ಪೆಟ್ರೋಲ್, ಗ್ಯಾಸ್ ಆಯ್ತು ಇದೀಗ ಬಸ್ ದರ : ಪ್ರಯಾಣಿಕರಿಗೆ ಶಾಕ್ ಕೊಟ್ಟ ಖಾಸಗಿ ಬಸ್‌ಗಳು
ರಾಜ್ಯದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಖಾಸಗಿ ಬಸ್‌ಗಳನ್ನು ಅವಲಂಬಿಸಿರುವ ಸಾರ್ವಜನಿಕರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ರಾಜ್ಯದಾದ್ಯಂತ ಎಲ್ಲಾ ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಶೇಕಡಾ 3 ರಿಂದ 8ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಖಾಸಗಿ ಬಸ್‌ಗಳನ್ನು ಅವಲಂಬಿಸಿರುವ ಸಾರ್ವಜನಿಕರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ರಾಜ್ಯದಾದ್ಯಂತ ಎಲ್ಲಾ ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಶೇಕಡಾ 3 ರಿಂದ 8ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಸಾರಿಗೆ ನಿರ್ವಹಣಾ ವೆಚ್ಚಗಳು ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದ್ದು, ಡಿಸೇಲ್ ದರದಲ್ಲಿಯೂ ಬಾರೀ ಏರಿಕೆಯಾಗಿದೆ. ಜೊತೆಗೆ ಸಿಬ್ಬಂದಿ ವೇತನದ ಕಾರಣದಿಂದಲಾಗಿ ಬಸ್ ಟಿಕೆಟ್ ದರದಲ್ಲಿ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಬಸ್ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸಂಚಾರ ಮಾಡುವ ‘ಡೇ ಸರ್ವಿಸ್’ ಬಸ್‌ಗಳಿಗೆ ಮಾತ್ರವೇ ಈ ಪರಿಷ್ಕೃತ ದರ ಅನ್ವಯವಾಗಲಿದೆ.
ಕರಾವಳಿ ಭಾಗದ ಜನತೆಗೆ ಖಾಸಗಿ ಬಸ್‌ಗಳೇ ಜೀವಾಳ. ಇಲ್ಲಿನ ಜನರು ಖಾಸಗಿ ಬಸ್‌ಗಳನ್ನೇ ಹೆಚ್ಚಾಗಿ ಆಶ್ರಯಿಸಿದ್ದಾರೆ. ಇದೀಗ ಖಾಸಗಿ ಬಸ್ ಟಿಕೆಟ್ ದರ ಏರಿಕೆಯ ಬಿಸಿ ಹೆಚ್ಚಾಗಿ ಕರಾವಳಿ ಭಾಗದ ಜನತೆಗೆ ತಟ್ಟಲಿದೆ. ಉಡುಪಿ-ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳ ನಡುವೆ ಹಾಗೂ ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ಸಂಚರಿಸುವ ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್ ಖಾಸಗಿ ಬಸ್‌ಗಳ ಪ್ರಯಾಣಿಕರ ಜೇಬಿಗೆ ಇನ್ನು ಮುಂದೆ ಹೆಚ್ಚಿನ ಕತ್ತರಿ ಬೀಳಲಿದೆ.
Also Read: ಉಚಿತ ಬಸ್ ಪಾಸ್‌ಗೆ ಇನ್ನೂ ಗ್ರೀನ್ ಸಿಗ್ನಲ್ ಇಲ್ಲ! ಉಚಿತ ಬಸ್ ಪಾಸ್ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ
ಸಿಟಿ ಬಸ್ ಮತ್ತು ಗ್ರಾಮೀಣ ಭಾಗದಲ್ಲಿ ಸಂಚಾರ ಮಾಡುವ ಖಾಸಗಿ ಬಸ್ ದರದಲ್ಲಿ ಶೇಕಡಾ 3 ರಿಂದ 5ರ ವರೆಗೆ ಏರಿಕೆ ಮಾಡಲಾಗಿದ್ರೆ, ಉಡುಪಿ – ಮಂಗಳೂರು ಭಾಗದಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್ ಬಸ್ ಗಳ ದರದಲ್ಲಿ ಶೇಕಡಾ 6 ರಿಂದ 8 ರಷ್ಟು ಏರಿಕೆ ಮಾಡಲಾಗಿದೆ. ಒಂದೆಡೆ ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದಾಗಿ ಜನ ಸಾಮಾನ್ಯರ ಮೇಲೆ ಈಗಾಗಲೇ ಹೊರೆ ಬಿದ್ದಿದ್ದು, ಕರಾವಳಿಗರು ಇದೀಗ ಬಸ್‌ನಲ್ಲಿ ಸಂಚರಿಸೋದಕ್ಕೂ ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಬಸ್ ದರ ಏರಿಕೆಯ ಕುರಿತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ನಾನಾ ಕಾರಣ ನೀಡಿ ಟಿಕೆಟ್ ದರ ಏರಿಕೆ ಮಾಡುವ ಖಾಸಗಿ ಬಸ್ ಮಾಲೀಕರು, ಪೆಟ್ರೋಲ್, ಡಿಸೇಲ್ ದರ ಇಳಿಕೆಯಾದಾಗ ಟಿಕೆಟ್ ದರ ಇಳಿಕೆ ಮಾಡುತ್ತಿಲ್ಲ ಅನ್ನೋದು ಪ್ರಯಾಣಿಕರ ಆರೋಪ.
Bus fares now higher than petrol and gas Private buses shock passengers



