ಕೊರೊನಾ ವಿಚಾರದಲ್ಲಿ ಭಾರತ, ಅಮೇರಿಕಾಕ್ಕೆ ಎಚ್ಚರಿಕೆ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ !

0

ಜಿನೇವಾ : ಮಾರಣಾಂತಿಕ ಕೊರೊನಾ ವೈರಸ್ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ನಡುವಲ್ಲೇ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವುದು ಅಪಾಯವನ್ನು ಆಹ್ವಾನಿಸಿದಂತೆ ಎಂದು ವಿಶ್ವ ಆರೋಗ್ಯ ಸಂಸ್ಥೆ, ಭಾರತ, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಎಚ್ಚರಿಕೆಯನ್ನು ಕೊಟ್ಟಿದೆ.

ವಿಶ್ವದಾದ್ಯಂತ ಕೊರೊನಾ ಸೋಂಕು ಈಗಾಗಲೇ ಸಮುದಾಯ ಮಟ್ಟಕ್ಕೆ ಹರಡಿದೆ. ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಹೆಮ್ಮಾರಿ ಮರಣ ಮೃದಂಗವನ್ನು ಬಾರಿಸುತ್ತಿದ್ರೆ, ಭಾರತದಂತಹ ದೇಶಗಳಲ್ಲಿ ಮರಣದ ಜೊತೆ ಜೊತೆಗೆ ಗುಣಮುಖ ರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದೇ ಆರ್ಥಿಕ ಚಟುವಟಿಕೆಯನ್ನು ಆರಂಭಿಸುವುದು ಸರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಡೈರೆಕ್ಟರ್ ಜನರಲ್ ಟೆಡ್ರೋಸ್ ಹೇಳಿದ್ದಾರೆ.

ದಿನ ಕಳೆದಂತೆ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ವೈರಸ್ ಹರಡುವುದನ್ನು ತಡೆಯುವುದು, ದುರ್ಬಲ ಗುಂಪುಗಳನ್ನು ರಕ್ಷಿಸುವುದು, ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತ್ಯೇಕ ಕ್ರಮಗಳನ್ನು ಕೈಗೊಳ್ಳಬೇಕು.

ಪ್ರಕರಣ ಗಳನ್ನು ಪತ್ತೆ ಹಚ್ಚುವುದು, ಪ್ರತ್ಯೇಕಿಸುವುದು ಮತ್ತು ನೋಡಿಕೊಳ್ಳುವುದು ಇವು ಕೂಡ ಪ್ರಮುಖ ಘಟ್ಟವಾಗಿರುತ್ತದೆ. ಹೀಗಾಗಿ ಕೊರೊನಾ ನಿಯಂತ್ರಣದಲ್ಲಿಲ್ಲದ ರಾಷ್ಟ್ರಗಳು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದು ಎಚ್ಚರಿಸಿದೆ.

ಅಮೆರಿಕ, ಭಾರತ ಸೇರಿದಂತೆ ಹಲವ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಆದರೂ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಇದರಿಂದ ಸೋಂಕು ಮತ್ತಷ್ಟು ಮಂದಿಗೆ ಹರಡಬಹುದು. ಅಮೆರಿಕದಲ್ಲಿ ಆಸ್ಟ್ರಾಜೆನೆಕಾ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯಲಿದೆ.

ವಿಶ್ವದಲ್ಲಿ ಕೆಲವೇ ಕೆಲವು ಲಸಿಕೆಗಳು ಮಾತ್ರ ಮೂರನೇ ಹಂತವನ್ನು ತಲುಪಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆಯನ್ನು ರಾಷ್ಟ್ರಗಳು ಹೇಗೆ ಪರಿಗಣಿಸುತ್ತವೆ ಎಂದು ಕಾದುನೋಡಬೇಕಿದೆ.

Leave A Reply

Your email address will not be published.