ಕನ್ನಡಿಗರಿಗೆ ಅವಮಾನಿಸಿದ ಅಮೇಜಾನ್ : ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಸಚಿವ ಲಿಂಬಾವಳಿ

ಬೆಂಗಳೂರು : ಇ – ಕಾಮರ್ಸ್ ದಿಗ್ಗಜ ಅಮೇಜಾನ್ ಗೂಗಲ್ ಬೆನ್ನಲ್ಲೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡ ಧ್ವಜವನ್ನು ಬಿಕಿನಿ ಮಾರಾಟ ಉತ್ತೇಜನಕ್ಕೆ ಬಳಿಸಿಕೊಂಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಅಮೇಜಾನ್ ಕೆನಡಾ ವಿರುದ್ದ ಕಾನೂನು ಕ್ರಮಕೈಗೊಳ್ಳುವುದಾಗಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಗೂಗಲ್ ಸರ್ಚ್ ನಲ್ಲಿ ಕನ್ನಡ ಭಾಷೆಯನ್ನು ಅವಮಾನಿಸಿದ ಬೆನ್ನಲ್ಲೇ ಗೂಗಲ್ ಕನ್ನಡಿಗರ ಕ್ಷಮೆಯಾಚಿಸಿತ್ತು. ಇದೀಗ ಅಮೇಜಾನ್ ಕೂಡ ಕನ್ನಡಗಿರ ಭಾವನೆಗೆ ಧಕ್ಕೆ ತರುವ ಕಾರ್ಯವನ್ನು ಮಾಡಿದೆ. ಅದ್ರಲ್ಲೂ ಅಮೇಜಾನ್ ಕೆನಡಾ ಘಟಕ ಕನ್ನಡಿಗರ ಧ್ವಜವನ್ನು ಬಳಸಿ ಬಿಕಿನಿ ತಯಾರಿಸಿ ಮಾರಾಟ ಮಾಡುತ್ತಿದೆ. ಇದರ ವಿರುದ್ದ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಕ್ರೋಶ ವ್ಯಕ್ತಪಡಿಸುತ್ತಿದ್ದು, ಅಮೇಜಾನ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಕೆಂಪು, ಹಳದಿ ಬಣ್ಣದ ಗಂಡ ಬೇರುಂಡ ಹೊಂದಿರುವ ಧ್ವಜವನ್ನು ಕನ್ನಡಿಗರು ಧ್ವಜವಾಗಿ ಬಳಕೆ ಮಾಡುತ್ತಿದ್ದಾರೆ. ಆದ್ರೆ ಬಿಕಿನಿಯಲ್ಲಿ ಅಮೇಜಾನ್ ಕೆಂಪು ಹಳದಿ ಹಾಗೂ ಗಂಡಬೇರುಂಡ ಚಿಹ್ನೆಯನ್ನೂ ಬಳಕೆ ಮಾಡಿಕೊಂಡಿದೆ. ಈಗಾಗಾಲೇ ಅಮೇಜಾನ್ ತನ್ನ ಆನ್ ಲೈನ್ ಫ್ಲ್ಯಾಟ್ ಫಾರ್ಮ್ ಗಳ ಮೂಲಕ ಮಾರಾಟವನ್ನೂ ಮಾಡುತ್ತಿದೆ.

ಅಮೇಜಾನ್ ವಿರುದ್ದ ಕನ್ನಡಿಗರು ತಿರುಗಿ ಬೀಳುತ್ತಿದ್ದಂತೆಯೇ ರಾಜ್ಯ ಸರಕಾರ ಕೂಡ ಎಚ್ಚೆತ್ತಿಕೊಂಡಿದೆ. ಸಚಿವ ಅರವಿಂದ ಲಿಂಬಾವಳಿ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಅಮೇಜಾನ್ ಸಂಸ್ಥೆ ಕೂಡಲೇ ಕನ್ನಡಿಗರ ಕ್ಷಮೆಯಾಚನೆ ಮಾಡಬೇಕು. ಇಲ್ಲವಾದ್ರೆ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

Comments are closed.