Afghanistan : ಭಾರತಕ್ಕೆ ಪತ್ರ ಬರೆದ ತಾಲಿಬಾನ್‌ !

ನವದೆಹಲಿ : ಆಫ್ಘಾನಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ತಾಲಿಬಾನಿಗಳು ಇದೀಗ ಭಾರತಕ್ಕೆ ಪತ್ರವನ್ನು ಬರೆದಿದ್ದಾರೆ. ಆಫ್ಘಾನಿಸ್ತಾನ ಮತ್ತು ಭಾರತದ ನಡುವೆ ವಿಮಾನ ಹಾರಾಟವನ್ನು ಪುನರಾರಂಭಿಸುವ ಸಲುವಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿ ಇಂಡಿಯಾ ಟುಡೇ ವರದಿ ಮಾಡಿದೆ.

ಅಫ್ಘಾನಿಸ್ತಾನದ ನಾಗರೀಕ ವಿಮಾನಯಾನ ಪ್ರಾಧಿಕಾರದ ಹಂಗಾಮಿ ಸಚಿವ ಅಲ್ಹಾಜ್ ಹಮೀಉಲ್ಲಾ ಅಖುಂಜಾದಾ ಭಾರತದ ನಾಗರೀಕ ವಿಮಾನಯಾನ ಸಚಿವಾಲಯದ ಮಹಾನಿರ್ದೇಶಕ ಅರುಣ್‌ ಕುಮಾರ್‌ ಅವರಿಗೆ ಪತ್ರವನ್ನು ಬರೆದಿದ್ದಾರೆ. ಕಾಬೂಲ್‌ ವಿಮಾನ ನಿಲ್ದಾಣ ಅಮೇರಿಕನ್‌ ಪಡೆಗಳಿಂದಾಗಿ ಹಾನಿಗೊಳಗಾಗಿದೆ. ಹೀಗಾಗಿ ಕತಾರ್‌ನ ತಾಂತ್ರಿಕ ಸಹಾಯದೊಂದಿಗೆ ವಿಮಾನ ಹಾರಾಟಕ್ಕೆ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ನಿಲ್ಲದ ತಾಲಿಬಾನ್‌ ಅಟ್ಟಹಾಸ : ಮಗುವನ್ನು ನೇಣಿಗೇರಿಸಿ ಕೊಂದ ತಾಲಿಬಾನಿಗಳು

ಎರಡು ದೇಶಗಳ ನಡುವೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ ಕೊಡುವುದು ಮುಖ್ಯ ಉದ್ದೇಶವಾಗಿದೆ. ಜೊತೆ ವಿಮಾನ ಯಾನ ಆರಂಭದಿಂದಾಗಿ ವಾಣಿಜ್ಯ ವಿಮಾನಗಳ ಹಾರಾಟದಿಂದ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ ಅನ್ನೋದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಭಯೋತ್ಪಾದನೆ ನಿಯಂತ್ರಣ : ಕಮಲಾ ಹ್ಯಾರಿಸ್‌ ಜೊತೆ ಪ್ರಧಾನಿ ಮೋದಿ ಚರ್ಚೆ

(Taliban writes letter to India)

Comments are closed.