Katta Mitta : ಬಾಯಲ್ಲಿ ನೀರೂರಿಸುತ್ತೆ ಹುಣಸೆ ಹಣ್ಣಿನ “ಕಟ್ಟಾ ಮಿಟ್ಟಾ”

(Katta Mitta) ಹುಣಸೆಹಣ್ಣು ಅಂದಾಕ್ಷಣ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಹುಣಸೆಹಣ್ಣನ್ನು ತಿನ್ನಲು ಇಷ್ಟಪಡದವರು ವಿರಳಾತಿ ವಿರಳ. ಇನ್ನೂ ಕೆಲವರು ಹುಣಸೆಹಣ್ಣನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹುಣಸೆಹಣ್ಣು ಇಲ್ಲದ ಅಡುಗೆ ಅಪೂರ್ಣ. ಆದರೆ ಹುಣಸೆಹಣ್ಣಿನಿಂದ ಮಾಡುವ ಕಟ್ಟಾ ಮಿಟ್ಟಾ ಬಹುತೇಕರಿಗೆ ಇಷ್ಟವಾಗುತ್ತದೆ.

ಮೊದಲೆಲ್ಲಾ ಅಂಗಡಿಗಳಲ್ಲಿ ಐಸ್ ಕ್ರಿಮ್‌ ಕಡ್ಡಿಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು ಆದರೆ ಇತ್ತಿಚೀನ ದಿನಗಳಲ್ಲಿ ಸಣ್ಣ ಪೊಟ್ಟಣದಲ್ಲಿ ಸಿಗುತ್ತದೆ. ಇದನ್ನು ಹೆಚ್ಚಿನ ಬೆಲೆ ಕೊಟ್ಟು ಖರಿದಿಸುತ್ತಾರೆ. ಅಂಗಡಿಯಿಂದ “ಕಟ್ಟಾ ಮಿಟ್ಟಾ”(Katta Mitta) ವನ್ನು ಹೆಚ್ಚಿನ ಬೆಲೆ ಕೊಟ್ಟು ತರುವ ಬದಲು ಮನೆಯಲ್ಲೆ ತಯಾರಿಸಬಹುದು. ಹಾಗಾದ್ರೆ ಮನೆಯಲ್ಲಿಯೇ ಕಟ್ಟಾ ಮಿಟ್ಟಾ ಮಾಡುವುದು ಹೇಗೆ ಅನ್ನೋ ಡಿಟೇಲ್ಸ್‌ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿ:
ಹುಣಸೆಹಣ್ಣು
ಬೆಲ್ಲ
ಜೀರಿಗೆ
ಉಪ್ಪು
ಚೂರ್‌ ಮೆಣಸು ಅಥವಾ ಖಾರದ ಪುಡಿ

ಮಾಡುವ ವಿಧಾನ
ಎಷ್ಟು ಪ್ರಮಾಣದಲ್ಲಿ ತಯಾರಿಸಿಕೊಳ್ಳುತ್ತಿರಿ ಅನ್ನೋದನ್ನು ಮೊದಲೇ ನಿರ್ಧಾರ ಮಾಡಿಕೊಂಡು, ಅದಕ್ಕೆ ಬೇಕಾದಷ್ಟು ಪದಾರ್ಥಗಳನ್ನು ಸಿದ್ದವಾಗಿ ಇಟ್ಟುಕೊಂಡಿರ ಬೇಕು.ಹುಣಸೆಹಣ್ಣು, ಬೆಲ್ಲ, ಜೀರಿಗೆ,ಉಪ್ಪು, ಚೂರ್‌ ಮೆಣಸು ಅಥವಾ ಖಾರದ ಪುಡಿಯನ್ನು ಕುಟ್ಟವ ಕಲ್ಲಿಗೆ ಹಾಕಿ ಚೆನ್ನಾಗಿ ಜಜ್ಜಬೇಕು. ಜಜ್ಜಿದ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹಾಕಿ ಇಟ್ಟು ಕೊಳ್ಳಬಹುದು ಇಲ್ಲವಾದಲ್ಲಿ ಅಂಗಡಿಗಳಲ್ಲಿ ಸಿಗುವ ಕಟ್ಟಾ ಮಿಟ್ಟಾದಂತೆ ಚಮಚದಲ್ಲಿ ಹಾಕಿಕೊಂಡು ತಿನ್ನಬಹುದು. ಕಟ್ಟಾ ಮಿಟ್ಟಾವನ್ನು “ಕುಚುಂಡೆ” ಎಂದೂ ಕೂಡ ಕರೆಯುತ್ತಾರೆ.

ಇದನ್ನೂ ಓದಿ:Bharat Jodo Yatra :ರಾಹುಲ್ ಭಾರತ್​ ಜೋಡೋ ಯಾತ್ರೆ ನಿಮಿತ್ತ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಸೋನಿಯಾ, ಪ್ರಿಯಾಂಕಾ ಗಾಂಧಿ

ಇದನ್ನೂ ಓದಿ:Singer mangli : ಕನ್ನಡ ನನ್ನ ಎರಡನೇ ಮನೆ ಎಂದ ಗಾಯಕಿ ಮಂಗ್ಲಿ

ಇದನ್ನೂ ಓದಿ:Actor Prabhas : ಪ್ರಭಾಸ್‌ “ಆದಿಪುರುಷ” ಟೀಸರ್‌ ರಿಲೀಸ್‌ ರಿಲೀಸ್‌ : ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ

ಖಾರ ಪ್ರಿಯರಿಗಾಗಿ ಮನೆಯಲ್ಲಿ ಮಾಡಿ ಮಂಡಕ್ಕಿ ತಿನಿಸು

ಬೇಕಾಗುವ ಸಾಮಾಗ್ರಿ:

ಕೊಬ್ಬರಿ ಎಣ್ಣೆ
ಈರುಳ್ಳಿ
ಟೋಮೆಟೊ
ಖಾರದ ಪುಡಿ
ಚೂರ್‌ ಮೆಣಸು

ಇದನ್ನೂ ಓದಿ:Rachita Ram : ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಬರ್ತಡೆ : ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ, ಈರುಳ್ಳಿ, ಟೊಮೆಟೊ, ಖಾರದಪುಡಿಯನ್ನು ಹಾಕಿ ಕಲಸಿ ಕೊಳ್ಳಬೇಕು. ಖಾರದಪುಡಿಯನ್ನು ಕಡಿಮೆ ಹಾಕಿಕೊಳ್ಳಿ. ನಂತರ ಒಂದು ಬಟ್ಟಲಿನಲ್ಲಿ ಕಲಸಿಕೊಂಡ ಮಿಶ್ರಣವನ್ನು ಹಾಕಿ ಅದಕ್ಕೆ ಅರ್ಧ ಅಥವ ಒಂದು ಚೂರ್‌ ಮೆಣಸನ್ನು ಚಿಕ್ಕದಾಗಿ ಹೆಚ್ಚಿಕೊಂಡು ಹಾಕಬೇಕು. ತದನಂತರ ಮಂಡಕ್ಕಿಯನ್ನು ಹಾಕಿ ಕಲಸಿದರೆ ರುಚಿಕರವಾದ ಮಂಡಕ್ಕಿ ತಿನಿಸು ಸವಿಯಲು ಸಿದ್ದವಾಗುತ್ತದೆ.

Mouth watering tamarind Katta Mitta

Comments are closed.