ನೀಟ್ ಪರೀಕ್ಷೆ ಭೀತಿ ಅಲ್ಲವೇ?: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
ನೀಟ್ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಕಲಬುರಗಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ದೊರಕಿದೆ. ಪೊಲೀಸರ ತನಿಖೆಯ ಸಂದರ್ಭದಲ್ಲಿ ಈಕೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೇ ಅನುತ್ತೀರ್ಣರಾಗಿದ್ದಳು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.
ಕಲಬುರಗಿ: ನೀಟ್ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಕಲಬುರಗಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ದೊರಕಿದೆ. ಪೊಲೀಸರ ತನಿಖೆಯ ಸಂದರ್ಭದಲ್ಲಿ ಈಕೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೇ ಅನುತ್ತೀರ್ಣರಾಗಿದ್ದಳು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಬಂದಾಗ ಭಾಗ್ಯಶ್ರೀ ಭೌತಶಾಸ್ತ್ರ ಹಾಗೂ ಗಣಿತ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಳು. ಆದರೆ ಪೋಷಕರು ಬಯ್ಯಬಹುದು ಎಂಬ ಭಯಕ್ಕೆ ಈಕೆ ತಾನು 92 ಪರ್ಸೆಂಟ್ ಅಂಕಗಳಿಸಿದ್ದೇನೆ ಎಂದು ಸುಳ್ಳು ಹೇಳಿದ್ದಳು. ಬಳಿಕ ಎಲ್ಲರಂತೆಯೇ ನೀಟ್ ಪರೀಕ್ಷೆಯನ್ನೂ ಬರೆದಿದ್ದಳು. ದ್ವಿತೀಯ ಪಿಯುಸಿ – 2 ಪರೀಕ್ಷೆಯಲ್ಲಿ ಈ 2 ವಿಷಯಗಳನ್ನು ಪಾಸ್ ಮಾಡಿಕೊಂಡರಾಯಿತು ಎಂದು ಪೋಷಕರ ಬಳಿ ನಿಜ ಫಲೊತಾಂಶವನ್ನು ಮುಚ್ಚಿಟ್ಟಿದ್ದಳು.
ಆದರೆ ಮರು ಪರೀಕ್ಷೆಯಲ್ಲಿ ಭೌತಶಾಸ್ತ್ರದಲ್ಲಿ 51 ಅಂಕಗಳಿಸಿ ತೇರ್ಗಡೆ ಹೊಂದಿದ್ದ ಭಾಗ್ಯಶ್ರೀ ಗಣಿತ ಪರೀಕ್ಷೆಯಲ್ಲಿ ಮತ್ತೆ ಫೇಲ್ ಆಗಿದ್ದಳು . ಈ ವಿಚಾರ ಮನೆಯಲ್ಲಿ ತಿಳಿದರೆ ಪೋಷಕರು ಬೈಯ್ಯಬಹುದು ಎಂಬ ಆತಂಕದಲ್ಲಿ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತನಿಖೆಯಲ್ಲಿ ಬಟಾಬಯಲಾಗಿದೆ.
ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೇ ಫೇಲ್ ಆಗಿದ್ದಾಳೆ ಎಂಬ ಅರಿವಿಲ್ಲದ ಆಕೆಯ ಪೋಷಕರು, ಆಕೆ ನೀಟ್ ಪರೀಕ್ಷೆಯಿಂದಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು. ಈ ಸಂಬಂಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ದೂರಿನಲ್ಲಿ ‘‘ ನಮ್ಮ ಪುತ್ರಿ ಆತ್ಮಹತ್ಯೆಗೆ ನಾವು ಯಾರನ್ನೂ ದೂರುವುದಿಲ್ಲ’’ ಎಂದು ಹೇಳಿದ್ದರು.
Also Read: ರಾಜ್ಯದಲ್ಲಿ ಇಂದಿನಿಂದ 5 ದಿನ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ
ಆದರೆ ಇದೀಗ ಭಾಗ್ಯಶ್ರೀ ಸಾವಿನ ಹಿಂದಿನ ಅಸಲಿ ಸತ್ಯ ಬಯಲಾಗಿದೆ. ತಂದೆ – ತಾಯಿಯಲ್ಲಿ ಫಲಿತಾಂಶದ ಸತ್ಯ ಮುಚ್ಚಿಡಲು ಹೋಗಿ ಇನ್ನು ಬಾಳಿ ಬದುಕಬೇಕಿದ್ದ ವಿದ್ಯಾರ್ಥಿನಿ ಈ ದುಡುಕಿನ ನಿರ್ಧಾರ ಕೈಗೊಂಡಿದ್ದು ನಿಜಕ್ಕೂ ದುರಂತವೇ ಸರಿ.
NEET exam a fear New twist in student suicide case



