AAI Recruitment 2022 : ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಪದವೀಧರರಿಗೆ ಉದ್ಯೋಗಾವಕಾಶ

(AAI Recruitment 2022)ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (AAI) ಖಾಲಿ ಇರುವ 227 ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋಲ್ಕತ್ತಾದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 4 2022 ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

AAI Recruitment 2022 : ಹುದ್ದೆಗಳ ವಿವರ:

ಸಂಸ್ಥೆಯ ಹೆಸರು: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(AAI)
ಹುದ್ದೆಯ ಹೆಸರು: ಗ್ರಾಜುಡೇಟ್,ಡಿಪ್ಲೊಮಾ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ:227
ಉದ್ಯೋಗ ಸ್ಥಳ:ಕೋಲ್ಕತ್ತಾ
ವೇತನ: ರೂ. 9,000 ರಿಂದ ರೂ. 15,000/-

ವಯೋಮಿತಿ ವಿವರ:
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (AAI) ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅರ್ಭ್ಯರ್ಥಿಗಳು ಕನಿಷ್ಠ18 ರಿಂದ ಗರಿಷ್ಠ 26 ವಯಸ್ಸಿನವರಾಗಿರಬೇಕು.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (AAI) ಖಾಲಿ ಇರುವ ಹುದ್ದೆಗಳ ಸಂಖ್ಯೆಯ ವಿವರ:
ಸಿವಿಲ್ (ಪದವಿ)- 6
ಎಲೆಕ್ಟ್ರಿಕಲ್ (ಪದವಿ)- 7
ಎಲೆಕ್ಟ್ರಾನಿಕ್ಸ್ (ಪದವಿ)- 13
ಕಂಪ್ಯೂಟರ್ ವಿಜ್ಞಾನ/ ಮಾಹಿತಿ ತಂತ್ರಜ್ಞಾನ (ಪದವಿ)-3
ಮೆಕ್ಯಾನಿಕಲ್/ ಆಟೋಮೊಬೈಲ್ (ಪದವಿ) -1
ಸಿವಿಲ್ (ಡಿಪ್ಲೊಮಾ) -10
ಎಲೆಕ್ಟ್ರಿಕಲ್ (ಡಿಪ್ಲೊಮಾ) -10
ಎಲೆಕ್ಟ್ರಾನಿಕ್ಸ್ (ಡಿಪ್ಲೊಮಾ)- 25
ಕಂಪ್ಯೂಟರ್ ಸೈನ್ಸ್ /ಮಾಹಿತಿ ತಂತ್ರಜ್ಞಾನ (ಡಿಪ್ಲೊಮಾ) -10
ಮೆಕ್ಯಾನಿಕಲ್/ ಆಟೋಮೊಬೈಲ್ (ಡಿಪ್ಲೊಮಾ)- 5
ಐಟಿಐ ಟ್ರೆಡ್- 35
ವಿದ್ಯಾರ್ಹತೆ ವಿವರ:
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (AAI) ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅರ್ಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಮತ್ತು ಡಿಪ್ಲೊಮಾ ಅಭ್ಯರ್ಥಿಗಳು AICTE, GOI ನಿಂದ ಮಾನ್ಯತೆ ಪಡೆದ ಸ್ಟ್ರೀಮ್‌ಗಳಲ್ಲಿ ಪೂರ್ಣ ಸಮಯದ ನಾಲ್ಕು ವರ್ಷಗಳ ಪದವಿ ಅಥವಾ ಮೂರು ವರ್ಷಗಳ ಡಿಪ್ಲೊಮಾವನ್ನು ಹೊಂದಿರಬೇಕು.
ITI ಟ್ರೇಡ್ ಅಭ್ಯರ್ಥಿಗಳು AICTE, GOI ನಿಂದ ಗುರುತಿಸಲ್ಪಟ್ಟ ಸಂಸ್ಥೆಗಳಿಂದ ವಹಿವಾಟುಗಳ ITI/NCVT ಪ್ರಮಾಣಪತ್ರವನ್ನು ಹೊಂದಿರಬೇಕು.

ಇದನ್ನೂ ಓದಿ:DHFWS Haveri Recruitment 2022:119 ದಾದಿಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ:JIPMER Recruitment 2022:433 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ: ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (AAI) ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅರ್ಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (AAI) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (AAI) ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್‌ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ)3-11-2022 ರಿಂದ4-12-2022 ರವರೆಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI)ಅಧಿಕೃತ ವೆಬ್‌ಸೈಟ್ ಆದ www.aai.aeroನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 3 ನವೆಂಬರ್ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 4 ಡಿಸೆಂಬರ್ 2022

AAI Recruitment 2022:Job Opportunity for Graduates in Airport Authority

Comments are closed.