ಫ್ಲೈಯಿಂಗ್‌ ಮತ್ತು ಗ್ರೌಂಡ್‌ ಡ್ಯೂಟಿ ಕಮೀಶನ್ಡ್‌ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ : ಎನ್‌ಸಿಸಿ ಕ್ಯಾಂಡಿಡೇಟ್‌ಗಳು ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಿ

ಭಾರತೀಯ ವಾಯುಪಡೆಯು, ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ AFCAT–2 2026 ಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ AFCAT ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮೇ 20 ರಿಂದ ಪ್ರಾರಂಭವಾಗಲಿದೆ.

ಭಾರತೀಯ ವಾಯುಪಡೆಯಲ್ಲಿ ಫ್ರೈಯಿಂಗ್‌ ಮತ್ತು ಗ್ರೌಂಡ್‌ ಡ್ಯೂಟಿ ಶಾಖೆಗಳಲ್ಲಿ ಕಮಿಶನ್ಡ್‌ ಆಫೀಸರ್‌ ಆಗುವ ಕನಸು ಕಾಣುತ್ತಿರುವ ಯುವಕರಿಗೆ ಗುಡ್‌ ನ್ಯೂಸ್‌. ಭಾರತೀಯ ವಾಯುಪಡೆಯು, ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ AFCAT–2 2026 ಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ AFCAT ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮೇ 20 ರಿಂದ ಪ್ರಾರಂಭವಾಗಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಜೂನ್‌ 19 ರ ಒಳಗೆ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. AFCAT ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ ಮತ್ತು ಮಾನದಂಡಗಳೇನು? ಇಲ್ಲಿದೆ ಓದಿ.

ವಿದ್ಯಾರ್ಹತೆ

ಈ ಬಾರಿ ಅಭ್ಯರ್ಥಿಗಳ ವಿದ್ಯಾರ್ಹತೆ ಮಾನದಂಡಗಳನ್ನು ಬದಲಾಯಿಸಲಾಗಿದೆ. ಹೊಸ ಮಾನದಂಡದ ಪ್ರಕಾರ ಅರ್ಜಿ ಸಲ್ಲಿಸಲು 60% ಅಂಕ ಪಡೆಯುವ ಅಗತ್ಯವಿಲ್ಲ. ಆದರೆ 12 ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತದಲ್ಲಿ 50% ಅಂಕ ಪಡೆಯುವುದು ಕಡ್ಡಾಯವಾಗಿದೆ.

ವಯೋಮಿತಿ

ಫ್ಲೈಯಿಂಗ್ ಬ್ರಾಂಚ್‌ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 20 ರಿಂದ 24 ವರ್ಷ ವಯಸ್ಸಿನವರಾಗಿರಬೇಕು ಮತ್ತು ಗ್ರೌಂಡ್ ಡ್ಯೂಟಿ ಟೆಕ್ನಿಕಲ್ ಮತ್ತು ನಾನ್-ಟೆಕ್ನಿಕಲ್‌ಗೆ ಅರ್ಜಿ ಸಲ್ಲಿಸಲು 20 ರಿಂದ 26 ವರ್ಷ ವಯಸ್ಸಿನೊಳಗಿರಬೇಕು. ವಯಸ್ಸಿನ ಲೆಕ್ಕಾಚಾರವನ್ನು ಜುಲೈ 01, 2027 ಕ್ಕೆ ಅನುಗಣವಾಗಿ ಲೆಕ್ಕಹಾಕಲಾಗುತ್ತದೆ.

ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ ಎಸ್‌ಎಸ್‌ಸಿ ಆಫೀಸರ್‌ ಹುದ್ದೆ ನೇಮಕಾತಿ ಅಧಿಸೂಚನೆ : ಅರ್ಜಿ ಸಲ್ಲಿಕೆ ಹೇಗೆ?

ನಿಮಗೆ ಸಿಗುವ ಸ್ಟೈಫಂಡ್‌ ಎಷ್ಟು?

AFCAT ಪರೀಕ್ಷೆಯಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರೂ.ಗಳನ್ನು ನೀಡಲಾಗುತ್ತದೆ.

ಯಾರಿಗೆ ಅರ್ಜಿ ಶುಲ್ಕವಿಲ್ಲ?

ಮೇ 20 ರಿಂದ ಪ್ರಾರಂಭವಾಗುವ AFCAT ಅರ್ಜಿ ಸಲ್ಲಿಕೆಗೆ ಎನ್‌ಸಿಸಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಭರಿಸುವ ಅಗತ್ಯವಿಲ್ಲ. ಆದರೆ ಇತರ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ ಯೇಗೆ?

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೂರು ಹಂತಗಳನ್ನು ಯಶಸ್ವಿಯಾಗಿ ಉತ್ತೀರ್ಣರಾಗಲೇಬೇಕು. ಮೊದಲನೆಯದು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಎಸ್‌ಎಸ್‌ಬಿ ಓಟ ಮತ್ತು ಪುಷ್-ಅಪ್‌ಗಳಂತಹ ಪರೀಕ್ಷೆಗಳನ್ನು ಸಹ ನಡೆಸಲಾಗುತ್ತದೆ.

ಹಚ್ಚೆಗಳಿಗೆ ಸಂಬಂಧಿಸಿದ ಕಠಿಣ ನಿಯಮವಿದೆಯೇ?

ಹೌದು, ಈ ಪರೀಕ್ಷೆ ಬರೆಯುವ ಮೊದಲು ಹಚ್ಚೆಗಳಿಗೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಳ್ಳಿ. ನಿಯಮದ ಪ್ರಕಾರ ನಿಮ್ಮ ದೇಹದ ಮೇಲೆ ಶಾಶ್ವತ ಹಚ್ಚೆಗಳನ್ನು ಹಾಕಿಸಿಕೊಳ್ಳುವುದನ್ನು ನಿರ್ಬಂಧಿಸಿಲಾಗಿದೆ. ಆದರೆ ಬುಡಕಟ್ಟು ಸಮುದಾಯಗಳಿಗೆ ಮತ್ತು ಸಂಪ್ರದಾಯಗಳ ಪ್ರಕಾರ ವಿನಾಯಿತಿ ನೀಡಲಾಗುತ್ತದೆ. ಎರಡೂ ಕೈಗಳ ಒಳಭಾಗದಲ್ಲಿ, ಮೊಣಕೈಯಿಂದ ಮಣಿಕಟ್ಟಿನವರೆಗೆ ಮತ್ತು ಅಂಗೈಯ ಹಿಂಭಾಗದಲ್ಲಿ ಸಣ್ಣ ಹಚ್ಚೆ ಹಾಕಿಸಿಕೊಳ್ಳಲು ಅವಕಾಶವಿದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು AFCAT ಯ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಅಲ್ಲಿ ಕೇಳಿರುವ ಮಾಹಿತಿಗಳಿಗೆ ಸರಿಯಾದ ಉತ್ತರ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.