Dog Survey Teachers : ಶಿಕ್ಷಕರಿಂದ ಬೀದಿ ನಾಯಿಗಳ ಶ್ವಾನ ಸಮೀಕ್ಷೆ : ಮಾಜಿ ಸಚಿವ ಸುರೇಶ್ ಕುಮಾರ್ ಆಕ್ರೋಶ

Dog Survey Teachers : ಬೆಂಗಳೂರು : ದೇಶದಾದ್ಯಂತ ಬೀದಿ ನಾಯಿಗಳ ದಾಳಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಗಣಿಸಿದ ಸರ್ವೋಚ್ಛ ನ್ಯಾಯಾಲಯ, ಸಾರ್ವಜನಿಕ ಸ್ಥಳಗಳಾದ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಕ್ರೀಡಾ ಸಂಕೀರ್ಣ ಮತ್ತು ರೈಲ್ವೇ ನಿಲ್ದಾಣಗಳಲ್ಲಿರುವ ಶ್ವಾನಗಳನ್ನು ಪುರ್ನವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ತೀರ್ಪು ನೀಡಿದೆ.
ಈ ರೀತಿ ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ, ಪ್ರಾಣಿಗಳ ಹಕ್ಕು ಅಭಿಯಾನದ ಅಡಿಯಲ್ಲಿ ಸಹಿ ಸಂಗ್ರಹಣಾ ಅಭಿಯಾನ ಆರಂಭಿಸಲಾಗಿದೆ.
ಈ ಸಹಿ ಸಂಗ್ರಹಣಾ ಅಭಿಯಾನದಲ್ಲಿ ಸುಮಾರು 1.75 ಲಕ್ಷ ಜನರು ಭಾಗಿಯಾಗಿದ್ದು , ಈ ಸಹಿ ಪತ್ರಗಳನ್ನು ಸುಪ್ರೀಂ ಕೋರ್ಟ್‌ಗೆ ರವಾನೆ ಮಾಡಲಾಗಿದೆ .
ಇದನ್ನೂ ಓದಿ : ಉಡುಪಿ : ಯುವತಿ ಮೇಲೆ ಅತ್ಯಾಚಾರ ಯತ್ನ, ಹಿಂದೂ ಕಾರ್ಯಕರ್ತ ಅರೆಸ್ಟ್
ಶಿಕ್ಷಕರಿಗೆ ಶ್ವಾನ ಸಮೀಕ್ಷೆ ಜವಾಬ್ದಾರಿ : ಸುರೇಶ್ ಕುಮಾರ್ ಗರಂ
ಬೀದಿ ನಾಯಿಗಳ ಸಮೀಕ್ಷೆ ನಡೆಸಲು ಸರಕಾರ ಮುಂದಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಬೆನ್ನಲ್ಲೇ ಇದೀಗ ಶ್ವಾನ ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನೂ ಕೂಡ ಶಿಕ್ಷಕರಿಗೆ ವಹಿಸಲಾಗಿದೆ.
ಶಿಕ್ಷಕರಿಗೆ ಶ್ವಾನ ಸಮೀಕ್ಷೆಯ ಜವಾಬ್ದಾರಿ ವಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾಜಿ ಸಚಿವ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಬೇಕೆ ಹೊರತು ಈ ರೀತಿ ಚಾಕರಿ ಮಾಡುವವರಲ್ಲ. ಇದರಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಈ ರೀತಿಯ ನಿರ್ಧಾರ ಕೈಗೊಂಡ ಮನಸ್ಥಿತಿಗೆ ನಮ್ಮ ಧಿಕ್ಕಾರ ಎಂದಿದ್ದಾರೆ.
Dog Survey in Karnataka Teachers: Ex-Minister Suresh Kumar Expresses Outrage



