ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ : ಕೇರಳ ಮೂಲದ ಇಬ್ಬರು ನರ್ಸ್ ಸಾವು, ಮೂವರು ಗಂಭೀರ

ಸೌದಿ ಅರೇಬಿಯಾ : ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ದಾದಿಯರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ಕೊಟ್ಟಾಯಂನ ಶಿನ್ಸಿ ಫಿಲಿಪ್ (28 ವರ್ಷ ) ಮತ್ತು  ತಿರುವನಂತಪುರ ನಿವಾಸಿ ಅಶ್ವತಿ ವಿಜಯನ್ (31‌ವರ್ಷ) ಎಂಬವರೇ ಮೃತಪಟ್ಟವರು. ಅಪಘಾತ ದಲ್ಲಿ ಗಾಯಗೊಂಡ ಇತರ ಇಬ್ಬರು ಮಹಿಳಾ ದಾದಿ ಯರಾದ ಸ್ನೇಹ ಮತ್ತು ರಿಂಜಿ ಅವರನ್ನು ನಜ್ರಾನ್ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದು ಸೌದಿ ಅರೇಬಿಯಾದ ನಜ್ರಾನ್‌ನಲ್ಲಿ ರಸ್ತೆಯಲ್ಲಿ ಕಾರು ಚಲಿಸುತ್ತಿದ್ದಂತೆಯೇ ಇನ್ನೊಂದು ವಾಹನಕ್ಕೆ ಢಿಕ್ಕಿಯಾಗಿ ಈ ಅಪಘಾತ‌ ಸಂಭವಿಸಿದೆ. ಅಲ್ಲದೇ ಕಾರು ಚಾಲಕ ಅಜಿತ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ನಜ್ರಾನ್‌ನ ಕಿಂಗ್ ಖಾಲಿದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗು ತ್ತಿದೆ. ಎಂದು ನಜ್ರಾನ್‌ನ ಕೇರಳ ಮುಸ್ಲಿಂ ಸಾಂಸ್ಕೃತಿಕ ಕೇಂದ್ರ ಘಟಕ ತಿಳಿಸಿದೆ.

Comments are closed.