UAE CORONA UPDATES : ಯುಎಇನಲ್ಲಿ ತಗ್ಗಿದ ಕೊರೊನಾ ಅಬ್ಬರ : 500ಕ್ಕಿಂತಲೂ ಕಡಿಮೆ ಪ್ರಕರಣ ದಾಖಲು

ಅಬುಧಾಬಿ : ಕೊರೊನಾ ವೈರಸ್‌ ಸೋಂಕಿನಿಂದ ತತ್ತರಿಸಿದ್ದ ಅರಬ್‌ ರಾಷ್ಟ್ರದಲ್ಲೀಗ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಯುಎಇಯಲ್ಲಿ 471 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, 604 ಜನರು ಚೇತರಿಸಿಕೊಂಡಿದ್ದಾರೆ. ಅಲ್ಲದೇ ಹೆಮ್ಮಾರಿ ಕೊರೊನಾ ಇಬ್ಬರನ್ನು ಬಲಿ ಪಡೆದಿದೆ ಎಂದು ಯುಎಇ ಆರೋಗ್ಯ ಸಚಿವಾಲಯ ಹೇಳಿದೆ.

ಕೋವಿಡ್ ಯುಎಇಯಲ್ಲಿ ಇದುವರೆಗೆ 732,299 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 7,23,941 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ಸೋಂಕಿನಿಂದ ಇದುವರೆಗೆ 2071 ಜನರು ಸಾವನ್ನಪ್ಪಿದ್ದಾರೆ. ಸದ್ಯ ಯುಎಇನಲ್ಲಿ 6,285 ಸಕ್ರೀಯ ಕೊರೊನಾ ಪ್ರಕರಣಗಳಿವೆ. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಯುಎಇಯಲ್ಲಿ 354,614 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಯುಎಇಯಲ್ಲಿ ಇದುವರೆಗೆ 79.9 ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಗಿದೆ.

ಯುಎಇಯಲ್ಲಿ ಕೋವಿಡ್ ಮರಣ ಪ್ರಮಾಣ 0.2 ಶೇಕಡಾ. ಇದು ಜಾಗತಿಕ ಸರಾಸರಿಗಿಂತ ಎರಡು ಪ್ರತಿಶತ ಕಡಿಮೆಯಿದೆ. ಕೋವಿಡ್ ಲಸಿಕೆ ಹೆಚ್ಚಾದಂತೆ ಯುಎಇಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಯುಎಇಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಜನರು ಈಗಾಗಲೇ ಕೊರೊನಾ ಮೊದಲ ಡೋಸ್‌ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ : ಉಚಿತವಾಗಿ ಕುಟುಂಬ ಸ್ನೇಹಿತರ ಜೊತೆಗೆ ಅಬುದಾಬಿಗೆ ತೆರಳಲು ಇಲ್ಲಿದೆ ಸುವರ್ಣಾವಕಾಶ

ಇದನ್ನೂ ಓದಿ : UAE : ಇನ್ಮುಂದೆ ಭಾರತದಿಂದ ಯುಎಇಗೆ ತೆರಳಲು ಕೋವಿಡ್ -19 ಲಸಿಕೆ ಪ್ರಮಾಣಪತ್ರ ಅಗತ್ಯವಿಲ್ಲ

ಇದನ್ನೂ ಓದಿ : Megan Fox : ಅವಾರ್ಡ್ ಫಂಕ್ಷನ್ ಗೆ ಬಟ್ಟೆ ಇಲ್ಲದೇ ಬಂದ್ರಾ ಹಾಲಿವುಡ್ ನಟಿ: ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಪೋಟೋ

( Reduced corona virus in the UAE: fewer than 500 cases registered )

Comments are closed.