Beauty Tips : ಐಸ್ ಕ್ಯೂಬ್ ನಿಂದ ಹೆಚ್ಚುತ್ತೆ ಚರ್ಮದ ಕಾಂತಿ

ನಿತ್ಯ ಮೇಕಪ್ ಗೂ ಮುನ್ನ ಐಸ್ ಕ್ಯೂಬ್ ಬಳಸುವುದರಿಂದ ತ್ವಚೆ ಸದಾ ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ. ಹಾಗೆಯೇ ಮುಖದ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು, ಚರ್ಮ ಹೊಳೆಯಲು ಐಸ್ ಕ್ಯೂಬ್ ಗಳನ್ನು ಬಳಸಿಕೊಳ್ಳಬಹುದು.

ಐಸ್ ಕ್ಯೂಬ್ ಗಳನ್ನು ನೇರವಾಗಿ ಮುಖಕ್ಕೆ ಹಚ್ಚಬಾರದು. ಬದಲಿಗೆ ಬಿಳಿಯ ಬಟ್ಟೆಯಲ್ಲಿ ಹಾಕಿಕೊಂಡು ನಯವಾಗಿ ಮುಖಕ್ಕೆ ಉಜ್ಜಬೇಕು. ಇದರಿಂದ ಮೊಡವೆ ಸಮಸ್ಯೆ ಕೂಡ ಐಸ್ ಕ್ಯೂಬ್ ಗಳನ್ನು ಬಳಸುವುದರಿಂದ ಮೊಡವೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Coriander leaves Facepack : ಕ್ರೀಮ್‌ಗಳಿಗೆ ಗುಡ್‌ಬೈ ಹೇಳಿ ಕೊತ್ತೊಂಬರಿ ಸೊಪ್ಪಿನ ಫೇಸ್ ಪ್ಯಾಕ್ ಟ್ತೈ ಮಾಡಿ

ಬೇಸಿಗೆಯಲ್ಲಿ ಮುಖಕ್ಕೆ ಫೌಂಡೇಶನ್ ಹಚ್ಚುವ ಮೊದಲು ಶುದ್ಧ ಕಾಟನ್ ಬಟ್ಟೆಯ ಮೇಲೆ ಐಸ್ ಕ್ಯೂಬ್ ಗಳನ್ನು ಹಾಕಿ ಅದರಿಂದ ಮುಖವನ್ನು ನಿಧಾನವಾಗಿ ಉಜ್ಜಿ. ನಂತರ ಫೌಂಡೇಶನ್ ಬಳಸಬೇಕು. ಹೀಗೆ ಮಾಡುವುದರಿಂದ ಚರ್ಮದ ಮೇಲಿನ ರಂಧ್ರಗಳು ಮುಚ್ಚಲು ಸಹಾಯವಾಗುತ್ತದೆ.

ದಿನನಿತ್ಯ ಎರಡು ಬಾರಿ 20 ನಿಮಿಷಗಳ ಕಾಲ ಐಸ್ ಕ್ಯೂಬ್ ಗಳಿಂದ ಮುಖವನ್ನು ನಿಧಾನವಾಗಿ ಉಜ್ಜಿ ತೊಳೆದುಕೊಂಡರೆ ಮುಖ ಹೊಳೆಯುತ್ತದೆ. ಎಣ್ಣೆಯ ತ್ವಚೆ ಇರುವವರು ಐಸ್ ಕ್ಯೂಬ್ ಬಳಸುವಾಗ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ಐಸ್ ಕ್ಯೂಬ್ ಗಳನ್ನು ಉಜ್ಜಿ.

ಇದನ್ನೂ ಓದಿ: Tomato Beauty : ಟೊಮ್ಯಾಟೋ ಬರೀ ತಿನ್ನೋದಕ್ಕಷ್ಟೆ ಅಲ್ಲಾ ಸೌಂದರ್ಯಕ್ಕೂ ದಿವ್ಯ ಔಷಧ

(Increased skin radiance from the ice cube)

Comments are closed.