ಪದವೀಧರರಿಗೆ ಉದ್ಯೋಗಾವಕಾಶ : 6,506 ಕೇಂದ್ರ ಸರಕಾರದ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೀವು ಪದವೀಧರರಾ.. ಉದ್ಯೋಗಾವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ .. ಹಾಗಾದ್ರೆ ನಿಮಗೆ ಇಲ್ಲಿದೆ ಸುವರ್ಣಾವಕಾಶ. ಯಾವುದೇ ಪದವಿಯಾಗಿದ್ರೂ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಟಾಪ್ ಸೆಲೆಕ್ಷನ್ ಕಮಿಷನ್ (SSC) ಕಂಬೈಂಡ್ ಗ್ರಾಜ್ಯುಯೆಟ್ ಲೆವೆಲ್ ಎಕ್ಸಾಮಿನೇಷನ್ – 2020 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಅಸಿಸ್ಟೆಂಟ್, ಇನ್ಸ್ ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್, ಇನ್ಸ್ ಪೆಕ್ಟರ್ ಎಕ್ಸೈಸ್, ಸಬ್ ಇನ್ಸ್ ಪೆಕ್ಟರ್ಸ್ ಸಿಬಿಐ, ಎನ್ಐಎ, ಎನ್.ಸಿಬಿ., ಡಿವಿಜನಲ್ ಅಕೌಂಟೆಂಟ್, ಆಡಿಟರ್, ಟ್ಯಾಕ್ಸ್ ಅಸಿಸ್ಟೆಂಟ್ ಇನ್ನೂ ಮುಂತಾದ 6506 ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.

ವಿದ್ಯಾರ್ಹತೆ: ಯಾವುದೇ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ: 18 ರಿಂದ 27 ವರ್ಷಗಳು, ಪರಿಶಿಷ್ಟ ಜಾತಿ/ಪಂಗಡ/ ಓಬಿಸಿ/ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ನಿಯಮಾನುಸಾರ ರಿಯಾಯಿತಿ ಇರುತ್ತದೆ ಅರ್ಜಿ ಸಲ್ಲಿಸಲು ಜ.31 ಅಂತಿಮ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ : http://ssckkr.kar.nic.in ಅಥವಾ http://ssc.nic.in ನಲ್ಲಿ ಲಭ್ಯವಿರುವ ಮಾಹಿತಿಯನ್ನು ಪಡೆಯುವುದು. ಹಾಗೂ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Comments are closed.