ಮಹಿಳೆಯರಿಗೆ 3 ಕೋಟಿ ರೂಪಾಯಿ ಪಂಗನಾಮ : ವಂಚಕಿಗೆ ನಡುರಸ್ತೆಯಲ್ಲೇ ಗೂಸಾ

Hassan Tailor Scam Lady Hemavathi : ಹಾಸನ : ಮನೆ ಖರೀದಿ, ಮಗನಿಗೆ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆಂದು ಮಹಿಳೆಯರಿಂದ ಬರೋಬ್ಬರಿ 3 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೋರ್ವಳಿಗೆ ಗ್ರಾಹಕರು ಥಳಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಅರಳಿಪೇಟೆ ರಸ್ತೆಯಲ್ಲಿ ಹಲವು ವರ್ಷಗಳಿಂದಲೂ ಜ್ಯೋತಿ ಡ್ರೆಸ್ ಮೇಕರ್ಸ್ ಶಾಪ್ ನಡೆಸುತ್ತಿದ್ದ ಹೇಮಾವತಿ ಎಂಬವರೇ ಕೋಟ್ಯಾಂತರ ರೂಪಾಯಿ ವಂಚಿಸಿದ ವಂಚಕಿ.
ಮನೆ, ಮಗನ ವಿದ್ಯಾಭ್ಯಾಸಕ್ಕೆಂದು ಜನರಿಂದ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಡೆದು ವಂಚನೆ ನಡೆಸಿದ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ನಡು ರಸ್ತೆಯಲ್ಲಿಯೇ ಮಹಿಳೆಯನ್ನು ಎಳೆದಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಡ್ರೆಸ್ ಸ್ಟಿಚ್ಚಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ ಮಹಿಳಾ ಗ್ರಾಹಕರನ್ನೇ ಟಾರ್ಗೇಟ್ ಮಾಡುತ್ತಿದ್ದ ಈ ವಂಚಕಿ, ಬಣ್ಣ ಬಣ್ಣದ ಮಾತುಗಳನ್ನಾಗಿ ಪ್ರತಿಯೊಬ್ಬರಿಂದಲೂ ಲಕ್ಷಾಂತರ ರೂಪಾಯಿ ಸಾಲ ಪಡೆದು ಕೊಂಡಿದ್ದರು.
ಮಗನನ್ನು ವಿದೇಶದಲ್ಲಿ ಇಂಜಿನಿಯರಿಂಗ್ ಓದಿಸಬೇಕು, ಹಾಸನದಲ್ಲಿ ಒಂದು ಕೋಟಿ ರೂಪಾಯಿ ಮನೆ ಖರೀದಿ ಮಾಡುತ್ತಿದ್ದೇನೆ ಅಂತಾ ಹೇಳಿ ವಂಚಕಿ ಸಾಲ ಪಡೆದಿದ್ದರು.
Also Read : ಹಾಸನ : ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರು : ನಾಲ್ವರಿಗೆ ಗಾಯ
ಹತ್ತಾರು ವರ್ಷಗಳಿಂದಲೂ ಟೈಲರಿಂಗ್ ಶಾಪ್ ನಡೆಸುತ್ತಿದ್ದ ಕಾರಣಕ್ಕೆ ಜನರು ತಮ್ಮ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ನೀಡಿದ್ದರು. ಆದರೆ ಹೇಮಾವತಿ ಸಾಲ ನೀಡಿದವರಿಗೆ ಹಣವನ್ನು ಹಿಂದಿರುಗಿಸದೇ ವಂಚಿಸಿದ್ದರು.
ಇದರಿಂದ ರೊಚ್ಚಿಗೆದ್ದ ಮಹಿಳೆಯರು ಹೇಮಾವತಿಯನ್ನು ನಡು ರಸ್ತೆಯಲ್ಲೇ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುಮಾರು 3 ಕೋಟಿಗೂ ಅಧಿಕ ಹಣವನ್ನು ಸಾಲವಾಗಿ ಪಡೆದಿದ್ದರು. ಈ ಹಣವನ್ನು ಕೊಡಚಾದ್ರಿ ಚಿಟ್ಸ್‌ನಲ್ಲಿ 1 ಕೋಟಿ ರೂಪಾಯಿ ಚೀಟಿಯಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಜನರನ್ನು ನಂಬಿಸಿದ್ದರು.
ಇದೀಗ ಹೇಮಾವತಿಗೆ ಆಕೆಯ ಪತಿ ವಿರೂಪಾಕ್ಷಪ್ಪ ಸಾಥ್ ನೀಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಸದ್ಯ ಮೋಸ ಹೋಗಿರುವ ಮಹಿಳೆಯರು ಹೇಮಾವತಿ ವಿರುದ್ದ ಹಾಸನ ನಗರ ಠಾಣೆ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Hassan Tailor Scam Lady Hemavathi



