ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್​ ನಡುವೆ ಸೋಶಿಯಲ್​ ಮೀಡಿಯಾ ವಾರ್​..!

Dk Shivakumar vs CM Siddaramiah : ಬೆಂಗಳೂರು : ನಮ್ಮ ನಡುವೆ ಎಲ್ಲವೂ ಸರಿ ಇದೆ ಎಂದು ಹೇಳಿಕೊಳ್ಳುತ್ತಲೇ ಮಾಧ್ಯಮಗಳ ಎದುರು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ನಡುವಿನ ಕಾಳಗ ಇದೀಗ ಪೋಸ್ಟ್​ ಕಾಳಗಕ್ಕೆ ಬಂದು ತಲುಪಿದೆ.

ತಮ್ಮ ಎಕ್ಸ್​ ಖಾತೆಯಲ್ಲಿ ಡಿ.ಕೆ ಶಿವಕುಮಾರ್​ ಪೋಸ್ಟ್​ಗೆ ಸಿಎಂ ಸಿದ್ದರಾಮಯ್ಯ ನೇರ ಕೌಂಟರ್​ ಕೊಟ್ಟಿದ್ದು ಇವರಿಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಸಾಬೀತಾಗಿದೆ.

Dk Shivakumar vs CM Siddaramiah : ಹೈಕಮಾಂಡ್​ ರಾಜ್ಯದಲ್ಲಿ ಸಂಧಾನ ಸೂತ್ರ

ಆಯ್ಕೆಮಾಡಿಕೊಳ್ಳುತ್ತಿದ್ದಂತೆಯೇ ಡಿಸಿಎಂ ಡಿ.ಕೆ ಶಿವಕುಮಾರ್​, ಕೊಟ್ಟ ಮಾತಿನ ಶಕ್ತಿಯೇ ಜಗತ್ತಿನ ಶಕ್ತಿ ಎಂದು ಪೋಸ್ಟ್​ ಹಾಕಿದ್ದರು. ಈ ಪೋಸ್ಟ್​ ಭಾರೀ ವೈರಲ್​ ಆಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಈ ಪೋಸ್ಟ್​ಗೆ ನೇರಾ ನೇರ ಠಕ್ಕರ್​ ನೀಡಿದ್ದಾರೆ.

ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ಜನತೆಗೆ ನಾವು ಕೊಟ್ಟ ಮಾತೇ ನಮಗೆ ಜಗತ್ತು ಎಂದು ಹಾಕಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಈ ಪೋಸ್ಟ್​ ಕಾಳಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಘ್ರಾಸವಾಗಿದೆ.

ನಮ್ಮ ರಾಜ್ಯದ ಮಹಿಳೆಗೆ ಉಚಿತ ಪ್ರಯಾಣ ನೀಡಿದ್ದೇವೆ. ಸರ್ಕಾರ ರಚನೆಯಾದ ಮೊದಲ ಮೂರು ತಿಂಗಳಲ್ಲಿಯೇ ನಮ್ಮ ಎಲ್ಲಾ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ನನ್ನ ಮೊದಲ ಅವಧಿಯಲ್ಲಿ (2013–18) ನೀಡಿದ 165 ಭರವಸೆಗಳ ಪೈಕಿ 157ನ್ನು, ಅಂದರೆ ಶೇ. 95ಕ್ಕೂ ಹೆಚ್ಚನ್ನು ಈಡೇರಿಸಿದ್ದೇವೆ.

ಇದನ್ನೂ ಓದಿ : ಉಡುಪಿ ಮಣ್ಣಿನ ಪಾದಸ್ಪರ್ಶ ಮಾಡಿರುವುದು ನನ್ನ ಪುಣ್ಯ ಎಂದ ಪ್ರಧಾನಿ ನರೇಂದ್ರ ಮೋದಿ

ಈ ಅವಧಿಯಲ್ಲಿನ 593 ಭರವಸೆಗಳಲ್ಲಿ 243ಕ್ಕೂ ಹೆಚ್ಚು ಈಗಾಗಲೇ ಪೂರ್ಣಗೊಂಡಿವೆ. ಉಳಿದ ಪ್ರತಿಯೊಂದು ಭರವಸೆಯನ್ನೂ ಬದ್ಧತೆ, ನಂಬಿಕೆ, ಮತ್ತು ಕಾಳಜಿಯೊಂದಿಗೆ ಖಚಿತವಾಗಿ ಪೂರೈಸಲಾಗುತ್ತದೆ ಎಂದು ಸಿಎಂ ಹೇಳಿಕೊಂಡಿದ್ದಾರೆ.

Dk Shivakumar and CM Siddaramiah Social Media War

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories