ಭಟ್ಕಳಕ್ಕೆ ಅಕ್ರಮ ಗೋ ಸಾಗಾಟ : ಇಬ್ಬರು ಅರೆಸ್ಟ್‌

ಯಲ್ಲಾಪುರ (Yellapur) : ಅಕ್ರಮವಾಗಿ ಬೆಳಗಾವಿಯಿಂದ ಭಟ್ಕಳಕ್ಕೆ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ 6 ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ದಾಳಿಯ ವೇಳೆ ವಾಹನದಲ್ಲಿದ್ದ ಇಬ್ಬರು ಆರೋಪಿತರು ಪರಾರಿಯಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳಗಿನ ಜಾವ ಸುಮಾರು 5:00 ಗಂಟೆಯ ಸುಮಾರಿಗೆ ಕಲಘಟಗಿ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನ ಯಲ್ಲಾಪುರ ಪಟ್ಟಣದ ಮಲಬಾರ್ ಹೊಟೆಲ್ ಎದುರು ಸಾಗುತ್ತಿದ್ದ ವೇಳೆಯಲ್ಲಿ ಅನುಮಾನಗೊಂಡ ಪೊಲೀಸರು ವಾಹನವನ್ನು ತಡೆದಿದ್ದಾರೆ.

ಚಾಲಕ ಹಾಗೂ ಸಹಚಾಲಕ ವಾಹನ ಬಿಟ್ಟು ಎಸ್ಕೇಪ್‌ ಆಗಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಪರವಾನಗಿ ಹೊಂದದೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಆರೋಪಿತರು ಈ ಜಾನುವಾರುಗಳನ್ನು ಹಗ್ಗದಿಂದ ಮಲಗಲು ಸಾಧ್ಯವಾಗದ ರೀತಿಯಲ್ಲಿ ಹಿಂಸಾತ್ಮಕವಾಗಿ ವಾಹನಕ್ಕೆ ಕಟ್ಟಿ ಅತೀ ವೇಗವಾಗಿ ಸಾಗಿಸುತ್ತಿದ್ದರು.

ಜಾನುವಾರುಗಳ ಮೌಲ್ಯ ಸುಮಾರು ₹1,50,000 ಮತ್ತು ಸಾಗಾಟಕ್ಕೆ ಬಳಸಿದ ಬೊಲೆರೊ ವಾಹನದ ಮೌಲ್ಯ ₹2,00,000 ಎಂದು ಅಂದಾಜಿಸಲಾಗಿದ್ದು, ಒಟ್ಟು ₹3,50,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಚಿಕ್ಕಮಗಳೂರು : ತವರು ಮನೆ ಸೇರಿದ ಪತ್ನಿ, ಹತ್ಯೆಗೈದ ಪಾಪಿ ಪತಿ

ಭಟ್ಕಳದ ಬೆಳಕಂಡ ಮುತ್ತಳ್ಳಿಯ ನಿವಾಸಿ, ಚಾಲಕ ರಜ್ಞಾನಿ ಬಾಬಾ ಸಾಬ ಕಚವಿ (36) ಹಾಗೂ ಭಟ್ಕಳದ ನಿವಾಸಿ ಅಲ್ತಾಪ್ ಎಂಬ ಇಬ್ಬರು ಪರಾರಿಯಾಗಿದ್ದಾರೆ. ಈ ವಾಹನದ ಮಾಲೀಕ, ಭಟ್ಕಳದ ಸಿದ್ದಿಕ್ ಸ್ಟ್ರೀಟ್‌ನ ಮಹಮ್ಮದ ಸಿದ್ದಿಕ ಅಬ್ದುಲ್ ಅಮೀರ ಮಜಾರ ಎಂಬುವವರ ವಿರುದ್ಧವೂ ಅಕ್ರಮ ಸಾಗಾಟ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‌ರಕ್ಷಣೆ ಮಾಡಲಾದ ಆರು ಜಾನುವಾರುಗಳನ್ನು ಕರಡೊಳ್ಳು ಗೋವರ್ಧನ ಗೋಶಾಲೆಗೆ ಸಾಗಿಸಲಾಗಿದೆ. ಪರಾರಿಯಾದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ : ಕಾರ್ಕಳ ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಅವರ ಪುತ್ರ ಆತ್ಮಹತ್ಯೆ

Yellapur Illegal cow transport to Bhatkal Two arrested

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories