ಶಾಲೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ : ಸರಕಾರಕ್ಕೆ ಸುನಿಲ್‌ ಕುಮಾರ್‌ ಮನವಿ

Ganesh Chaturthi : ಬೆಂಗಳೂರು : ಸರಕಾರಿ ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಸರಕಾರಕ್ಕೆ ಕಾರ್ಕಳ ಶಾಸಕರಾದ ವಿ.ಸುನಿಲ್‌ ಕುಮಾರ್‌ ಅವರು ಮನವಿ ಮಾಡಿದ್ದಾರೆ.

ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳ ಆವರಣದಲ್ಲಿಯೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ಆದರೆ ಶಿಕ್ಷಣ ಇಲಾಖೆ ಇದೀಗ ಅವಕಾಶ ನಿರಾಕರಿಸುತ್ತಿದೆ ಎಂದಿದ್ದಾರೆ.

ಸರಕಾರಿ ಶಾಲೆಯ ಅವರಣದಲ್ಲಿ ಶೈಕ್ಷಣಿಕ ಹೊರತು ಪಡಿಸಿ, ಯಾವುದೇ ಚಟುವಟಿಕೆಯನ್ನು ನಡೆಸಲು ಅವಕಾಶವಿಲ್ಲ ಎಂದು ಶಿಕ್ಷಣ ಇಲಾಖೆ ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದೆ.

ಇದನ್ನೂ ಓದಿ : ಗಣೇಶ ಚತುರ್ಥಿ : ಡಿಜೆ ನಿಷೇಧ, ಮಣ್ಣಿನ ಗಣಪನಿಗಷ್ಟೇ ಅವಕಾಶ

ಇದೇ ಕಾರಣದಿಂದಲೇ ಬಿಇಓಗಳು ಸರಕಾರಿ ಶಾಲೆ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ವಿಧಾನ ಮಂಡಲ ಅಧಿವೇಶನ ಮುಗಿಯುವ ಮೊದಲೇ ಈ ಕುರಿತು ಅನುಮತಿ ನೀಡಿ ಆದೇಶ ಹೊರಡಿಸಬೇಕು ಎಂದಿದ್ದಾರೆ.

ಈ ಕುರಿತು ಸ್ಪೀಕರ್‌ ಯು.ಟಿ.ಖಾದರ್‌ ಅವರು ಮಾತನಾಡಿ, ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಿಗೆ ಅಧಿಕಾರವಿದೆ ಎಂದಿದ್ದಾರೆ.

ganesh chaturthi: ಕರ್ನಾಟಕ ಸರಕಾರ ನೀಡುತ್ತಾ ಅವಕಾಶ ?

ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಸರಕಾರಿ ಶಾಲೆಗಳ ಆವರಣದಲ್ಲಿಯೇ ಗಣೇಶೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಇದೀಗ ಶಿಕ್ಷಣ ಇಲಾಖೆ ಅವಕಾಶ ನಿರಾಕರಿಸಿದೆ. ಆದರೆ ಕರ್ನಾಟಕ ಸರಕಾರ ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಎಸ್‌ಸಿ, ಎಸ್‌ಟಿ ಹಣ ಬಳಕೆ : ಸದನದಲ್ಲಿ ಕೋಲಾಹಲ

ganesh chaturthi Allow installation of Ganesh idols in schools : Sunil Kumar appeals to the government

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories