Aadhaar Supervisor jobs 2026: ಬೆಂಗಳೂರು: ಸ್ವಂತ ಜಿಲ್ಲೆಯಲ್ಲೇ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಡಿಜಿಟಲ್ ಇಂಡಿಯಾ ಅಭಿಯಾನದಡಿ ಭರ್ಜರಿ ಅವಕಾಶವೊಂದು ಒದಗಿಬಂದಿದೆ. ಸಿಎಸ್‌ಸಿ (CSC) ಇ-ಗವರ್ನೆನ್ಸ್ ಸಂಸ್ಥೆಯು ದೇಶಾದ್ಯಂತ ಇರುವ ಆಧಾರ್ ಸೇವಾ ಕೇಂದ್ರಗಳಲ್ಲಿ (ASKs) ಖಾಲಿ ಇರುವ ಮೇಲ್ವಿಚಾರಕ (Supervisor) ಮತ್ತು ಆಪರೇಟರ್ (Operator) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಪ್ರಮುಖ ವಿವರಗಳು:
- ಒಟ್ಟು ಹುದ್ದೆಗಳು: 252
- ಹುದ್ದೆಯ ಹೆಸರು: ಆಧಾರ್ ಮೇಲ್ವಿಚಾರಕ ಮತ್ತು ಆಪರೇಟರ್.
- ನೇಮಕಾತಿ ವಿಧಾನ: ಸಂಪೂರ್ಣವಾಗಿ ಒಪ್ಪಂದದ ಆಧಾರಿತ (ಆರಂಭದಲ್ಲಿ 1 ವರ್ಷದ ಅವಧಿ).
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 10, 2026.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
- ಕನಿಷ್ಠ 12ನೇ ತರಗತಿ (ಪಿಯುಸಿ) ಉತ್ತೀರ್ಣರಾಗಿರಬೇಕು.
- ಅಥವಾ 10ನೇ ತರಗತಿ ಜೊತೆಗೆ 2 ವರ್ಷಗಳ ಐಟಿಐ ಅಥವಾ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ ಮಾಡಿರಬೇಕು.
- ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಮತ್ತು ಸ್ಥಳೀಯ ಭಾಷೆಯ ಪರಿಜ್ಞಾನ ಅತ್ಯಗತ್ಯ.
- ಅರ್ಜಿದಾರರಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
ಬೆಂಗಳೂರಿನ S-VYASA ವಿಶ್ವವಿದ್ಯಾಲಯದಲ್ಲಿ HR ಅಸಿಸ್ಟೆಂಟ್, CA ಇಂಟರ್ನ್ಶಿಪ್, ಯೋಗ, ಲೈಫ್ ಸೈನ್ಸಸ್, ಪ್ರಾಧ್ಯಾಪಕ ಹುದ್ದೆಗಳಿಗೆ ಅಪ್ಲೈ ಮಾಡಿ; ಇಲ್ಲಿದೆ ವಿವರ
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
- ಅಧಿಕೃತ ವೆಬ್‌ಸೈಟ್ csc.gov.in/ask ಗೆ ಭೇಟಿ ನೀಡಿ.
- ನಿಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿ ಲಭ್ಯವಿರುವ ಹುದ್ದೆಗಳನ್ನು ಗಮನಿಸಿ.
- ‘Apply Now’ ಕ್ಲಿಕ್ ಮಾಡಿ ವೈಯಕ್ತಿಕ ವಿವರಗಳು ಹಾಗೂ ಪ್ಯಾನ್ (PAN) ಕಾರ್ಡ್ ಮಾಹಿತಿ ಭರ್ತಿ ಮಾಡಿ.
- ನಿಮ್ಮ ಅಪ್‌ಡೇಟೆಡ್ ರೆಸ್ಯೂಮ್ (Resume) ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಬ್‌ಮಿಟ್ ಮಾಡಿ.
ಗಮನಿಸಿ: ಈ ನೇಮಕಾತಿಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಿಎಸ್‌ಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


