Ingredients Soaked In Water :ನೀರಿನಲ್ಲಿ ನೆನೆಸಿ ಈ ಪದಾರ್ಥಗಳನ್ನು ತಿಂದ್ರೆ ಆರೋಗ್ಯ ವೃದ್ದಿಸುತ್ತೆ !

(Ingredients Soaked In Water)ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳುವುದಕ್ಕೆ ನೀರು ಪ್ರಮುಖ ಪಾತ್ರವಹಿಸುತ್ತದೆ. ದೇಹದಲ್ಲಿನ ಹಲವು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಲು ನೀರು ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ನಿತ್ಯವೂ ಹೆಚ್ಚು ಹೆಚ್ಚು ನೀರನ್ನು ಕುಡಿಯುವ ಅಭ್ಯಾಸವನ್ನು ವೃದ್ದಿಸಿಕೊಳ್ಳಬೇಕು. ನೀರು ಕುಡಿಯುವುದರಿಂದ ಮುಖದ ಕಾಂತಿ ಅರಳುತ್ತದೆ. ಮಾತ್ರವಲ್ಲದೇ ಆರೋಗ್ಯ ಸಮಸ್ಯೆಗಳಿಗೂ ಪರಿಹಾರದ ದೊರಕುತ್ತದೆ. ಇನ್ನು ಕೆಲವು ಪದಾರ್ಥಗಳನ್ನು ನಾವು ಹಾಗೆಯೇ ತಿನ್ನುತ್ತೇವೆ. ಆದರೆ ಕೆಲವು ಪದಾರ್ಥಗಳನ್ನು ನೀರಿನಲ್ಲಿ ನೆನೆಸಿ ತಿಂದ್ರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದ್ರೆ ಅಂತಹ ವಸ್ತುಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.

(Ingredients Soaked In Water)ಕೇಸರಿ ಮತ್ತು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿಟ್ಟು ಕುಡಿಯುವುದರಿಂದ ಋತುಚಕ್ರದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ನೀರನ್ನಷ್ಟೇ ಕುಡಿಯುವ ಜೊತೆಗೆ ಒಣದ್ರಾಕ್ಷಿ ತಿಂದರೆ ಇನ್ನು ಉತ್ತಮ. ಅಷ್ಟೇ ಅಲ್ಲದೆ ತೂಕ ವನ್ನು ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ.

ಕಪ್ಪು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿಟ್ಟು ಕುಡಿಯುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೆ, ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದರಲ್ಲಿ ಹೆಚ್ಚು ಪೊಟ್ಯಾಸಿಯಂ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕರಿಬೇವನ್ನು ನೀರಿನಲ್ಲಿ ನೆನಸಿಟ್ಟು ಪ್ರತಿನಿತ್ಯ ಆ ನೀರನ್ನು ಕುಡಿಯುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯಮಾಡುತ್ತದೆ.ಪ್ರತಿನಿತ್ಯ ಕರಿಬೇವಿನ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ:Mint Chutney:ಪುದೀನಾ ಚಟ್ನಿ ರುಚಿಗಷ್ಟೇ ಅಲ್ಲಾ, ಆರೋಗ್ಯಕ್ಕೂ ಉತ್ತಮ

ಇದನ್ನೂ ಓದಿ:Juice Good For Health : ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ

ಓಮದ ಕಾಳು, ಜೀರಿಗೆ, ಸೊಂಪು ಈ ಮೂರನ್ನೂ ನೀರಿನಲ್ಲಿ ನೆನಸಿ ಪ್ರತಿನಿತ್ಯ ಬೆಳಿಗ್ಗೆ ಕುಡಿಯುವುದರಿಂದ ಕರುಳಿನ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ.

ಮೆಂತೆಕಾಳನ್ನು ನೆನಸಿಟ್ಟು ಆ ನೀರನ್ನು ಪ್ರತಿನಿತ್ಯ ಬೆಳಿಗ್ಗೆ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು. ಜೊತೆಗೆ ನೆನಸಿಟ್ಟ ಮೆಂತೆಯನ್ನು ಸೇವಿಸಿದರೆ ಆರೋಗ್ಯಕ್ಕೆ ಇನ್ನು ಮಧುಮೇಹವನ್ನು ಇನ್ನಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಒಂದುವೇಳೆ ಬರಿ ಮೆಂತೆಕಾಳನ್ನು ತಿನ್ನಲು ಆಗುವುದಿಲ್ಲ ಎಂದರೆ ಹೆಸರು ಕಾಳಿನೊಂದಿಗೆ ನೆನಸಿ ತಿನ್ನುವುದರಿಂದ ಆರೋಗ್ಯಕ್ಕೆ ಇನ್ನು ಉತ್ತಮ.


ಒಂದು ಲೋಟ ನೀರಿಗೆ ಒಂದು ಪಿಂಚ್ ಅರಿಶಿಣ ಮತ್ತು ಜೇನುತುಪ್ಪ ವನ್ನು ಬೆರೆಸಿ ಪ್ರತಿನಿತ್ಯ ಬೆಳಿಗ್ಗೆ ಕುಡಿಯುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಒಂದು ಲೋಟದಲ್ಲಿ ಪುದೀನಾ ಎಲೆಗಳು, ತುಳಸಿ ಬೀಜವನ್ನು ಹಾಕಿ ಅದಕ್ಕೆ ಬಿಸಿ ನೀರನ್ನು ಹಾಕಬೇಕು ನಂತರ ನಿಂಬೆ ರಸವನ್ನು ಹಾಕಿಕೊಂಡು ಕುಡಿದರೆ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

Eating these ingredients soaked in water will improve your health

Comments are closed.