ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 1,557 ಕ್ಲರ್ಕ್ ಹುದ್ದೆಗಳಿಗೆ ʼIBPSʼನಿಂದ ಅರ್ಜಿ ಅಹ್ವಾನ

0

ಉದ್ಯೋಗ ಹುಡುಕಾಡುತ್ತಿರುವರಿಗೆ ಐಬಿಪಿಎಸ್ ಗುಡ್ ನ್ಯೂಸ್ ಕೊಟ್ಟಿದೆ. 1,557 ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 01.09.2020
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 23.09.2020
ಪರೀಕ್ಷೆ ದಿನಾಂಕ: ಡಿಸೆಂಬರ್ 5, 12, 13
ಮುಖ್ಯ ಪರೀಕ್ಷೆ ದಿನಾಂಕ: 24.01.2021

  • ಅರ್ಜಿ ಸಲ್ಲಿಸುವುದು ಹೇಗೆ ?
  • ಮೊದಲು ಅಧಿಕೃತ ವೆಬ್ಸೈಟ್ http://www.ibps.inಗೆ ಭೇಟಿ ನೀಡಿ. ಮೊದಲು ಲಾಗಿನ್ ಆಗಿ ಫಾರ್ಮ್ ಭರ್ತಿ ಮಾಡಿ.
  • ““CRP Clerks” ಲಿಂಕ್ ಓಪಮ್ ಮಾಡಿ. ನಂತರ “Click Here To Apply Online For Crp- Clerks (CRP-Clerks-X) ಕ್ಲಿಕ್ ಮಾಡಿ.
  • ಸೂಚನೆಗಳನ್ನು ಎಚ್ಚರಿಕೆಯಿಂದ ಓದಿದ ನಂತರ ಫಾರ್ಮ್ ಭರ್ತಿ ಮಾಡಿ. ಯಾಕಂದ್ರೆ, ಅಭ್ಯರ್ಥಿಗಳು ಒಮ್ಮೆ ಅರ್ಜಿ ಸಲ್ಲಿಸಿದ ನಂತ್ರ ಯಾವುದೇ ಬದಲಾವಣೆಗಳನ್ನ ಮಾಡಲು ಸಾಧ್ಯವಾಗುವುದಿಲ್ಲ.
  • ಅಭ್ಯರ್ಥಿಗಳು 02.09.2020 ರಿಂದ 23.09.2020 ರವರೆಗೆ ಮಾತ್ರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ನಂತ್ರ ಅಪ್ಲೈ ಮಾಡಿದ ಅರ್ಜಿಗಳನ್ನ ಸ್ವೀಕರಿಸುವುದಿಲ್ಲ.
  • ಅರ್ಜಿ ಸಲ್ಲಿಕೆಯಲ್ಲಿ ಮುಖ್ಯವಾಗಿ ಸ್ಕ್ಯಾನ್ ಮಾಡಿದ ಛಾಯಾಚಿತ್ರಗಳು, ಸಹಿ, ಹೆಬ್ಬೆರಳು ಗುರುತು, ಮತ್ತು ಕೈಬರಹದ ಘೋಷಣೆ (wesite ನಲ್ಲಿ ನೀಡಲಾದ ಪಠ್ಯ) ಅಗತ್ಯವಿದೆ. ಹಾಗಾಗಿ ಸಲ್ಲಿಕೆಗೆ ಮೊದಲೇ ಇವುಗಳನ್ನ ಸಿದ್ದವಾಗಿಟ್ಟುಕೊಳ್ಳಿ.
  • ದಪ್ಪ ಅಕ್ಷರಗಳಲ್ಲಿ ಮಾಡಿದ ಸಹಿಯನ್ನ ಸ್ವೀಕರಿಸಲಾಗುವುದಿಲ್ಲ. ಹಾಗಾಗಿ ದಯವಿಟ್ಟು ಇದನ್ನ ಗಮನದಲ್ಲಿಟ್ಟುಕೊಳ್ಳಿ.
  • ಅರ್ಜಿ ಸಂಬಂಧಿಸಿದ ಶುಲ್ಕವನ್ನ ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
  • ಅಭ್ಯರ್ಥಿಯು ಆನ್ಲೈನ್ ಅಪ್ಲಿಕೇಶನ್ನಲ್ಲಿ ಅವನು / ಅವಳು ಆಯ್ಕೆಯ ಮೇಲೆ ತಾತ್ಕಾಲಿಕವಾಗಿ ಹಂಚಿಕೆಯಾದ ರಾಜ್ಯವನ್ನ ಸೂಚಿಸಬೇಕು.
Leave A Reply

Your email address will not be published.