ಅಂಚೆ ಇಲಾಖೆಯಿಂದ ಅತಿ ದೊಡ್ಡ ನೇಮಕಾತಿ ಪ್ರಾರಂಭ: 28,740 ಜಿಡಿಎಸ್ ಹುದ್ದೆಗೆ ಈ ದಿನದಿಂದ ಅರ್ಜಿ ಹಾಕಿ
Indian Post Recruitment 2026: ಭಾರತೀಯ ಅಂಚೆ ಇಲಾಖೆ (Indian Post) ದೇಶಾದ್ಯಂತ ಗ್ರಾಮೀಣ ಅಂಚೆ ಸೇವಕ ಹುದ್ದೆ (ಜಿಡಿಎಸ್) ಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ಖಾಲಿ ಇರುವ ಒಟ್ಟು 28,740 ಜಿಡಿಎಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆದರೆ ಈ ಹುದ್ದೆಗೆ ಅರ್ಜಿ ಪ್ರಕ್ರಿಯೆಯು ಜನವರಿ 31 ರಿಂದ ಪ್ರಾರಂಭವಾಗಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 14ರ ಒಳಗೆ ತಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಈ ಹುದ್ದೆಗೆ ಅಗತ್ಯವಿರುವ ಅರ್ಹತಾ ಮಾನದಂಡಗಳೇನು ಎಂದು ತಿಳಿಯೋಣ.
ನೇಮಕಾತಿ ವಿವರ
ಭಾರತೀಯ ಅಂಚೆ ಇಲಾಖೆಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಒಟ್ಟು 28,740 ಹುದ್ದೆಗಳನ್ನು ಭರ್ತಿ ಮಾಡಲಿದೆ. ಅಂಚೆ ಇಲಾಖೆಯು ಕರ್ನಾಟಕದಲ್ಲಿ 1,023 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ…
ಆಂಧ್ರಪ್ರದೇಶ – 1,060
ಅಸ್ಸಾಂ – 639
ಬಿಹಾರ – 1,347
ಛತ್ತೀಸ್‌ಗಢ – 1,155
ದೆಹಲಿ – 42
ಗುಜರಾತ್ – 1,830
ಹರಿಯಾಣ – 270
ಹಿಮಾಚಲ ಪ್ರದೇಶ – 520
ಜಮ್ಮು ಮತ್ತು ಕಾಶ್ಮೀರ – 267
ಜಾರ್ಖಂಡ್ – 908
ಕರ್ನಾಟಕ – 1,023
ಕೇರಳ – 1,691
ಮಧ್ಯಪ್ರದೇಶ – 2,120
ಮಹಾರಾಷ್ಟ್ರ – 3,553
ಈಶಾನ್ಯ – 1,014
ಒಡಿಶಾ – 1,191
ಪಂಜಾಬ್ – 262
ರಾಜಸ್ಥಾನ – 634
ತಮಿಳುನಾಡು – 2,009
ತೆಲಂಗಾಣ – 609
ಉತ್ತರ ಪ್ರದೇಶ – 3,169
ಉತ್ತರಾಖಂಡ್ – 445
ಪಶ್ಚಿಮ ಬಂಗಾಳ – 2,982
ಯಾರು ಅರ್ಜಿ ಸಲ್ಲಿಸಬಹುದು?
ಜಿಡಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ ಮತ್ತು ಇಂಗ್ಲೀಷ್‌ನಲ್ಲಿ ಉತ್ತಮ ಅಂಕಗಳಿಸಿರಬೇಕು.
ವಯೋಮಿತಿ
ಅಭ್ಯರ್ಥಿಗೆ 18 ವರ್ಷವಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಮತ್ತು ಗರಿಷ್ಠ ವಯಸ್ಸು 40 ವರ್ಷಗಳಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 2026ರ ಟಾಪ್ 10 ಉದ್ಯೋಗಗಳು: ಎಐ ಇಂಜಿನಿಯರ್ ಹುದ್ದೆಗೆ ಅಗ್ರಸ್ಥಾನ!
ಆಯ್ಕೆ ಪ್ರಕ್ರಿಯೆ ಹೇಗೆ?
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ನಂತರ ಅಭ್ಯರ್ಥಿಗಳ ದಾಖಲೆ ಪರಿಶೀಲನೆಯಿರುತ್ತದೆ.



