9ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ : 137 ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಖಾಲಿ ಇರುವ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ವಿಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 23 ರೊಳಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟು ಹುದ್ದೆಗಳು: 137
ಅಂಗನವಾಡಿ ಕಾರ್ಯಕರ್ತೆ- 46
ಅಂಗನವಾಡಿ ಸಹಾಯಕಿ- 91

ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತೆ :
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಪಾಸ್ ಆಗಿರಬೇಕು.
ಅಂಗನವಾಡಿ ಸಹಾಯಕಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 4ನೇ ತರಗತಿ ತೇರ್ಗಡೆಯಾಗಿದ್ದು, ಗರಿಷ್ಠ 9ನೇ ತರಗತಿ ಪಾಸ್ ಆಗಿರಬೇಕು. ಈ ಹುದ್ದೆಗಳಿಗೆ 9ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರನ್ನು ಪರಿಗಣಿಸುವುದಿಲ್ಲ. ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೆಯೇ 35 ವರ್ಷ ದಾಟಿರಬಾರದು.

ಕೊನೆಯ ದಿನಾಂಕ : 23-9-2020 ಕೊನೆಯ ದಿನಾಂಕವಾಗಿದ್ದು, ಸಂಜೆ 5.30 ಗಂಟೆಯೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಕೆಳಗಿನ ಲಿಂಕ್ ಬಳಸಿ ಅರ್ಜಿಯನ್ನು ಸಲ್ಲಿಸಿ. https://anganwadirecruit.kar.nic.in/docs/25602049435.pdf

Leave A Reply

Your email address will not be published.