ಭಟ್ಕಳದಲ್ಲಿ ಭುಗಿಲೆದ್ದ ಕೋಮು ಸಂಘರ್ಷ: ಮೂರಿನಕಟ್ಟೆ ಧ್ವಂಸ, ಕರಾವಳಿಯಲ್ಲಿ ಉದ್ವಿಗ್ನ ವಾತಾವರಣ
ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಅತ್ಯಂತ ಭಕ್ತಿ ಭಾವದಿಂದ ಭಾನುವಾರ ನಿರ್ಮಾಣ ಮಾಡಿದ್ದ ಮೂರಿನ ಕಟ್ಟೆಯನ್ನು ಅನ್ಯ ಕೋಮಿನವರು ಧ್ವಂಸ ಮಾಡಿದ ಘಟನೆಯು ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಗರದ ವೆಂಕಟಾಪುರ ಸಮೀಪ ಸಂಭವಿಸಿದೆ. ಈ ಘಟನೆ ಬಳಿಕ ಭಟ್ಕಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನಲಾಗಿದೆ.
ಭಟ್ಕಳ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಅತ್ಯಂತ ಭಕ್ತಿ ಭಾವದಿಂದ ಭಾನುವಾರ ನಿರ್ಮಾಣ ಮಾಡಿದ್ದ ಮೂರಿನ ಕಟ್ಟೆಯನ್ನು ಅನ್ಯ ಕೋಮಿನವರು ಧ್ವಂಸ ಮಾಡಿದ ಘಟನೆಯು ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಗರದ ವೆಂಕಟಾಪುರ ಸಮೀಪ ಸಂಭವಿಸಿದೆ. ಈ ಘಟನೆ ಬಳಿಕ ಭಟ್ಕಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನಲಾಗಿದೆ.
ಕಳೆದ ನೂರಾರು ವರ್ಷಗಳಿಂದ ಸ್ಥಾಪಿತಗೊಂಡಿದ್ದ ದೇವರ ಹೊರೆ ಇಡುವ ಸ್ಥಳವಾದ ಮೂರಿನಕಟ್ಟೆಯನ್ನು ಹೆದ್ದಾರಿ ಅಗಲೀಕರಣಕ್ಕಾಗಿ ತೆರವು ಮಾಡಲಾಗಿತ್ತು. ಇದಾದ ಬಳಿಕ ಬೇರೆ ಸ್ಥಳದಲ್ಲಿ ಮೂರಿನಕಟ್ಟೆ ನಿರ್ಮಿಸಿಕೊಡಿ ಎಂದು ಹಿಂದೂಪರ ಸಂಘಟನೆಗಳು ಹೆದ್ದಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರು ನಿನ್ನೆ ಬೆಳಗ್ಗೆ ಸ್ವಯಂ ಪ್ರೇರಣೆಯಿಂದ ಮೂರಿನಕಟ್ಟೆಯನ್ನು ನಿರ್ಮಾಣ ಮಾಡಿದ್ದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮೂರಿನಕಟ್ಟೆ ನಿರ್ಮಾಣ ಮಾಡುವ ವೇಳೆಯಲ್ಲಿ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಉಪವಿಭಾಗಾಧಿಕಾರಿ ಜೆ. ಮಹೇಶ್ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಹೆದ್ದಾರಿ ಭಾಗದಲ್ಲಿರುವ ಅತಿಕ್ರಮಿತ ಜಾಗದಲ್ಲಿ ಕಟ್ಟೆ ನಿರ್ಮಿಸಲಾಗಿದೆ ಎಂದು ಮುಸ್ಲಿಂ ಮುಖಂಡರಿಗೆ ತಿಳಿ ಹೇಳಲಾಗಿತ್ತು.
Also Read: Bhatkal Tragedy: ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ 8 ಮಂದಿ ದಾರುಣ ಸಾವು
ಆದರೆ ಈ ಸಂಧಾನ ಸಭೆ ಯಶಸ್ವಿಯಾಗದ ಕಾರಣ ರಾತ್ರಿ ವೇಳೆ ಸ್ಥಳಕ್ಕಾಗಮಿಸಿದ ಅನ್ಯಕೋಮಿನ ಯುವಕರು ರಾಷ್ಟ್ರೀಯ ಹೆದ್ದಾರಿ ತಡೆದು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ದೀಪನ್ ಹಾಗೂ ಡಿವೈಎಸ್‌ಪಿ ಗಿರೀಶ್ ಆಗಮಿಸಿ ಯುವಕರನ್ನು ಶಾಂತಗೊಳಿಸಲು ಯತ್ನಿಸುತ್ತಿದ್ದಾಗಲೇ, ಉದ್ರಿಕ್ತ ಯುವಕರು ಉನ್ನತ ಪೊಲೀಸ್ ಅಧಿಕಾರಿಗಳ ಕಣ್ಣೆದುರೇ ಕಬ್ಬಿಣದ ಸಲಾಕೆಗಳಿಂದ ಮೂರಿನಕಟ್ಟೆಯನ್ನು ಭಾಗಶಃ ಹೊಡೆದುರುಳಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶದೊಂದಿಗೆ ಸಾರ್ವಜನಿಕ ಸ್ಥಳವೆಂದು ನೆಪವೊಡ್ಡಿ ಮುಸ್ಲಿಂ ಸಂಘಟನೆಗಳು ನಡೆಸಿರುವ ಈ ಕೃತ್ಯ ಕೋಮು ಸಂಘರ್ಷಕ್ಕೆ ನಾಂದಿ ಹಾಡಿದೆ. ಸದ್ಯ ಭಟ್ಕಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಯಾವುದೇ ಉದ್ವಿಘ್ನ ಘಟನೆ ಸಂಭವಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.
Communal conflict breaks out in Bhatkal Moorinakkatte destroyed tense atmosphere on the coast



