ರೈಲ್ವೆ ಗ್ರೂಪ್-ಡಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಾ ? ಮನೆಯಲ್ಲೇ ಕುಳಿತು ‘ಉಚಿತವಾಗಿ’ ಕಲಿಯಲು ಇಲ್ಲಿದೆ ಬೆಸ್ಟ್ ಟಿಪ್ಸ್
ನೀವು 10ನೇ ತರಗತಿ ಅಥವಾ ITI ಮುಗಿಸಿ ರೈಲ್ವೆ ಉದ್ಯೋಗದ ಕನಸು ಕಾಣುತ್ತಿದ್ದರೆ, ನಾವು ತಿಳಿಸುವ ಮಾರ್ಗವನ್ನು ಅನುಸರಿಸಿ ಪರೀಕ್ಷೆಯನ್ನು ಇನ್ನಷ್ಟು ಸುಲಭವಾಗಿಸಿಕೊಳ್ಳಿ.

ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯುವುದು ಲಕ್ಷಾಂತರ ಯುವಕರ ಕನಸು. ಇದೀಗ ಭಾರತೀಯ ರೈಲ್ವೆ ಇಲಾಖೆಯಲ್ಲಿ ನೌಕರಿ ಪಡೆಯುವವರಿಗೆ ರೈಲ್ವೆ ಇಲಾಖೆಯು ನೇಮಕಾತಿಯನ್ನು ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಪರೀಕ್ಷೆಗಾಗಿ ಸಿದ್ದತೆ ನಡೆಸುತ್ತಿದ್ದು, ಎಪ್ರಿಲ್ ತಿಂಗಳಲ್ಲಿ ಪರೀಕ್ಷಾ ತಯಾರಿ ನಿರ್ಣಾಯಕವಾಗಲಿದೆ. ಆದರೆ, ಸಾವಿರಾರು ರೂಪಾಯಿ ನೀಡಿ ಕೋಚಿಂಗ್ ಪಡೆಯಲು ಸಾಧ್ಯವಾಗದವರಿಗೆ ಇಂದಿನ ಡಿಜಿಟಲ್ ಯುಗದಲ್ಲಿ ‘ಉಚಿತ’ ಮಾರ್ಗಗಳು ಸಾಕಷ್ಟಿವೆ.
ನೀವು 10ನೇ ತರಗತಿ ಅಥವಾ ITI ಮುಗಿಸಿ ರೈಲ್ವೆ ಉದ್ಯೋಗದ ಕನಸು ಕಾಣುತ್ತಿದ್ದರೆ, ಕಳೆಗಿನವುಗಳನ್ನು ಬಳಸಿ ಪರೀಕ್ಷೆಯನ್ನು ಇನ್ನಷ್ಟು ಸುಲಭವಾಗಿಸಿಕೊಳ್ಳಿ.
ಯೂಟ್ಯೂಬ್ (YouTube): ಉಚಿತ ಕೋಚಿಂಗ್ ಸೆಂಟರ್
ಇಂದು ಯೂಟ್ಯೂಬ್ ಕೇವಲ ಮನೋರಂಜನೆಗೆ ಮಾತ್ರವಲ್ಲ, ಅದೊಂದು ಜ್ಞಾನದ ಭಂಡಾರ. ರೈಲ್ವೆ ಪರೀಕ್ಷೆಗಾಗಿ ಮೀಸಲಾದ ಅನೇಕ ಚಾನೆಲ್‌ಗಳು ಕನ್ನಡದಲ್ಲೂ ಲಭ್ಯವಿವೆ.
ಏನು ಸಿಗಲಿದೆ ? : ಗಣಿತ (Mathematics) ಮತ್ತು ರೀಸನಿಂಗ್ (Reasoning) ವಿಷಯಗಳ ಶಾರ್ಟ್‌ಕಟ್ ಟ್ರಿಕ್ಸ್ ಇಲ್ಲಿ ಸಿಗುತ್ತವೆ.
ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ (Previous Year Question Papers) ಲೈವ್ ಸೆಷನ್‌ಗಳನ್ನು ನೋಡುವುದರಿಂದ ಪರೀಕ್ಷೆಯ ಮಾದರಿ ಸುಲಭವಾಗಿ ಅರ್ಥವಾಗುತ್ತದೆ.
ಸರಕಾರಿ ಆಪ್‌ಗಳು ಮತ್ತು ಪೋರ್ಟಲ್‌ಗಳು (E-Learning)
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗಾಕಾಂಕ್ಷಿಗಳಿಗಾಗಿ ಉಚಿತ ಲರ್ನಿಂಗ್ ಆಪ್‌ಗಳನ್ನು ಪರಿಚಯಿಸಿವೆ.
ದೀಕ್ಷಾ (DIKSHA) ಮತ್ತು ಸ್ವಯಂ (SWAYAM): ಇಲ್ಲಿ ಎನ್‌ಸಿಇಆರ್‌ಟಿ (NCERT) ಪಠ್ಯಪುಸ್ತಕಗಳ ಡಿಜಿಟಲ್ ಆವೃತ್ತಿ ಲಭ್ಯವಿದೆ. ರೈಲ್ವೆ ಪರೀಕ್ಷೆಯ ಸಾಮಾನ್ಯ ವಿಜ್ಞಾನ (General Science) ವಿಭಾಗಕ್ಕೆ 9 ಮತ್ತು 10ನೇ ತರಗತಿಯ ವಿಜ್ಞಾನ ಪುಸ್ತಕಗಳು ಅತ್ಯಗತ್ಯ.
ಪ್ರಯೋಜನವೇನು ? : ಅಧಿಕೃತ ಮಾಹಿತಿ ಮತ್ತು ಉಚಿತ ಇ-ಬುಕ್ಸ್‌ಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮೊಬೈಲ್ ಆಪ್‌ಗಳಲ್ಲಿ ‘ಫ್ರೀ’ ಮಾಕ್ ಟೆಸ್ಟ್ (Mock Tests)
ಓದಿದ್ದನ್ನು ಪರೀಕ್ಷಿಸಿಕೊಳ್ಳಲು ಮಾಕ್ ಟೆಸ್ಟ್ ಬರೆಯುವುದು ಅನಿವಾರ್ಯ. ಟೆಸ್ಟ್‌ಬುಕ್ (Testbook) ಅಥವಾ ಅಡ್ಡಾ247 (Adda247) ನಂತಹ ಆಪ್‌ಗಳಲ್ಲಿ ಪ್ರತಿದಿನ ‘Daily Quizzes’ ಉಚಿತವಾಗಿ ಸಿಗುತ್ತವೆ.
ಟೈಮ್ ಮ್ಯಾನೇಜ್‌ಮೆಂಟ್: 90 ನಿಮಿಷಗಳಲ್ಲಿ 100 ಪ್ರಶ್ನೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ಈ ಟೆಸ್ಟ್‌ಗಳಿಂದ ತಿಳಿಯುತ್ತದೆ.
ನೆಗೆಟಿವ್ ಮಾರ್ಕಿಂಗ್ : ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕ ಕಡಿತವಾಗುವುದರಿಂದ, ಎಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬ ಜಾಣ್ಮೆ ಇಲ್ಲಿ ಬೆಳೆಯುತ್ತದೆ.
ಗೂಗಲ್ ಡಿಜಿಟಲ್ ಅನ್ಲಾಕ್ಡ್ (Google Digital Unlocked)
ನೀವು ರೈಲ್ವೆ ಕೆಲಸದ ಜೊತೆಗೆ ಬೇರೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಬಯಸಿದರೆ ಗೂಗಲ್‌ನ ಉಚಿತ ಕೋರ್ಸ್‌ಗಳು ಅತ್ಯುತ್ತಮ.
ಯಾರಿಗೆ ಅನುಕೂಲ ?: ಕಂಪ್ಯೂಟರ್ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಸೂಕ್ತ. ಇದು ನಿಮ್ಮ ರೆಸ್ಯೂಮ್‌ಗೆ ಹೆಚ್ಚಿನ ಮೌಲ್ಯ ತರುತ್ತದೆ.
ಇದನ್ನೂ ಓದಿ : ಬ್ಯಾಂಕ್ ಆಫೀಸರ್ ಆಗುವ ಸುವರ್ಣಾವಕಾಶ: ಪಿಎಸ್‌ಬಿಯಲ್ಲಿ 1000 ಲೋಕಲ್ ಆಫೀಸರ್ ಹುದ್ದೆಗೆ ಅರ್ಜಿ ಹಾಕಿ
ಟೆಲಿಗ್ರಾಂ ಗ್ರೂಪ್‌ಗಳು ಮತ್ತು ಸ್ಟಡಿ ಮೆಟೀರಿಯಲ್
ಟೆಲಿಗ್ರಾಂನಲ್ಲಿ ಸಾವಿರಾರು ಸ್ಟಡಿ ಗ್ರೂಪ್‌ಗಳಿವೆ, ಅಲ್ಲಿ ಪ್ರತಿದಿನ ಪ್ರಚಲಿತ ವಿದ್ಯಮಾನಗಳ (Current Affairs) ಪಿಡಿಎಫ್‌ಗಳನ್ನು ಉಚಿತವಾಗಿ ಹಂಚಿಕೊಳ್ಳಲಾಗುತ್ತದೆ.
ಎಚ್ಚರಿಕೆ: ಅಧಿಕೃತ ಮತ್ತು ನಂಬಿಕಸ್ತ ಚಾನೆಲ್‌ಗಳನ್ನು ಮಾತ್ರ ಫಾಲೋ ಮಾಡಿ. ಹಳೆಯ ಮತ್ತು ತಪ್ಪು ಮಾಹಿತಿ ಇರುವ ಮೆಟೀರಿಯಲ್‌ಗಳಿಂದ ದೂರವಿರಿ.
ಏಪ್ರಿಲ್ ತಿಂಗಳಲ್ಲಿ ನಿಮ್ಮ ತಯಾರಿ ಹೀಗಿರಲಿ:
ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿ: ಗ್ರೂಪ್-ಡಿ ಪರೀಕ್ಷೆಯಲ್ಲಿ 25 ಅಂಕಗಳು ಸಾಮಾನ್ಯ ವಿಜ್ಞಾನಕ್ಕಿರುತ್ತವೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಸೂತ್ರಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ.
ಇದನ್ನೂ ಓದಿ : 2026 ರಲ್ಲಿ ಈ 5 ಸಣ್ಣ ಬಿಸಿನೆಸ್ ಮಾಡಿದರೆ ಕೈತುಂಬಾ ಸಂಪಾದನೆ ಖಂಡಿತ
ಪ್ರಚಲಿತ ವಿದ್ಯಮಾನದ ಕುರಿತು ಅರಿವು ಅಗತ್ಯ : ಕಳೆದ 6-8 ತಿಂಗಳ ಪ್ರಮುಖ ಸುದ್ದಿಗಳು, ಕ್ರೀಡೆ, ಪ್ರಶಸ್ತಿಗಳು ಮತ್ತು ರೈಲ್ವೆ ಬಜೆಟ್ ಬಗ್ಗೆ ಮಾಹಿತಿ ಇರಲಿ.
ದೈಹಿಕ ಸಾಮರ್ಥ್ಯದ ಕಡೆಗೆ ಇರಲಿ ಆದ್ಯತೆ : ಓದುವುದರ ಜೊತೆಗೆ ಪ್ರತಿದಿನ ಬೆಳಿಗ್ಗೆ ಸ್ವಲ್ಪ ಓಟ ಮತ್ತು ವ್ಯಾಯಾಮ ರೂಢಿಸಿಕೊಳ್ಳಿ. ಲಿಖಿತ ಪರೀಕ್ಷೆ ಮುಗಿದ ನಂತರ PET (Physical Efficiency Test) ಪಾಸಾಗುವುದು ಅಷ್ಟೇ ಮುಖ್ಯ.
ಸೌಲಭ್ಯಗಳಿಲ್ಲ ಎಂದು ಕೊರಗುವ ಬದಲು, ಲಭ್ಯವಿರುವ ಉಚಿತ ತಂತ್ರಜ್ಞಾನವನ್ನು ಬಳಸಿ ಓದಿದರೆ ರೈಲ್ವೆ ಉದ್ಯೋಗ ನಿಮ್ಮದಾಗುವುದು ಖಚಿತ. ಏಪ್ರಿಲ್ ತಿಂಗಳಲ್ಲಿ ಸಮಯ ವ್ಯರ್ಥ ಮಾಡದೆ ಓದಿ.
railway group d exam preparation tips free online



