ಜಾತಿಗಣತಿಯ ಅಂತಿಮ ವರದಿ ಸಿಎಂಗೆ ಸಲ್ಲಿಕೆ: ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಅಗ್ರಸ್ಥಾನ, ವೀರಶೈವ-ಲಿಂಗಾಯತರಿಗೆ 2ನೇ ಸ್ಥಾನ
ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಇದಕ್ಕೂ ಮುನ್ನವೇ ಜಾತಿಗಣತಿ ವರದಿ ಸ್ವೀಕಾರ ಮಾಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಕೆ ಮಾಡಿರುವ ಈ ಜಾತಿ ಗಣತಿಯ ವರದಿಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮುಸ್ಲಿಮರಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಇದಕ್ಕೂ ಮುನ್ನವೇ ಜಾತಿಗಣತಿ ವರದಿ ಸ್ವೀಕಾರ ಮಾಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಕೆ ಮಾಡಿರುವ ಈ ಜಾತಿ ಗಣತಿಯ ವರದಿಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮುಸ್ಲಿಮರಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ 80.14 ಲಕ್ಷವಿದ್ದು ರಾಜ್ಯದ ಒಟ್ಟೂ ಜನಸಂಖ್ಯೆಯ 14 ಪರ್ಸೆಂಟ್ ಮುಸ್ಲಿಂ ಸಮುದಾಯವೇ ಇದೆ ಎಂದು ತಿಳಿದುಬಂದಿದೆ.
ನಂತರದ ಸ್ಥಾನದಲ್ಲಿ ವೀರಶೈವ – ಲಿಂಗಾಯತ ಸಮುದಾಯ ಸ್ಥಾನ ಪಡೆದಿದ್ದು ರಾಜ್ಯದ ಒಟ್ಟೂ ಜನಸಂಖ್ಯೆಯ 11 ಪ್ರತಿಶತದಷ್ಟು ಅಂದರೆ 65 ಲಕ್ಷ ಜನಸಂಖ್ಯೆಯನ್ನು ಇವರು ಹೊಂದಿದ್ದಾರೆ. ಮೂರನೇ ಸ್ಥಾನವನ್ನು ಒಕ್ಕಲಿಗ ಸಮುದಾಯ ಪಡೆದುಕೊಂಡಿದ್ದು ರಾಜ್ಯದ ಒಟ್ಟೂ ಜನಸಂಖ್ಯೆಯ 10 ಪ್ರತಿಶತದಷ್ಟು ಅಂದರೆ 60 ಲಕ್ಷ ಜನಸಂಖ್ಯೆಯನ್ನು ಇವರು ಹೊಂದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಕುರುಬ ಸಮುದಾಯವಿದ್ದು ರಾಜ್ಯದಲ್ಲಿ ಇವರ ಬಲ 08 ಪರ್ಸೆಂಟ್ ಇದೆ ಎನ್ನಲಾಗಿದೆ. ಹಾಗೂ ಇವರ ಜನಸಂಖ್ಯೆ 45 ಲಕ್ಷದಷ್ಟಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ.
Also Read : ರೈತರ ಸಾಲ ಮನ್ನಾ ಘೋಷಿಸಿದ ಸಿಎಂ ವಿಜಯ್ : ಯಾರಿಗೆ ಎಷ್ಟು ಲಾಭ, ಕರ್ನಾಟಕದಲ್ಲೂ ಮನ್ನಾ ಆಗುತ್ತಾ
ಅಲ್ಲದೇ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು 32 ರಿಂದ 40 ಪ್ರತಿಶತಕ್ಕೆ ಏರಿಕೆ ಮಾಡುವಂತೆ ಈ ವರದಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇನ್ನು ಈ ವರದಿ ಸ್ವೀಕಾರದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಈ ವರದಿಯು ಮಾರ್ಗದರ್ಶಿಯಾಗಲಿ ಎಂದಿದ್ದಾರೆ.
Final caste census report submitted to CM Muslims top the states population Veerashaiva-Lingayats second



