇದೀಗ ಪಾಕಿಸ್ತಾನ ಕಾಶ್ಮೀರ ವಿಚಾರವಾಗಿ ಮಾಡಿಕೊಂಡಿರುವ ಎಡವಟ್ಟು ಇದೀಗ ತನ್ನ ಬುಡಕ್ಕೆ ಕೊಡಲಿಯೇಟು ಕೊಟ್ಟುಕೊಂಡಿದೆ.

ಸೌದಿ ಅರೇಬಿಯಾ ಭಾರತದ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಪಾಕಿಸ್ತಾನದ ಜೊತೆಗೂ ಸ್ನೇಹವನ್ನು ಉಳಿಸಿಕೊಂಡಿತ್ತು. ಓಐಸಿ ವಿಚಾರವಾಗಿ ಪಾಕಿಸ್ತಾನದ ಹೇಳಿಕೆ ಸೌದಿ ಅರೇಬಿಯಾವನ್ನು ಕೆರಳಿದ್ದು, ಸೌದಿ ಪಾಕಿಸ್ತಾನಕ್ಕೆ ಸರಿಯಾಗಿಯೇ ಶಾಕ್ ಕೊಟ್ಟಿದೆ. ಸೌದಿ ಅರೇಬಿಯಾದ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದ ಮುರಿದು ಬಿದ್ದಿರುವುದು ಪಾಕಿಸ್ತಾನಕ್ಕೆ ಆಘಾತವನ್ನ ತಂದೊಡ್ಡಿದೆ.

Leave A Reply

Your email address will not be published.