CCRH ನೇಮಕಾತಿ 2025: ಗ್ರೂಪ್‌ ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

CCRH Recruitment 2025: ಆಯುಶ್‌ ಇಲಾಖೆಯ ಅಧೀನದಲ್ಲಿರುವ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ರಿಸರ್ಚ್‌ ಇನ್‌ ಹೋಮಿಯೋಪತಿ ಗ್ರೂಪ್‌ A, B ಮತ್ತು C ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

ಸಂಶೋಧನಾ ಅಧಿಕಾರಿ, ಜೂನಿಯರ್‌ ಲೈಬ್ರರಿಯನ್‌ ಮತ್ತು ಎಕ್ಸ್‌–ರೇ ತಂತ್ರಜ್ಞ ಹುದ್ದೆಗಳಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಸಿಬಹುದಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ನವೆಂಬರ್‌ 5 ರಿಂದ ಪ್ರಾರಂಭವಾಗಿದ್ದು, ಅಭ್ಯರ್ಥಿಗಳು ನವೆಂಬರ್ 26, 2025ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 90 ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳಾಗುತ್ತದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನದ ಒಳಗಾಗಿ ಸರಿಯಾದ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಮತ್ತು ಮಾನದಂಡಗಳನ್ನು ನೋಡೋಣ.

ಹುದ್ದೆಗಳ ವಿವರ

ಸಿಸಿಆರ್‌ಎಚ್‌ ನೇಮಕಾತಿಯಲ್ಲಿ ಹಲವಾರು ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ಎ ಹುದ್ದೆಗಳಲ್ಲಿ 12 ರಿಸರ್ಚ್‌ ಆಫೀಸರ್‌ (ಹೋಮಿಯೋಪತಿ), 1 ರಿಸರ್ಚ್‌ ಆಫೀಸರ್‌ (ಎಂಡೋಕ್ರೈನಾಲಾಜಿ), ಮತ್ತು 1 ರಿಸರ್ಚ್‌ ಆಫೀಸರ್‌ (ಪೆಥಾಲಾಜಿ).

ಇನ್ನು ಗ್ರೂಪ್‌ ಬಿ ಹುದ್ದೆಯಲ್ಲಿ ಜೂನಿಯರ್‌ ಲೈಬ್ರರಿಯನ್‌, ಫಾರ್ಮಾಸಿಸ್ಟ್‌, X–ರೇ ಟೆಕ್ನಿಷಿಯನ್ ಮತ್ತು ಅಸಿಸ್ಟಂಟ್‌ ರಿಸರ್ಚ್‌ ಆಫೀಸರ್‌ (ಫಾರ್ಮಾಕಾಲಾಜಿ) ಸೇರಿವೆ.

ಗ್ರೂಪ್‌ ಸಿ ಹುದ್ದೆಗಳಲ್ಲಿ ಎಲ್‌ಡಿಸಿ, ಡ್ರೈವರ್, ಸ್ಟಾಫ್‌ ನರ್ಸ್‌, ಮೆಡಿಕಲ್‌ ಲ್ಯಾಬ್‌ ಟೆಕ್ನಿಷಿಯನ್‌, ಜೂನಿಯರ್‌ ಮೆಡಿಕಲ್‌ ಲ್ಯಾಬ್‌ ಟೆಕ್ನಾಲಾಜಿಸ್ಟ್‌ ಮತ್ತು ಜೂನಿಯರ್‌ ಸ್ಟೆನೊಗ್ರಾಫರ್‌ ಸೇರಿವೆ.

ಶೈಕ್ಷಣಿಕ ಅರ್ಹತೆ

ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ಇದನ್ನೂ ಓದಿ: ಡಿಪ್ಲೊಮಾ ಆದವರಿಗೆ ಗುಡ್ ನ್ಯೂಸ್! ರೈಲ್ವೆ ಇಲಾಖೆಯಲ್ಲಿ ಜೂನಿಯ‌ರ್ ಎಂಜಿನಿಯರ್ ಆಗುವ ಸುವರ್ಣಾವಕಾಶ

ವಯೋಮಿತಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ಹುದ್ದೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯು ಹುದ್ದೆಗೆ ಅನುಗುಣವಾಗಿ 18, 25, 27 ಮತ್ತು 40 ವರ್ಷಗಳು.

ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ.

ಅರ್ಜಿ ಶುಲ್ಕ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಗ್ರೂಪ್ ಎ ಹುದ್ದೆಗಳಿಗೆ 1,000 ರೂ. ಮತ್ತು ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ 500 ರೂ. ಅರ್ಜಿ ಶುಲ್ಕವಿದೆ.

ಇದಲ್ಲದೆ, ಎಸ್‌ಸಿ/ಎಸ್‌ಟಿ, ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

  • ಈ ನೇಮಕಾತಿಯಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಸಿಸಿಆರ್‌ಎಚ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ಅಲ್ಲಿ ನೋಂದಣಿ ಮಾಡಿಕೊಳ್ಳಲು ಇ–ಮೇಲ್‌ ಐಡಿ, ಮೊಬೈಲ್‌ ಸಂಖ್ಯೆ ನೀಡಬೇಕು.
  • ನಂತರ ಲಾಗಿನ್‌ ಆಗಿ, ಹುದ್ದೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
  • ಬಳಿಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಸಂಬಂಧಪಟ್ಟ ಹುದ್ದೆಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕು.
  • ಇದಾದ ಬಳಿಕ ಮತ್ತೊಮ್ಮೆ ಅರ್ಜಿಯನ್ನು ಪರಿಶೀಲಿಸಿ, ಅರ್ಜಿಯನ್ನು ಸಲ್ಲಿಸಬೇಕು.
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರತಿಯ ಪ್ರಿಂಟ್‌ಔಟ್‌ ತೆಗೆದುಕೊಳ್ಳಬೇಕು.

ಇದನ್ನೂ ಓದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಎಲ್‌ಬಿಒ ನೇಮಕಾತಿ: ಪದವೀಧರರು ಇಂದೇ ಅರ್ಜಿ ಸಲ್ಲಿಸಿ

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories