ತಾಲಿಬಾನಿಗಳಿಗೆ ಎದುರಾಯ್ತು ದೊಡ್ಡ ಸವಾಲು : ಆಫ್ಘಾನ್‍ನಲ್ಲಿ ಆಹಾರದ ಕೊರತೆ

ಕಾಬೂಲ್ : ಆಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಸಂಗ್ರಹಿಸಿಟ್ಟಿರುವ ಆಹಾರ ದಾಸ್ತಾನು ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆಗೆ ಖಾಲಿಯಾಗಲಿದ್ದು, ನಂತರ ಆಹಾರ ಕ್ಷಾಮ ತಲೆದೋರುವ ಸಾಧ್ಯತೆಗಳಿವೆ. ಕಳೆದ ಹಲವು ದಶಕಗಳಿಂದ ಯುದ್ಧ ನಡೆಸಿ 20 ವರ್ಷಗಳ ನಂತರ ಅಧಿಕಾರದ ಗದ್ದುಗೆ ಹಿಡಿದಿರುವ ತಾಲಿಬಾನಿಗಳಿಗೆ ಭವಿಷ್ಯದಲ್ಲಿ ಎದುರಾಗಲಿರುವ ಆಹಾರ ಕ್ಷಾಮವನ್ನು ಎದುರಿಸುವುದು ಸವಾಲಿನ ಗುರಿಯಾಗಲಿದೆ.

ಆಫ್ಘಾನ್‍ನ ಜನಸಂಖ್ಯೆ ಮೂರನೆ ಒಂದು ಭಾಗದಷ್ಟು ಮಂದಿ ಪ್ರತಿನಿತ್ಯ ತಿನ್ನಲು ಆಹಾರವಿಲ್ಲದೆ ಚಡಪಡಿಸುವ ಪರಿಸ್ಥಿತಿ ಉದ್ಭವಿಸಲಿದೆ ಎಂದು ವಿಶ್ವಸಂಸ್ಥೆಯಲ್ಲಿ ಆಫ್ಘಾನ್ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿರುವ ರಮೀಜ್ ಅಲಕ್‍ಬರೋವ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡುವುದಕ್ಕೆ ಆತುರವೇನು ಇಲ್ಲ : ಅಮೇರಿಕ

ವಿಶ್ವಸಂಸ್ಥೆ ಕಳೆದ ಕೆಲ ದಿನಗಳಿಂದ ಸಾವಿರಾರು ಟನ್ ಆಹಾರ ಉತ್ಪನ್ನಗಳನ್ನು ಆಫ್ಘಾನ್‍ಗೆ ಕಳುಹಿಸಿಕೊಟ್ಟಿದೆ. ಇದೀಗ ಆಹಾರ ದಾಸ್ತಾನು ಖಾಲಿಯಾಗುತ್ತಿದೆ. ಮತ್ತೆ ಅಲ್ಲಿಗೆ ಆಹಾರ ರವಾನಿಸಬೇಕಾದರೆ ಕನಿಷ್ಠ 200 ಮಿಲಿಯನ್ ಅಮೆರಿಕನ್ ಡಾಲರ್ ಹಣಕಾಸಿನ ನೆರವು ಬೇಕು ಎಂದು ಅವರು ತಿಳಿಸಿದ್ದಾರೆ.

ವಿಶ್ವ ಆಹಾರ ಯೋಜನೆಯಡಿ ಆಫ್ಘಾನ್‍ಗೆ ನೀಡಲಾಗುತ್ತಿದ್ದ ಆಹಾರ ಸಾಮಾಗ್ರಿಗಳನ್ನು ಮುಂದುವರೆಸಲು ನಮ್ಮ ಬಳಿ ದಾಸ್ತಾನು ಇಲ್ಲದ ಹಿನ್ನಲೆಯಲ್ಲಿ ಮುಂದಿನ ತಿಂಗಳಿನಿಂದ ಆಫ್ಘಾನ್‍ನಲ್ಲಿ ಆಹಾರದ ಹಾಹಾಕಾರ ತಾಂಡವವಾಡಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು ! ಕಾರಣ ಕೇಳಿದ್ರೆ ಶಾಕ್‌ ಆಗುತ್ತೀರಿ !

ಈಗಾಗಲೇ ಪೌರಕಾರ್ಮಿಕರಿಗೆ ವೇತನ ನೀಡಲಾಗುತ್ತಿಲ್ಲ. ಆಫ್ಘಾನ್ ಸ್ಥಳೀಯ ಕರೆನ್ಸಿ ಮೌಲ್ಯ ಕಳೆದುಕೊಂಡಿದೆ. ಇನ್ನು ವಿದೇಶಗಳಲ್ಲಿ ನೆಲೆಸಿರುವ ಆಫ್ಘಾನ್ನರ ಖಾತೆಗಳು ಫ್ರೀಜ್ ಆಗಿರುವುದರಿಂದ ಯಾವುದೆ ಹಣಕಾಸು ನೆರವು ಹರಿದುಬರದಂತಹ ಸ್ಥಿತಿಗೆ ಆಫ್ಘಾನ್ ಬಂದು ನಿಂತಿದೆ.

(The biggest challenge for the Taliban: the lack of food in Afghanistan)

Comments are closed.