Expo Dubai : ನಟಿ ಐಶ್ವರ್ಯ ರೈ ಬಚ್ಚನ್ ದುಬೈ ಎಕ್ಸ್‌ಪೋಗೆ ಭೇಟಿ

ದುಬೈ: ನಟಿ ಐಶ್ವರ್ಯ ರೈ ದುಬೈ ಎಕ್ಸ್‌ಪೋಗೆ ಆಗಮಿಸಿದ್ದಾರೆ. ಎಕ್ಸ್‌ಪೋ ನಗರದ ಆಂಫಿಥಿಯೇಟರ್‌ನಲ್ಲಿ ನಡೆದ ಬೀದಿಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಬಚ್ಚನ್ ಭಾಗವಹಿಸಿದ್ದರು. ವಿಶ್ವದ ಖ್ಯಾತನಾಮ ಸೆಲೆಬ್ರಿಟಿಗಳು ಆಟಗಾರರು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಫ್ರೆಂಚ್ ಕಾಸ್ಮೆಟಿಕ್ಸ್ ಕಂಪನಿ ಹೋಲೋಬಾಚ್, ಎನ್ಜಿಒ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈವೆಂಟ್‌ನಲ್ಲಿ ಅಮೇರಿಕನ್ ನಟಿ ಅಜಾ ನವೋಮಿ ಕಿಂಗ್, ಅರಬ್ ನಟಿ ಮೋನಾ ಜಾಕಿ ಮತ್ತು ಸೌದಿ ಅರೇಬಿಯನ್ ನಟಿ ಅಸೀಲ್ ಒಮ್ರಾನ್ “ಬೀದಿಯಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯದ ವಿರುದ್ಧ ನಿಂತುಕೊಳ್ಳಿ ಅನ್ನು ಸಂವಾದಲ್ಲಿ ಐಶ್ವರ್ಯ ರೈ ಜೊತೆಯಾಗಿದ್ದರು.

ವಿಶ್ವದ ಶೇಕಡಾ 80 ರಷ್ಟು ಮಹಿಳೆಯರು ಒಮ್ಮೆಯಾದರೂ ಸಾರ್ವಜನಿಕವಾಗಿ ಹಿಂಸೆಗೆ ಒಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಶೇ .86 ರಷ್ಟು ಜನರಿಗೆ ಏನು ಮಾಡಬೇಕೆಂದು ತಿಳಿದಿಲ್ಲ. ಇಂತಹ ಸನ್ನಿವೇಶಗಳಲ್ಲಿ ಏನು ಮಾಡಬೇಕೆಂಬ ಅರಿವಿಲ್ಲದ ಪ್ರವೃತ್ತಿ ಇರುವ ಜಗತ್ತಿನಲ್ಲಿ ನಮ್ಮ ಹುಡುಗಿಯರು ಬೆಳೆಯುವುದನ್ನು ಒಪ್ಪಲಾಗದು ಎಂದು ನಟಿ ಐಶ್ವರ್ಯ ರೈ ಸ್ಪಷ್ಟಪಡಿಸಿದ್ದಾರೆ. ಎಂದಿಗೂ ಒಪ್ಪಿಕೊಳ್ಳಲಾಗದ ಈ ಪ್ರವೃತ್ತಿ ಮುಂದುವರಿಯುವ ಸಮಾಜದಲ್ಲಿ ಮೌನವಾಗಿರಬೇಡಿ ಎಂದು ಮಾಜಿ ವಿಶ್ವ ಸುಂದರಿ ವಿನಂತಿಸಿದ್ದಾರೆ.

ಇದನ್ನೂ ಓದಿ :  ಉಚಿತವಾಗಿ ಕುಟುಂಬ ಸ್ನೇಹಿತರ ಜೊತೆಗೆ ಅಬುದಾಬಿಗೆ ತೆರಳಲು ಇಲ್ಲಿದೆ ಸುವರ್ಣಾವಕಾಶ

ಇದನ್ನೂ ಓದಿ : ಕುವೈತ್‌ನಲ್ಲಿ ವಿದೇಶಿಗರಿಗೆ ಸಿಗುತ್ತೆ ಷರತ್ತು ಬದ್ಧ ಕುಟುಂಬ ವೀಸಾ

( Actress Aishwarya Rai Bachchan visits Dubai Expo )

Comments are closed.