ಬಕ್ರೀದ್‌ಗೆ ಮುಸ್ಲಿಂ ಸಮುದಾಯದ ಮಹತ್ವದ ನಿರ್ಧಾರ : ಸ್ವಯಂಪ್ರೇರಿತ ಗೋಹತ್ಯೆ ನಿಷೇಧ ಘೋಷಣೆ!
ನಾಳೆ ಮುಸ್ಲಿಮರ ಪವಿತ್ರ ಬಕ್ರೀದ್ ಹಬ್ಬ ನಡೆಯಲಿದೆ. ಆದರೆ ಈ ಬಾರಿ ದೇಶಾದ್ಯಂತ ಮುಸ್ಲಿಮರು ಶಾಂತಿ - ಸೌಹಾರ್ದದ ಬಕ್ರೀದ್ ಹಬ್ಬಕ್ಕೆ ನಿರ್ಧರಿಸಿದ್ದು, ಈ ಬಾರಿ ಗೋ ವಧೆ ಮಾಡದಿರುವ ನಿರ್ಣಯಕ್ಕೆ ಬಂದಿದ್ದಾರೆ. ಮಧ್ಯಪ್ರದೇಶದಿಂದ ಆರಂಭಗೊಂಡ ಈ ಅಭಿಯಾನವು ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ದನ,ಕರು ಹಾಗೂ ಎಮ್ಮೆಗಳನ್ನು ಬಲಿ ಕೊಡದೇ ಬಕ್ರೀದ್ ಹಬ್ಬವನ್ನು ಆಚರಿಸಲು ಮುಸ್ಲಿಂ ಸಂಘಟನೆಗಳು ಮುಂದಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ನಾಳೆ ಮುಸ್ಲಿಮರ ಪವಿತ್ರ ಬಕ್ರೀದ್ ಹಬ್ಬ ನಡೆಯಲಿದೆ. ಆದರೆ ಈ ಬಾರಿ ದೇಶಾದ್ಯಂತ ಮುಸ್ಲಿಮರು ಶಾಂತಿ – ಸೌಹಾರ್ದದ ಬಕ್ರೀದ್ ಹಬ್ಬಕ್ಕೆ ನಿರ್ಧರಿಸಿದ್ದು, ಈ ಬಾರಿ ಗೋ ವಧೆ ಮಾಡದಿರುವ ನಿರ್ಣಯಕ್ಕೆ ಬಂದಿದ್ದಾರೆ. ಮಧ್ಯಪ್ರದೇಶದಿಂದ ಆರಂಭಗೊಂಡ ಈ ಅಭಿಯಾನವು ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ದನ,ಕರು ಹಾಗೂ ಎಮ್ಮೆಗಳನ್ನು ಬಲಿ ಕೊಡದೇ ಬಕ್ರೀದ್ ಹಬ್ಬವನ್ನು ಆಚರಿಸಲು ಮುಸ್ಲಿಂ ಸಂಘಟನೆಗಳು ಮುಂದಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಹೌದು..! ಹಾಸನದಲ್ಲಿ ನಿನ್ನೆ ಮುಸ್ಲಿಂ ಸಂಘಟನೆಗಳು ಈ ಬಾರಿ ಬಕ್ರೀದ್ ಹಬ್ಬದಂದು ಜಾನುವಾರುಗಳನ್ನು ಕಡಿಯುವುದಿಲ್ಲ ಎಂದು ಕರೆ ನೀಡಿವೆ. ಅಂತೆಯೇ ಹಾಸನದಲ್ಲಿ ಈ ಬಾರಿ ಯಾವುದೇ ಮುಸ್ಲಿಮರು ಹಸುಗಳನ್ನು ಖರೀದಿ ಮಾಡುತ್ತಿಲ್ಲ. ಇದರಿಂದ ಸಂತೆಗೆ ಹಸುಗಳನ್ನು ಮಾರಾಟಕ್ಕೆ ರೈತರು ಹಿನ್ನೆಡೆ ಅನುಭವಿಸಿದ್ದು ಹಿಂದೂ ಪರ ಸಂಘಟನೆಗಳ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
Also Read: RBI ಹೆಸರಿನಲ್ಲಿ ನಕಲಿ ಇಮೇಲ್ ಮತ್ತು ಮೆಸೇಜ್‌ಗಳು ವೈರಲ್! ಹೊಸ ಮೋಸದ ಜಾಲ
ಮುಸ್ಲಿಂ ಸಮುದಾಯದವರು ಈ ರೀತಿಯ ನಿರ್ಧಾರಕ್ಕೆ ಬಂದರೆ ನಮ್ಮ ಹಸುಗಳನ್ನು ಕೊಳ್ಳುವವರು ಯಾರು ? ಹಿಂದೂ ಪರ ಸಂಘಟನೆಯವರೇ ಹಸುಗಳನ್ನು ಖರೀದಿ ಮಾಡಿ ನಮಗೆ ಹಣ ನೀಡಲಿ. ಬಿತ್ತನೆ ಬೀಜ ಖರೀದಿಗೆ, ಮಕ್ಕಳವಿದ್ಯಾಭ್ಯಾಸಕ್ಕೆ , ಮನೆ ನಿರ್ವಹಣೆಗೆ ನಾವು ಹಣ ಎಲ್ಲಿಂದ ತರಬೇಕು ? ಹೀಗೆ ಮುಂದುವರಿದರೆ ನಾವು ಜಾನುವಾರುಗಳ ಸಮೇತ ಡಿಸಿ ಕಚೇರಿ ಎದುರು ಧರಣಿ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Muslim communitys important decision for Bakrid Announcement of ban on voluntary cow slaughter



