Meghana Raj- Radhika Pandit : ಮಗನ ಜೊತೆ ಮೇಘನಾ ಕ್ರಿಸ್ಮಸ್: ರಾಧಿಕಾ ಪಂಡಿತ್ ಶೇರ್ ಮಾಡಿದ್ರು ಹಬ್ಬದ ಸ್ಪೆಶಲ್ ಪೋಟೋ

ಸ್ಯಾಂಡಲ್ ವುಡ್ ನಲ್ಲಿ ಕ್ರಿಸ್ಮಸ್ ಅದ್ದೂರಿಯಾಗಿ ಆಚರಣೆಗೊಂಡಿದೆ. ತಾಯಿ ಧರ್ಮದ ಹಬ್ಬವಾಗಿರೋ ಕ್ರಿಸ್ಮಸ್ ಗೆ ನಟಿ‌ಮೇಘನಾ ಸರ್ಜಾ ಖುಷಿಯಿಂದ ಸಿದ್ಧತೆ ಮಾಡಿಕೊಂಡಿದ್ದು ಪುತ್ರನ ಜೊತೆ ಹಬ್ಬ ಸೆಲಿಬ್ರೇಟ್ ಮಾಡ್ತಿರೋ ಪೋಟೋಶೇರ್ ಮಾಡಿದ್ದಾರೆ. ಇನ್ನೊಂದೆಡೆ ರಾಕಿಂಗ್ ಸ್ಟಾರ್ (Yash) ದಂಪತಿಗಳು ಕ್ರಿಸ್ಮಸ್ ಅಚರಿಸಿದ್ದು ರಾಧಿಕಾ ಪಂಡಿತ್ ಪೋಟೋಸ್ ಶೇರ್ ಮಾಡಿದ್ದಾರೆ. (Meghana Raj- Radhika Pandit) ಕ್ರಿಸ್ಮಸ್ ಅಂದ್ರೇ ಸಂಭ್ರಮ. ಡಿಸೆಂಬರ್ ಅಂದ್ರೇ ಸೆಲಿಬ್ರೇಶನ್ ಮಂತ್ ಎಂದಿದ್ದ ನಟಿ ಮೇಘನಾ ರಾಜ್ ಇತ್ತೀಚಿಗಷ್ಟೇ ಮನೆಯಲ್ಲಿ ಕ್ರಿಸ್ಮಸ್ ನಡಿತೀರೋ ಲೈಟಿಂಗ್ಸ್,ತಯಾರಿಯ ಪೋಟೋ ಶೇರ್ ಮಾಡಿದ್ದರು.

ಮಗನಿಗೆ ಒಂದೂವರೆ ವರ್ಷವಾಗಿರೋದರಿಂದ ರಾಯನ್ ಎಲ್ಲವನ್ನು ನೋಡುವ,ಅರ್ಥಮಾಡಿಕೊಳ್ಳುವ ಹಾಗೂ ಎಂಜಾಯ್ ಮಾಡುವಂತಾಗಿದ್ದಾನೆ. ಹೀಗಾಗಿ ಈ ವರ್ಷದ ಕ್ರಿಸ್ಮಸ್ ಮತ್ತಷ್ಟು ಸ್ಪೆಶಲ್ ಎಂದು ಮೇಘನಾ ಹೇಳಿದ್ದರು. ಅಲ್ಲದೇ ಇನ್ ಸ್ಟಾಗ್ರಾಂ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ಮೇಘನಾ, ಸಾಂತಾಬಳಿ ನೀವು ಮಗನಿಗಾಗಿ ಕೇಳುವ ಬೆಲೆಬಾಳುವ ಗಿಫ್ಟ್ ಯಾವುದು ಎಂಬ ಪ್ರಶ್ನೆಗೆ ಮಗನಿಗಾಗಿ ನಾನು ಚಿರುವನ್ನು ಮರಳಿ ಪಡೆಯುತ್ತೇನೆ ಎಂದಿದ್ದರು.

ಕ್ರಿಸ್ಮಸ್ ನ್ನು ಮೇಘನಾ ಮಗನ ಜೊತೆ ಅದ್ದೂರಿಯಾಗಿ ಸೆಲಿಬ್ರೆಟ್ ಮಾಡಿದ್ದು, ಕ್ರಿಸ್ಮಸ್ ಟ್ರೀಗೆ ವಿಶ್ ಟ್ಯಾಗ್ ನಲ್ಲಿ ಚಿರು ಹೆಸರನ್ನು ಜೋಡಿಸಿದ್ದಾರೆ. ಕಪ್ಪು ಔಟ್ ಫಿಟ್ ನಲ್ಲಿ ಮೇಘನಾ ಮಿಂಚಿದ್ದರೇ ರಾಯನ್ ವೈಟ್ ಬ್ಲಾಕ್ ಕಾಮಿನೇಶ್ ಡ್ರೆಸ್ ನಲ್ಲಿ ಕ್ಯೂಟ್ ಆಗಿ‌ ಕಾಣಿಸಿದ್ದಾರೆ. ಇನ್ನು ರಾಧಿಕಾ ಪಂಡಿತ್ ಕೂಡಾ ತಮ್ಮ ನೂತನ ನಿವಾಸದಲ್ಲಿ ಕ್ರಿಸ್ಮಸ್ ಟ್ರೀ ಜೊತೆ ಕ್ರಿಸ್ಮಸ್ ಸೆಲಿಬ್ರೆಟ್ ಮಾಡಿದ್ದಾರೆ. ಪುತ್ರನನ್ನು ಸಾಂತಾ ಎಂದಿರುವ ರಾಧಿಕಾ ಗ್ರೀನ್ ಸಾಂತಾ ಜೊತೆ ಕ್ರಿಸ್ಮಸ್ ಆಚರಿಸಲಾಯಿತು ಎಂದಿದ್ದಾರೆ.

ಆಯ್ರಾ ಹಾಗೂ ಯಥರ್ವ್ ಕ್ರಿಸ್ಮಸ್ ಟ್ರೀ ಬಳಿ ನಿಂತಿರೋ ಪೋಟೋಗಳು ಹಾಗೂ ಯಶ್ ಇಬ್ಬರು ಮಕ್ಕಳನ್ನು ಎತ್ತಿಕೊಂಡಿರುವ ಪೋಟೋ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಅಜ್ಜಿಯ ಊರು ಗೋವಾ, ರಾಧಿಕಾ ಪಂಡಿತ್ ಗೆ ಗೋವಾ ತುಂಬ ಇಷ್ಟದ ತಾಣ. ಇದೇ ಕಾರಣಕ್ಕೆ ರಾಧಿಕಾ ಪಂಡಿತ್ ತಮ್ಮ ವಿವಾಹ ನಿಶ್ಚಿತಾರ್ಥವನ್ನು ಅಲ್ಲಿಯೇ ಮಾಡಿಕೊಂಡಿದ್ದರು.

ಗೋವಾ ಭಾಗದಲ್ಲಿ ಮನೆ ಮನೆಯಲ್ಲೂ ಕ್ರಿಸ್ಮಸ್ ಆಚರಿಸಲಾಗುತ್ತದೆ. ಇದೇ ಪ್ರಭಾವದಿಂದ ರಾಧಿಕಾ ಕೂಡ ತಮ್ಮ ಮನೆಯಲ್ಲಿ ಪ್ರತಿವರ್ಷ ಕ್ರಿಸ್ಮಸ್ ಟ್ರೀ ಇಟ್ಟು ಹಬ್ಬ ಸೆಲಿಬ್ರೇಟ್ ಮಾಡುತ್ತಾರಂತೆ. ಕೇವಲ ನಟ-ನಟಿಯರು ಮಾತ್ರವಲ್ಲ ಕಿರುತೆರೆ ಸ್ಟಾರ್ ಗಳು ಕೂಡ ಅದ್ದೂರಿಯಾಗಿ ಕ್ರಿಸ್ಮಸ್ ಸೆಲಿಬ್ರೆಟ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Yash Birthday : ರಾಕಿಂಗ್ ಸ್ಟಾರ್ ಬರ್ತಡೇಗೆ ಓಮೈಕ್ರಾನ್ ಅಡ್ಡಿ: ಫ್ಯಾನ್ಸ್ ಗೆ ಯಶ್ ಸಂದೇಶವೇನು ಗೊತ್ತಾ?

ಇದನ್ನೂ ಓದಿ : Pushpa-The Rise : ದೇಶ ಮಾತ್ರವಲ್ಲ ವಿದೇಶದಲ್ಲೂ ಪುಷ್ಪ ಹವಾ: ಒಂದೇ ವಾರಕ್ಕೆ 229 ಕೋಟಿ ಗಳಿಸಿದ ಸಿನಿಮಾ

( Sandalwood Actors Meghana Raj, Radhika Pandit and Yash Celebrate Christmas sharing photosFsagAGEAGAES

Comments are closed.