Rave Party : ರೇವ್‌ ಪಾರ್ಟಿ ಮೇಲೆ ಪೊಲೀಸರ ದಾಳಿ : ಡ್ರಗ್ಸ್‌ ಸೇವಿಸಿ, ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರು ಹೊರವಲಯದಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಡ್ರಗ್ಸ್‌ ಸೇವಿಸಿ ಅರೆನಗ್ನ ಸ್ಥಿತಿಯಲ್ಲಿದ್ದವರು ಸೇರಿದಂತೆ ಒಟ್ಟು 20 ಜನರನ್ನು ಬಂಧಿಸಿದ್ದಾರೆ. ರೇವ್‌ ಪಾರ್ಟಿಯಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ. ಪೊಲೀಸರು ಹಲವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಬೆಂಗಳೂರು ಹೊರವಲಯದ ಆನೇಕಲ್ ಬಳಿಯಲ್ಲಿರುವ ತಮ್ಮನಾಯಕನಹಳ್ಳಿ ಬಳಿಯಲ್ಲಿರುವ ಹಸಿರು ವ್ಯಾಲ್ಯೂ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ರೆಸಾರ್ಟ್ ನ ನಿರ್ಜನ ಪ್ರದೇಶದಲ್ಲಿದ್ದು ಆಗಾಗ ರೇವ್‌ ಪಾರ್ಟಿ ನಡೆಸಲಾಗುತ್ತಿತ್ತು. ಇದೀಗ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು, ಡ್ರಗ್ಸ್‌ ಸೇವಿಸಿ ಹುಚ್ಚೆದ್ದು ಕುಣಿಯುತ್ತಿದ್ದ ಅರೆ ನಗ್ನ ಸ್ಥಿತಿಯಲ್ಲಿರುವ ಯುವಕ, ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಆನೇಕಲ್ ಪೊಲೀಸರು ಸುಮಾರು 20 ಜನರನ್ನು ಬಂಧಿಸಿದ್ದು, 6 ಕಾರು ಸೇರಿದಂತೆ 15ಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್‌ ಪೆಡ್ಲರ್‌ ವಿರುದ್ದ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ರೆಸಾರ್ಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆಯಲ್ಲಿ ಅರೆನಗ್ನ ಸ್ಥಿತಿಯಲ್ಲಿದ್ದವರೆಲ್ಲಾ ಸ್ಥಳದಿಂದ ಎಸ್ಕೇಪ್‌ ಆಗಿದ್ದಾರೆ. ಇದೀಗ ಪೊಲೀಸರು ರೇವ್‌ ಪಾರ್ಟಿಯ ಕುರಿತು ಮಾಹಿತಿಯನ್ನು ಕರೆ ಹಾಕುತ್ತಿದ್ದಾರೆ.

ಇದನ್ನೂ ಓದಿ :  ಇಪತ್ತು ರೂಪಾಯಿ ವಿಚಾರಕ್ಕೆ ಸ್ನೇಹಿತನ ಕೊಲೆ : ಮೂವರ ಬಂಧನ

ಇದನ್ನೂ ಓದಿ : 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ : 42 ವರ್ಷದ ಕಾಮುಕ ಅರೆಸ್ಟ್‌

( Police Raid Rave Party in Hasiruvally Resort Bangalore Near Anekal, Arrested 20 persons )

Comments are closed.