Big Updates : ಧರ್ಮಸ್ಥಳ ಪ್ರಕರಣ : ಮಾಸ್ಕ್‌ಮ್ಯಾನ್ ಅರೆಸ್ಟ್, ಪ್ರಕರಣಕ್ಕೆ ಬಿಗ್‌ಟ್ವಿಸ್ಟ್

Dharmasthala SIT Mask man Arrest : ಮಂಗಳೂರು : ಧರ್ಮಸ್ಥಳ (Dharmsthala) ಸುತ್ತಮುತ್ತಲಿನ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿದ್ದ ಅನಾಮಿಕ ವ್ಯಕ್ತಿಯನ್ನು ಎಸ್‌ಐಟಿ (SIT) ಅಧಿಕಾರಿಗಳು ಬಂಧಿಸಿದ್ದಾರೆ. ಬೆಳ್ತಂಗಡಿ ಠಾಣೆಗೆ ಇಂದೇ ಹಾಜರು ಪಡಿಸುವ ಸಾಧ್ಯತೆಯಿದೆ.
ರಾಷ್ಟ್ರ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಸುದ್ದಿಯಾಗಿದ್ದ ಧರ್ಮಸ್ಥಳದ ಬುರುಡೆ ರಹಸ್ಯ ಪ್ರಕರಣ ಕೊನೆಗೂ ಬಯಲಾಗಿದೆ. ಸುಳ್ಳು ಮಾಹಿತಿ ನೀಡಿದ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ಅನಾಮಿಕ ವ್ಯಕ್ತಿ ಅಲಿಯಾಸ್ ಭೀಮನನ್ನು ಬಂಧಿಸಿದ್ದಾರೆ.
ಅನಾಮಿಕ ವ್ಯಕ್ತಿ ಧರ್ಮಸ್ಥಳ ಸುತ್ತಮುತ್ತಲೂ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕರ್ನಾಟಕ ಸರಕಾರ ಎಸ್‌ಐಟಿ ನೇಮಕ ಮಾಡಿತ್ತು.
ಧರ್ಮಸ್ಥಳ ಸುತ್ತಮುತ್ತಲೂ ಸುಮಾರು 17 ಕಡೆಗಳಲ್ಲಿ ಉತ್ಕನನ ನಡೆಸಿದ ನಂತರದಲ್ಲಿ ವ್ಯಕ್ತಿ ಹೇಳಿದ ಸುಳಿವು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ ಸುಳ್ಳು ಮಾಹಿತಿ ನೀಡಿದ್ದಾನೆ ಅನ್ನೋದು ಎಸ್‌ಐಟಿ ಅಧಿಕಾರಿಗಳ ವಿಚಾರಣೆಯ ವೇಳೆಯಲ್ಲಿ ತಿಳಿದು ಬಂದಿದೆ ಎನ್ನಲಾಗುತ್ತಿದೆ.
ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ವಿಚಾರಣೆ
ನಿನ್ನೆ ರಾತ್ರಿಯಿಂದಲೂ ದೂರುದಾರ ಭೀಮನನ್ನು ಖುದ್ದು ಎಸ್‌ಐಟಿ ಮುಖ್ಯಸ್ಥರಾಗಿದ್ದ ಪ್ರಣವ್ ಮೊಹಾಂತಿ ಅವರು ವಿಚಾರಣೆ ನಡೆಸಿದ್ದರು. ನಿನ್ನೆಯಿಂದ ಇಂದು ಬೆಳಗ್ಗೆಯವರೆಗೂ ಸುಧೀರ್ಘ ವಿಚಾರಣೆ ನಡೆಸಿದ್ದರು.
ವಿಚಾರಣೆಯ ವೇಳೆಯಲ್ಲಿ ದೂರುದಾರ ಧರ್ಮಸ್ಥಳದ ವಿರುದ್ದ ಸುಳ್ಳು ಮಾಹಿತಿಯನ್ನು ನೀಡಿದ್ದಾನೆ ಅನ್ನೋದು ಬಯಲಾಗಿದೆ. ಹೀಗಾಗಿ ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಅನನ್ಯ ಭಟ್ ಸುಳ್ಳು ಕಥೆ : ಕ್ಷಮೆಕೋರಿದ ಸುಜಾತ ಭಟ್
Dharmasthala SIT Mask man Arrest : ಎಫ್‌ಎಸ್‌ಎಲ್ ವರದಿಗೂ ಮುನ್ನವೇ ಅರೆಸ್ಟ್
ಈಗಾಗಲೇ ಉತ್ಕನನ ಕಾರ್ಯವನ್ನು ನಡೆಸಲಾಗಿದ್ದು, 17 ಗುಂಡಿಗಳನ್ನು ಅಗೆಯಲಾಗಿದೆ. ಕೆಲವೊಂದು ಕಡೆಗಳಲ್ಲಿ ಮೂಳೆಗಳು ಪತ್ತೆಯಾಗಿತ್ತು. ಈ ಮೂಳೆಗಳ ಕುರಿತು ಎಸ್‌ಐಟಿ ಅಧಿಕಾರಿಗಳು ಎಫ್‌ಎಸ್‌ಎಲ್ ವರದಿ ಬರೋದಕ್ಕೆ ಇನ್ನೂ ಬಾಕಿ ಇದೆ.
ಇದನ್ನೂ ಓದಿ : ಮಹೇಶ್ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ



